Kannada Astrology: ಕೆಟ್ಟ ದೃಷ್ಟಿ, ಸಾಲ ಭಾದೆ, ಮದುವೆಯಲ್ಲಿ ತೊಂದರೆ ಇದ್ದರೇ, ಮನೆಯಲ್ಲಿಯೇ ಅರಿಶಿನ ತೆಗೆದುಕೊಂಡು ಈ ಚಿಕ್ಕ ಕೆಲಸ ಮಾಡಿ ಸಾಕು. ಎಲ್ಲ ನಿವಾರಣೆ ಖಚಿತ.
Kannada Astrology: ಕೆಲವೊಮ್ಮೆ ನಾವು ಎಷ್ಟೇ ಪರಿಶ್ರಮ ಪಟ್ಟು ಕೆಲಸ ಮಾಡಿದರು ಅಂದುಕೊಂಡ ಯಶಸ್ಸು ಸಿಗುತ್ತಿರುವುದಿಲ್ಲ. ಎಷ್ಟೇ ಪ್ರಾಮಾಣಿಕ ಪ್ರಯತ್ನ ಮಾಡಿದರು ಕೂಡ ಗುರಿ ತಲುಪಲು ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರುತ್ತದೆ. ಪದೇ ಪದೇ ಸೋಲುತ್ತಿರುತ್ತೇವೆ. ಆದರೆ ನಾವು ಎಲ್ಲಿ ಎಡವುತ್ತಿದ್ದೇವೆ ಎನ್ನುವುದು ಅರ್ಥವಾಗುವುದಿಲ್ಲ. ನಾವು ಎಷ್ಟೇ ಕಷ್ಟಪಟ್ಟರು ಅಂದುಕೊಂಡ ಕೆಲಸ ಕೈಗೂಡದೇ ಇರುವುದಕ್ಕೆ ಅದೃಷ್ಟವೂ ಕೂಡ ಒಂದು ಕಾರಣವಾಗಿರುತ್ತದೆ. ಅದೃಷ್ಟ ಎನ್ನುವುದು ನಮ್ಮ ಕೈ ಹಿಡಿಯದಿದ್ದರೆ ಕೆಲವೊಮ್ಮೆ ನಾವು ಅಂದುಕೊಂಡಿದ್ದು ಆಗುವುದಿಲ್ಲ. ಜೊತೆಗೆ ಬೇರೆಯವರ ವಕ್ರದೃಷ್ಟಿ ನಮ್ಮ ಮೇಲೆ ಬೀಳುವುದರಿಂದಾಗಿಯೂ ಸಹ ನಾವು ಸೋಲು ಕಾಣುತ್ತಿರುತ್ತೇವೆ. ಅಂದಹಾಗೆ ಇದಕ್ಕೆ ಅರಿಶಿಣದಲ್ಲಿ ಪರಿಹಾರವಿದೆ. ಹೌದು ಅರಿಶಿಣಕ್ಕೆ ವಿಶೇಷವಾದ ಸ್ಥಾನಮಾನ ನೀಡಲಾಗಿದೆ. ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಅರಿಶಿಣ ಮುಖ್ಯ ಸ್ಥಾನ ಪಡೆದುಕೊಂಡಿದೆ. ಪೂಜೆ ಪುನಸ್ಕಾರ ವಿಧಿ ವಿಧಾನಗಳಲ್ಲಿ ಅರಿಶಿಣವನ್ನು ಬಳಸಲಾಗುತ್ತದೆ. ಜೊತೆಗೆ ಅರಿಶಿಣದ ತಂತ್ರ ಬಳಸಿಕೊಂಡು ಈ ಕೆಲವು ಕೆಲಸಗಳನ್ನು ಮಾಡಿದರೆ ನಾವು ಅಂದುಕೊಂಡ ಕೆಲಸ ಈಡೇರುವುದರಿಂದ, ನಮ್ಮ ಬದುಕಿನಲ್ಲಿ ನಮ್ಮ ಇಚ್ಛೆಗಳು ಪೂರೈಸುತ್ತದೆ. ಹಾಗಿದ್ದರೆ ಅಂತಹ ಅರಿಶಿಣದ ತಂತ್ರಗಳು ಯಾವ್ಯಾವು ಎನ್ನುವುದನ್ನು ಇಲ್ಲಿ ವಿವರಿಸಿ ಹೇಳಲಾಗಿದೆ.
ಬುಧವಾರ ಅಥವಾ ಗುರುವಾರದಂದು ಅರಿಶಿಣದ ಗಂಟಿನ ಹಾರವನ್ನು ತಯಾರಿಸಿ ಗಣೇಶನಿಗೆ ಅರ್ಪಿಸುವುದರಿಂದಾಗಿ ನಮ್ಮ ಕೆಲಸಗಳು ಈಡೇರುತ್ತವೆ. ಎದುರಾಗುವ ಎಲ್ಲಾ ಅಡೆತಡೆಗಳನ್ನು ವಿಘ್ನ ನಿವಾರಕ ಗಣೇಶನ ಸರಿಸುತ್ತಾನೆ. ಜೊತೆಗೆ ಅರಿಶಿಣದ ಗಂಟನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿ ಇರಿಸಿಕೊಳ್ಳುವುದು ಕೂಡ ಉತ್ತಮ ಲಾಭಗಳನ್ನು ತಂದುಕೊಡುತ್ತದೆ. ಇದರಿಂದ ಲಕ್ಷ್ಮೀದೇವಿ ಪ್ರಸನ್ನಗೊಂಡು ನಮ್ಮ ಇಚ್ಛೆಗಳು ಈಡೇರುತ್ತವೆ. ಅರಿಶಿನವು ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು ಎಂದು ಶಾಸ್ತ್ರ ಹೇಳುತ್ತದೆ. ಹೀಗಾಗಿ ಅರಿಶಿನವನ್ನು ಇಟ್ಟುಕೊಳ್ಳುವುದರಿಂದಾಗಿ ಜನರ ಕೆಟ್ಟ ದೃಷ್ಟಿ, ವಕ್ರದೃಷ್ಟಿ ಬೀಳುವುದರಿಂದಾಗಿ ತಪ್ಪಿಸಿಕೊಳ್ಳಬಹುದು. ಅಲ್ಲದೇ ರಾತ್ರಿ ಮಲಗುವಾಗ ತಲೆಯ ಬಳಿ ಅರಿಶಿನದ ಕೊಂಬನ್ನು ಇಟ್ಟುಕೊಂಡು ಮಲಗುವುದು ನಮ್ಮ ಅದೃಷ್ಟಗಳನ್ನು ಜಾಗೃತಿಗೊಳಿಸುತ್ತದೆ. ಇದನ್ನು ಓದಿ.. Kannada Astrology: ತಿಂಗಳ ಪೂರ್ತಿ ತಿನ್ನಿ, ಆದರೆ ಈ 5 ದಿನ ಮಾತ್ರ ಈರುಳ್ಳಿ-ಬೆಳ್ಳುಳ್ಳಿ ಮುಟ್ಟೋಕೆ ಹೋಗ್ಬೇಡಿ, ಲಕ್ಷ್ಮಿ ಆಶೀರ್ವಾದ ನೀಡಿ ಶ್ರೀಮಂರಾಗುತ್ತೀರಿ.

ಅರಿಶಿಣದ ತಂತ್ರಗಳನ್ನು ಬಳಸುವುದರಿಂದಾಗಿ ದೇವಗುರು ಬೃಹಸ್ಪತಿಯನ್ನು ಒಲಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಅರಿಶಿಣದ ಜೊತೆಗೆ ಬೇಳೆಯನ್ನು ದಾನ ಮಾಡುವುದರಿಂದಾಗಿಯೂ ಉತ್ತಮ ಪ್ರಯೋಜನಗಳು ಪಡೆಯಬಹುದಾಗಿದೆ. ಮದುವೆಗೆ ಸಂಬಂಧಪಟ್ಟ ಯಾವುದೇ ಅಡೆತಡೆ ತೊಂದರೆಗಳಿದ್ದರೂ ಕೂಡ ಅರಿಶಿಣದಿಂದ ಆ ಸಮಸ್ಯೆಗಳು ಬಗೆಹರಿಯುತ್ತವೆ. ವಿಷ್ಣುದೇವ ಮತ್ತು ಲಕ್ಷ್ಮಿ ದೇವಿಯ ಮೂರ್ತಿಯ ಮುಂದೆ ಒಂದು ಚಿಟಿಕೆ ಅರಿಶಿಣವನ್ನು ಅರ್ಪಿಸಿದರೆ ಸಾಕು ದೇವತೆಗಳು ಪ್ರಸನ್ನರಾಗಿ ಮದುವೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಕೂಡ ಬಗೆಹರಿಸುತ್ತಾರೆ ಎಂದು ಧಾರ್ಮಿಕ ನಂಬಿಕೆಗಳೇ ಹೇಳುತ್ತದೆ.
ಯಾರಾದರೂ ನಿಮ್ಮ ಬಳಿ ಸಾಲ ಮಾಡಿಕೊಂಡಿದ್ದರೆ,ಬ್ನಿಮ್ಮ ಹಣ ನಿಮಗೆ ವಾಪಸ್ ಬರಲು ತುಂಬಾ ತಡವಾಗುತ್ತಿದ್ದರೆ ಆಗ ಅರಿಶಿಣ ಮತ್ತು ಕೆಲವು ಅಕ್ಕಿ ಕಾಳುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಜೊತೆಗೆ ಹೀಗೆ ಮಾಡುವುದರಿಂದಾಗಿ ನಿಮ್ಮ ಹಣ ಆದಷ್ಟು ಬೇಗನೆ ವಾಪಸ್ ಸಿಗುತ್ತದೆ. ಜೊತೆಗೆ ಯಾವುದೇ ಒಳ್ಳೆಯ ಕೆಲಸಗಳಿಗಾಗಿ ಮನೆಯಿಂದ ಹೊರ ಹೋಗುವಾಗ ಗಣೇಶನ ಮೂರ್ತಿಗೆ ಅರಿಶಿನದ ತಿಲಕವನ್ನು ಇರಿಸಿ ಹಾಗೂ ನಿಮ್ಮ ಹಣೆಗೂ ಅರಿಶಿನವನ್ನು ಹಚ್ಚಿಕೊಳ್ಳುವುದು ಒಳ್ಳೆಯದು. ಈ ರೀತಿಯ ಅರಿಶಿಣದ ಉಪಾಯಗಳನ್ನು ಮಾಡುವುದರಿಂದಾಗಿ ಅನೇಕ ಶುಭ ಲಾಭಗಳು ದೊರೆಯುತ್ತವೆ. ಇದನ್ನು ಓದಿ..Kannada Astrology: ಧನು ರಾಶಿಗೆ ಪ್ರವೇಶ ಮಾಡುತ್ತಿರುವ ಸೂರ್ಯ ದೇವ: ಇದರಿಂದ ಈ ಮೂರು ರಾಶಿಗಳ ಅದೃಷ್ಟ ಬದಲಾಗಿ, ಮುಟ್ಟಿದೆಲ್ಲಾ ಬಂಗಾರ ಫಿಕ್ಸ್. ಯಾವ ರಾಶಿಗಳಿಗೆ ಗೊತ್ತೇ??