Kannada Astrology: ಜೀವನ ಪೂರ್ತಿ ನಿಮಗೆ ಲಕ್ಷ್ಮಿ ಆಶೀರ್ವಾದ ಬೇಕು ಎಂದರೆ, ಈ ಚಿಕ್ಕ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡು ಶ್ರೀಮಂತರಾಗಿ. ಯಾವುದು ಗೊತ್ತೇ?

149

Kannada Astrology: ಎಲ್ಲರಿಗೂ ಕೂಡ ತಾವು ಶ್ರೀಮಂತರಾಗಿರಬೇಕು, ಉತ್ತಮ ಜೀವನ ನಡೆಸಬೇಕು, ನಮ್ಮ ಮನೆಯಲ್ಲಿ ಸದಾ ಹಣಕಾಸಿನ ಸೌಲಭ್ಯ ಇರಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹೆಚ್ಚಿನ ಸಂಪಾದನೆ ಮಾಡಬೇಕು, ಹಣ ಕೂಡಿಡಬೇಕು ಎನ್ನುವುದು ಎಲ್ಲರ ಕನಸು. ಹೇಗೆ ಜ್ಯೋತಿಷ್ಯ ಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆಯೋ ಹಾಗೆಯೇ ವಾಸ್ತು ಶಾಸ್ತ್ರಕ್ಕೂ ಕೂಡ ತನ್ನದೇ ಆದ ಪ್ರಾಮುಖ್ಯತೆ ಇದೆ. ಹೀಗಾಗಿ ವಾಸ್ತ ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದಾಗಿ ದೇವಿ ಲಕ್ಷ್ಮಿಯನ್ನು ಆಕರ್ಷಿಸಬಹುದು. ಆ ಮೂಲಕ ಲಕ್ಷ್ಮಿ ಮನೆಯಲ್ಲಿಯೇ ನೆಲೆಸಿ ಹೆಚ್ಚಿನ ಹಣ, ಸಂಪತ್ತು ಮನೆಯಲ್ಲಿ ತುಂಬಿರುವಂತೆ ನೋಡಿಕೊಳ್ಳುತ್ತಾಳೆ. ಹಾಗಿದ್ದರೆ ಮನೆಯಲ್ಲಿ ವಾಸ್ತುವಿನ ಪ್ರಕಾರ ಯಾವೆಲ್ಲ ವಸ್ತುಗಳನ್ನು ಇಡುವುದು ಒಳ್ಳೆಯದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ದೇವಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಅನೇಕ ಮಾರ್ಗಗಳಿವೆ ಎಂದೇ ಹೇಳಬಹುದು. ಸಂಪತ್ತು ಮತ್ತು ಐಶ್ವರ್ಯದ ದೇವತೆಯಾದ ಲಕ್ಷ್ಮಿಯನ್ನು ಆಕರ್ಷಿಸಲು ಅನೇಕ ಮಾರ್ಗೋಪಾಯಗಳಿವೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಬೆಳ್ಳಿ, ಲೋಹ, ಕಂಚು ಅಥವಾ ಇತ್ತಾಳೆಯ ಆಮೆಯ ವಿಗ್ರಹ ಇಡುವುದು ಒಳ್ಳೆಯದು. ಇದರಿಂದಾಗಿ ಲಕ್ಷ್ಮಿಯ ಅನುಗ್ರಹ ಸಿಗುವುದರ ಜೊತೆಗೆ ಆರ್ಥಿಕವಾಗಿ ಸದೃಢರಾಗುತ್ತೀರಿ. ಮನೆಯಲ್ಲಿ ಸ್ಪಟಿಕದ ಪಿರಮಿಡ್ ಇಡುವುದು ಸೂಕ್ತ. ಇದರಿಂದಾಗಿ ಹಣಕಾಸಿನ ಯಾವುದೇ ತೊಂದರೆ ಎದುರಾಗುವುದಿಲ್ಲ. ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿ ಸುಧಾರಣೆಗೊಳ್ಳುತ್ತದೆ. ಇದನ್ನು ಓದಿ..Kannada Astrology: ತಿಂಗಳ ಪೂರ್ತಿ ತಿನ್ನಿ, ಆದರೆ ಈ 5 ದಿನ ಮಾತ್ರ ಈರುಳ್ಳಿ-ಬೆಳ್ಳುಳ್ಳಿ ಮುಟ್ಟೋಕೆ ಹೋಗ್ಬೇಡಿ, ಲಕ್ಷ್ಮಿ ಆಶೀರ್ವಾದ ನೀಡಿ ಶ್ರೀಮಂರಾಗುತ್ತೀರಿ.

ಇನ್ನು ಮತ್ತೊಂದು ವಾಸ್ತುಶಾಸ್ತ್ರದ ವಿಧಾನವೆಂದರೆ 11 ಗೋಮತಿ ಚಕ್ರಗಳನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ಸೂಕ್ತವಾದ ಜಾಗದಲ್ಲಿ ಇರಿಸಬೇಕು ಅಥವಾ ಹಣಕಾಸು ಇಡುವ ಜಾಗದಲ್ಲಿ ಈ ಗೋಮತಿ ಚಕ್ರಗಳನ್ನು ಇಡುವುದರಿಂದಾಗಿ ದೇವಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಕಮಲ ಗಟ್ಟದ ಮಾಲೆಯನ್ನು ಮನೆಯಲ್ಲಿರಿಸಿಕೊಳ್ಳುವುದು ಅತ್ಯುತ್ತಮ ಉಪಾಯವಾಗಿದೆ. ಈ ಮೂಲಕ ದೇವಿ ಲಕ್ಷ್ಮಿಯನ್ನು ಆಕರ್ಷಿಸಬಹುದು. ವಾಸ್ತು ಹೇಳುವಂತೆ ಮನೆಯಲ್ಲಿ ಚಿಕ್ಕ ತೆಂಗಿನಕಾಯಿ ಇರಿಸುವುದರಿಂದಾಗಿಯೂ ಕೂಡ ಹಣಕಾಸಿನ ತಾಪತ್ರಯವನ್ನು ನಿವಾರಿಸಬಹುದು. ಈ ರೀತಿಯ ವಾಸ್ತುಶಾಸ್ತ್ರದ ಕೆಲವು ಉಪಾಯಗಳನ್ನು ಮಾಡುವುದರಿಂದಾಗಿ ಹಣಕಾಸಿನ ತೊಂದರೆಗಳಿಂದ ಪಾರಾಗುವುದರ ಜೊತೆಗೆ ದೇವಿ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗಿ, ಆರ್ಥಿಕವಾಗಿ ಉತ್ತಮ ಜೀವನ ನಡೆಸಬಹುದಾಗಿದೆ. ಇದನ್ನು ಓದಿ.. Kannada Astrology: ಕೆಟ್ಟ ದೃಷ್ಟಿ, ಸಾಲ ಭಾದೆ, ಮದುವೆಯಲ್ಲಿ ತೊಂದರೆ ಇದ್ದರೇ, ಮನೆಯಲ್ಲಿಯೇ ಅರಿಶಿನ ತೆಗೆದುಕೊಂಡು ಈ ಚಿಕ್ಕ ಕೆಲಸ ಮಾಡಿ ಸಾಕು. ಎಲ್ಲ ನಿವಾರಣೆ ಖಚಿತ.