Kannada Astrology: ತಿಂಗಳ ಪೂರ್ತಿ ತಿನ್ನಿ, ಆದರೆ ಈ 5 ದಿನ ಮಾತ್ರ ಈರುಳ್ಳಿ-ಬೆಳ್ಳುಳ್ಳಿ ಮುಟ್ಟೋಕೆ ಹೋಗ್ಬೇಡಿ, ಲಕ್ಷ್ಮಿ ಆಶೀರ್ವಾದ ನೀಡಿ ಶ್ರೀಮಂರಾಗುತ್ತೀರಿ.

61

Kannada Astrology: ನಮ್ಮ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳು ಅನೇಕ ತಿಳುವಳಿಕೆಗಳನ್ನು ನಮಗೆ ನೀಡುತ್ತವೆ. ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಬದುಕಬೇಕು, ಯಾವುದನ್ನು ಆಚರಿಸಬೇಕು, ಯಾವುದನ್ನು ನಿಯಂತ್ರಿಸಬೇಕು ಎಂಬುದು ಸೇರಿದಂತೆ ಹಲವಾರು ವಿಚಾರಗಳ ಕುರಿತು ನಮ್ಮ ಧಾರ್ಮಿಕ ನಂಬಿಕೆಗಳು ತಿಳಿಸಿಕೊಡುತ್ತದೆ. ನಮ್ಮ ಹಿರಿಯರು ಮಾಡಿದ ಈ ಶಾಸ್ತ್ರಗಳು ನಮಗೆ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುತ್ತವೆ. ಅಲ್ಲದೆ ನಮ್ಮ ಹಿರಿಯರು ಹಾಕಿಕೊಟ್ಟ ಈ ಆಚರಣೆಗಳನ್ನು ಪಾಲಿಸುವುದರಿಂದಾಗಿ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಇದೇ ರೀತಿಯಲ್ಲಿ ತಿಂಗಳ ಐದು ವಿಶೇಷ ದಿನಗಳಂದು ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತ್ಯಜಿಸುವುದರಿಂದಾಗಿ ದೇವಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ ಅನೇಕ ಶುಭಫಲಗಳನ್ನು ಪಡೆಯಬಹುದಾಗಿದೆ. ಅಂದ ಹಾಗೆ ತಿಂಗಳಲ್ಲಿ ಯಾವ ಯಾವ ದಿನಗಳಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಸೇವನೆ ಮಾಡಬಾರದು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಪ್ರತಿ ತಿಂಗಳಿಗೆ ಒಮ್ಮೆ ಅಮಾವಾಸ್ಯೆಯ ದಿನ ಬರುತ್ತದೆ. ಇದು ನಮ್ಮ ಪೂರ್ವಜರಿಗೆ, ಪಿತೃಗಳಿಗೆ ಸಂಬಂಧಿಸಿದೆ. ಈ ದಿನದಂದು ಪಿತೃ ದಾನ, ಪಿಂಡ ದಾನ ಮಾಡಲಾಗುತ್ತದೆ. ಜೊತೆಗೆ ಶ್ರಾದ್ಧ ದಂತಹ ಕಾರ್ಯಗಳನ್ನು ಸಹ ಮಾಡುತ್ತಾರೆ. ಹೀಗಾಗಿ ಈ ವೇಳೆ ಈರುಳ್ಳಿ ಬೆಳ್ಳುಳ್ಳಿಯನ್ನು ತಿನ್ನಬಾರದು. ಜ್ಯೋತಿಷ್ಯ ಹೇಳುವಂತೆ ಅಮಾವಾಸ್ಯೆಯ ಹಾಗೆ ಹುಣ್ಣಿಮೆಗೂ ಕೂಡ ವಿಶೇಷ ಮಹತ್ವವಿದೆ. ಹುಣ್ಣಿಮೆ ಚಂದ್ರನಿಗೆ ಸಂಬಂಧಿಸಿದ ದಿನವಾಗಿದೆ. ಚಂದ್ರನನ್ನು ಮಹಾಲಕ್ಷ್ಮಿಯ ಸಹೋದರ ಎಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಈ ದಿನದಂದು ನಮ್ಮ ಆಹಾರದಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿ ಇಲ್ಲದಂತೆ ನೋಡಿಕೊಳ್ಳುವುದು ಉತ್ತಮ. ಹೀಗೆ ಮಾಡುವುದರಿಂದಾಗಿ ದೇವಿ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಇದನ್ನು ಓದಿ..Kannada Astrology: ನಿಮ್ಮ ಅದೃಷ್ಟವೇ ಬದಲಾಗಿ ಹೋಗಬೇಕು ಎಂದರೆ, ಜಸ್ಟ್ 5 ವಸ್ತುಗಳಲ್ಲಿ ಒಂದನ್ನು ನಿಮ್ಮ ಮನೆ ಬಾಗಿಲ ಬಳಿ ಇಡೀ. ಸಾಕು.

ಏಕಾದಶಿ ವ್ರತ, ಉಪವಾಸ ಇಂತಹ ಪೂಜೆಗಳಿಗೆ ನಮ್ಮ ಧಾರ್ಮಿಕ ನಂಬಿಕೆಗಳ ಅನುಸಾರ ವಿಶೇಷ ಮಹತ್ವವನ್ನು ನೀಡಲಾಗಿದೆ. ಇದು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ಆಚರಣೆಯಾಗಿದೆ. ಈ ದಿನ ನೀವು ಉಪವಾಸ ಕೈಗೊಳ್ಳದಿದ್ದರೂ ಪರವಾಗಿಲ್ಲ ಆದರೆ ಯಾವುದೇ ಕಾರಣಕ್ಕೂ ನಿಮ್ಮ ಆಹಾರದಲ್ಲಿ ಈರುಳ್ಳಿ ಬೆಳ್ಳುಳ್ಳಿ ಇರದಂತೆ ನೋಡಿಕೊಳ್ಳಿ. ಪ್ರತಿ ತಿಂಗಳು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಪ್ರಥಮ ಪೂಜಿತ ಎಂದೇ ನಂಬಲಾಗಿರುವ, ನಮ್ಮ ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ನಿವಾರಕ ಗಣೇಶನನ್ನು ಪೂಜಿಸಲಾಗುತ್ತದೆ. ಈ ವೇಳೆಯೂ ಸಹ ಯಾವುದೇ ಕಾರಣಕ್ಕೂ ನಮ್ಮ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇರಕೂಡದು.

ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಹೇಳುವಂತೆ ಪ್ರತಿ ತಿಂಗಳು ತ್ರಯೋದಶಿ ತಿಥಿಯೆಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ವಿಶೇಷ ತಿಥಿಯಂದು ಭಗವಾನ್ ಶಿವನನ್ನು ಆರಾಧಿಸಲಾಗುತ್ತದೆ. ಹಾಗಾಗಿ ಈ ದಿನ ನಮ್ಮ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ತ್ಯಜಿಸಬೇಕು. ಈ ರೀತಿಯಾಗಿ ಈ ಮೇಲಿನ ಐದು ವಿಶೇಷ ದಿನ ಅಥವಾ ತಿಥಿಗಳ ಸಂದರ್ಭದಲ್ಲಿ ನಮ್ಮ ಆಹಾರದಲ್ಲಿ ಈರುಳ್ಳಿ ಬೆಳ್ಳುಳ್ಳಿ ಇರದಂತೆ ನೋಡಿಕೊಳ್ಳುವುದರಿಂದಾಗಿ ವಿವಿಧ ದೇವತೆಗಳ ಅನುಗ್ರಹಕ್ಕೆ ಪಾತ್ರರಾಗುವುದರಿಂದ, ನಮ್ಮ ಜೀವನ ಒಳ್ಳೆಯ ರೀತಿಯಲ್ಲಿ ಬದಲಾಗುತ್ತದೆ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ. ಇದನ್ನು ಓದಿ.. Kannada Astrology: ಧನು ರಾಶಿಗೆ ಪ್ರವೇಶ ಮಾಡುತ್ತಿರುವ ಸೂರ್ಯ ದೇವ: ಇದರಿಂದ ಈ ಮೂರು ರಾಶಿಗಳ ಅದೃಷ್ಟ ಬದಲಾಗಿ, ಮುಟ್ಟಿದೆಲ್ಲಾ ಬಂಗಾರ ಫಿಕ್ಸ್. ಯಾವ ರಾಶಿಗಳಿಗೆ ಗೊತ್ತೇ??