ಮಹಿಳೆಯರು ಸನ್ನೆಯ ಮೂಲಕ ಏನೆಲ್ಲಾ ಹೇಳುವ ಪ್ರಯತ್ನ ಮಾಡುತ್ತಾರೆ ಗೊತ್ತೇ?? ಆಂಗಿಕ ಭಾಷೆ ಅರ್ಥವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪುರಾತನಕಾಲದಿಂದಲೂ ಕೂಡ ಯಾವುದೇ ಜೀವಿ ಅಥವಾ ಯಾವುದೇ ವಸ್ತುವನ್ನು ಕೂಡ ಅರ್ಥ ಮಾಡಿಕೊಳ್ಳಬಹುದು ಆದರೆ ಹೆಣ್ಣನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ ಮಹಿಳೆಯರ ಕೆಲವೊಂದು ಆಂಗಿಕ ಸನ್ನೆಗಳನ್ನು ನಾವು ಅರ್ಥಮಾಡಿಕೊಂಡರೆ ಅವರು ಏನನ್ನು ಹೇಳಲು ಬಯಸುತ್ತಿದ್ದಾರೆ ಅವರು ಯಾವ ಮನಸ್ಥಿತಿಯಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋದು ಅತ್ಯಂತ ಸುಲಭ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ಮಹಿಳೆಯರು ಯಾವ ಸನ್ನೆಯನ್ನು ಮಾಡಿದರೆ ಏನು ಅರ್ಥ ಎಂಬುದನ್ನು ತಿಳಿಯೋಣ ಬನ್ನಿ.
ಮೊದಲನೇದಾಗಿ; ಒಂದು ವೇಳೆ ಆಕೆ ಮುದುಡಿ ಸಂಕುಚಿತವಾಗಿ ಕುಳಿತುಕೊಂಡಿದ್ದಾಳೆ ಎಂದರೆ ಆಕೆ ಶರಣಾಗಿದ್ದಾಳೆ ಎಂಬ ಮನಸ್ಥಿತಿಯನ್ನು ತೋರಿಸುತ್ತದೆ. ಒಂದು ವೇಳೆ ನೇರವಾಗಿ ಮೈಕೈ ಸೆಟೆದು ಕುಳಿತುಕೊಂಡಿದ್ದಾರೆ ಎಂದರೆ ಆಕೆ ಆ ಪರಿಸ್ಥಿತಿಯಲ್ಲಿ ಗೌರವ ಹಾಗೂ ನಿಯಂತ್ರಣವನ್ನು ಬಯಸಿದ್ದಾಳೆ ಅಥವಾ ಹೊಂದಿದ್ದಾಳೆ ಎಂದರ್ಥ. ಎರಡನೇದಾಗಿ; ಹಲವಾರು ಬಾರಿ ಮಹಿಳೆಯರು ಮಾತನಾಡುತ್ತಿರಬೇಕಾದರೆ ತಲೆಕೂದಲನ್ನು ಮುಟ್ಟುವುದು ಕುತ್ತಿಗೆಯನ್ನು ಮುಟ್ಟುವುದನ್ನು ಮಾಡುತ್ತಾರೆ ಪುರುಷರು ಇದನ್ನು ಆಕೆ ತನ್ನತ್ತ ಆಕರ್ಷಿತರಾಗುತ್ತಿದ್ದಾಳೆ ಎಂಬುದಾಗಿ ಅಂದುಕೊಳ್ಳುತ್ತಾರೆ. ಆದರೆ ಆಕೆ ಆ ಸಂದರ್ಭದಲ್ಲಿ ಭ’ಯವನ್ನು ಹೊಂದಿರುತ್ತಾಳೆ ಅಥವಾ ವಿಚಲಿತಳಾಗಿರುತ್ತಾಳೆ ಎಂಬುದಾಗಿದೆ. ಈ ಸಂದರ್ಭದಲ್ಲಿ ಆಕೆಯನ್ನು ನೀವು ಪರಿಸ್ಥಿತಿಗೆ ಕಂಪರ್ಟ್ ಮಾಡುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ಮೂರನೇದಾಗಿ; ನಗುವುದು ಸಾಮಾನ್ಯ ಆಂಗಿಕ ಭಾಷೆಯಾಗಿದೆ. ಆದರೆ ಒಂದು ವೇಳೆ ಹುಡುಗಿ ಹೊತ್ತಲ್ಲದ ಹೊತ್ತಿನಲ್ಲಿ ಅಥವಾ ಪರಿಸ್ಥಿತಿಗೆ ವಿರುದ್ಧವಾಗಿ ನಗುತ್ತಿದ್ದಾಳೆ ಎಂದರೆ ಅದು ಸ್ನೇಹ ಪೂರಕವಲ್ಲ ಬದಲಾಗಿ ಆಕೆ ನರ್ವಸ್ ಆಗಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ನಾಲ್ಕನೇದಾಗಿ; ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ತಲೆಯನ್ನು ಆಡಿಸುತ್ತಾರೆ. ಇದರ ಅರ್ಥ ಆಕೆ ಕೇವಲ ಆತನ ಮಾತನ್ನು ಕೇಳುತ್ತಿದ್ದಾಳೆ ಎಂಬರ್ಥವಲ್ಲ ಬದಲಾಗಿ ಅದನ್ನು ಒಪ್ಪಿಕೊಂಡಿದ್ದಾಳೆ ಎಂಬ ಅರ್ಥವೂ ಕೂಡ ಆಗಿದೆ.
ಐದನೇನೇದಾಗಿ; ಮಹಿಳೆಯರು ಪುರುಷರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದಾಗ ಕೆಲವೊಮ್ಮೆ ಮುಂದೆ ಬಾಗುತ್ತಾರೆ. ಇದನ್ನು ಹುಡುಗರು ಮಹಿಳೆ ತಮ್ಮೊಂದಿಗೆ ಫ್ಲರ್ಟ್ ಮಾಡುತ್ತಿದ್ದಾಳೆ ಎಂಬುದಾಗಿ ಭಾವಿಸುತ್ತಾರೆ. ಆದರೆ ನಿಜವಾಗಿ ಆಕೆಯ ಸಂಭಾಷಣೆಯಲ್ಲಿ ಗಂಭೀರವಾಗಿದ್ದರೆ ಇಂತಹ ಮುಂದೆ ಬಾಗುವ ಆಂಗಿಕ ಭಾಷೆಯನ್ನು ಮಾಡುತ್ತಾರೆ. ಆರನೇದಾಗಿ; ಒಂದು ವೇಳೆ ಮಹಿಳೆ ಮಾತನಾಡುತ್ತಿರಬೇಕಾದರೆ ಕೈಸನ್ನೆ ಏನು ಮಾಡುತ್ತಿದ್ದಾರೆ ಆಕೆಯ ಆ ವಿಚಾರದಲ್ಲಿ ಭಾವುಕರಾಗಿದ್ದಾಳೆ ಎಂಬುದಾಗಿ ಅರ್ಥ. ಒಂದು ವೇಳೆ ಭುಜಕ್ಕಿಂತ ಕೈಮೇಲೆ ಹೋಗುತ್ತಿದ್ದಾರೆ ಆಕೆ ಅಗತ್ಯಕ್ಕೆ ಮೀರಿದ ಭಾವಪರವಶತೆಯನ್ನು ಹೊಂದಿದ್ದಾಳೆ ಎಂಬುದಾಗಿ ಅರ್ಥವಾಗಿದೆ.
ಏಳನೇದಾಗಿ; ಹ್ಯಾಂಡ್ ಶೇಕ್ ಮಾಡುವಾಗ ಹುಡುಗಿಯರ ಕೈಹಿಡಿದ ಎನ್ನುವುದು ಸಡಿಲವಾಗಿದ್ದರೆ ಆಕೆ ನಾಚಿಕೆ ಸ್ವಭಾವ ದವಳು ಎಂಬುದಾಗಿ ಅರ್ಥ. ಆಕೆಯ ಕೈ ಹಿಡಿ ಬಿಗಿಯಾಗಿದ್ದಾರೆ ಆಕೆ ಗಂಭೀರ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಾಗಿ ಹೊಂದಿದವಳು ಎಂಬುದಾಗಿ ಅರ್ಥವಾಗಿದೆ. ಎಂಟನೇದಾಗಿ; ಒಂದು ವೇಳೆ ಮಹಿಳೆ ಪದೇಪದೇ ಕಣ್ಣು ತಿರುಗಿಸುವುದನ್ನು ಮಾಡುತ್ತಿದ್ದರೆ ಆಕೆ ತಾಳ್ಮೆ ಕೆಟ್ಟಿದ್ದಾಳೆ ಅಥವಾ ಕಿರಿಕಿರಿಗೆ ಒಳಗಾಗಿದ್ದಾಳೆ ಎಂಬುದಾಗಿ ಅರ್ಥವಾಗಿದೆ.

ಕೊನೆಯದಾಗಿ; ಒಂದು ವೇಳೆ ಮಹಿಳೆ ತುಟಿಯನ್ನು ಕಚ್ಚುತ್ತಿದ್ದಾರೆ ಪುರುಷರು ಆಕೆ ತಮ್ಮ ಕಡೆಗೆ ಇಂಟರೆಸ್ಟ್ ತೋರಿಸುತ್ತಿದ್ದಾಳೆ ಎಂಬುದಾಗಿ ಅಂದುಕೊಳ್ಳುತ್ತಾರೆ. ಆದರೆ ಉದ್ವೇಗಕ್ಕೆ ಹಾಗೂ ಚಿಂತೆಯ ಒತ್ತಡದಲ್ಲಿ ಇದ್ದಾಗಲೂ ಕೂಡ ಮಹಿಳೆಯರು ಇಂತಹ ಕೆಲಸವನ್ನು ಮಾಡುತ್ತಾರೆ. ಒಂದುವೇಳೆ ತುಟಿ ಕಚ್ಚುವುದರ ಜೊತೆಗೆ ನಿಮ್ಮ ಕಣ್ಣಿಗೆ ಕಣ್ಣನ್ನು ಜೋಡಿಸಿದರೆ ಮಾತ್ರ ಆಕೆ ನಿಮ್ಮ ಕುರಿತಂತೆ ಆಸಕ್ತಿಯನ್ನು ಹೊಂದಿದ್ದಾರೆ ಎಂಬುದಾಗಿ ಅರ್ಥವಾಗುತ್ತದೆ. ಹೀಗಾಗಿ ಎರಡು ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಇವೆ ಆ ಮಹಿಳೆಯರು ಆಂಗಿಕ ಭಾಷೆಯ ವಿವರಣೆಗಳು.