Health Tips: ಜೀವನ ಪೂರ್ತಿ ಮಾತ್ರೆಗಳ ಮೊರೆ ಹೋಗುವ ಬದಲು, ಜಸ್ಟ್ ಈ ಆಹಾರ ಸೇವನೆ ಮಾಡಿ ಶುಗರ್ ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ ಗೊತ್ತೇ??

3

Health Tips: ಇತ್ತೀಚಿನ ಜೀವನ ಶೈಲಿಯ ಬದಲಾವಣೆಯಿಂದಾಗಿ ಅತಿ ಕಡಿಮೆ ವಯಸ್ಸಿಗೆ ಹಲವಾರು ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕ ವಯಸ್ಸಿನಲ್ಲೇ ಅಸಮತೋಲಿತ ಆಹಾರವನ್ನು ಸೇವನೆ ಮಾಡುವುದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ಶುಗರ್, ಬಿಪಿ ಸೇರಿದಂತೆ ಹಲವಾರು ಕಾಯಿಲೆಗಳನ್ನು ಮನುಷ್ಯ ಎದುರಿಸಬೇಕಾಗಿದೆ. ಆದರೆ ಸರಿಯಾದ ರೀತಿಯ ಆರೋಗ್ಯ ಕಾಯ್ದುಕೊಳ್ಳಲು ಕೆಲವು ನಿರ್ದಿಷ್ಟ ರೀತಿಯ ಆಹಾರ ಸೇವನೆ ಮಾಡುವುದು ಉತ್ತಮವಾಗಿರುತ್ತದೆ. ಅದರಲ್ಲೂ ಇತ್ತೀಚಿಗೆ ಬಹುತೇಕ ವಯಸ್ಕರು ಮಧುಮೇಹ ಕಾಯಿಲೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಆದರೆ ನಮ್ಮ ಆಹಾರದಲ್ಲಿ ಕೆಲವು ನಿಗದಿತ ಪದಾರ್ಥಗಳನ್ನು ಸೇರಿಸಿಕೊಳ್ಳುವುದರಿಂದಾಗಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಜೊತೆಗೆ ಈ ರೀತಿಯ ಆಹಾರದ ಡಯಟ್ ನಿಂದಾಗಿ ಆರೋಗ್ಯದ ದೃಷ್ಟಿಯಿಂದ ಉತ್ತಮ ಪ್ರಯೋಜನಗಳಿವೆ. ಹಾಗಿದ್ದರೆ ನಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದಾದ ಅತ್ಯುತ್ತಮ ಆಹಾರ ಕ್ರಮಗಳು ಯಾವ್ಯಾವು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

ನೇರಳೆ ಹಣ್ಣಿನಲ್ಲಿ ಫೈಬರ್, ಜೀವಸತ್ವ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಯತೇಚ್ಚವಾಗಿ ಇರುತ್ತದೆ. ಇವುಗಳನ್ನು ಸೇವಿಸುವುದರಿಂದಾಗಿ ಬ್ಲಡ್ ಶುಗರ್, ಸಮತೋಲನ ಮಟ್ಟದಲ್ಲಿ ಇರಲು ಸಹಾಯವಾಗುತ್ತದೆ. ಇನ್ನು ಆರೋಗ್ಯದ ದೃಷ್ಟಿಯಿಂದ ಮಧುಮೇಹ ನಿಯಂತ್ರಣಕ್ಕೆ ಬಾದಾಮಿ ಸೇವನೆ ಅತ್ಯುತ್ತಮ ಮಾರ್ಗವಾಗಿದೆ. ಬಾದಾಮಿಯಲ್ಲಿ ಕೊಬ್ಬಿನಾಮ್ಲ, ಪ್ರೊಟೀನ್, ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಇವೆ. ಬಾದಾಮಿಯಲ್ಲಿರುವ ಮೆಗ್ನೀಷಿಯಂ ಅಂಶವು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕರಿಸುತ್ತದೆ. ಚಿಯಾ ಸೀಡ್ಸ್ ಸೇವನೆ ಮಧುಮೇಹದ ನಿಯಂತ್ರಣಕ್ಕೆ ಅತ್ಯುತ್ತಮ ಉಪಾಯವಾಗಿದೆ. ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅನ್ನು ಯಥೇಚ್ಛವಾಗಿ ಚಿಯಾ ಸೀಡ್ಸ್ ಹೊಂದಿದೆ. ಇದನ್ನು ಓದಿ.. Health Tips: ಚುಮು ಚುಮು ಚಳಿಯಲ್ಲಿ ಶುಂಠಿಯನ್ನು ಈ ರೀತಿ ಸೇವನೆ ಮಾಡಿ, ರಾತ್ರಿ ಎಲ್ಲಾ ಪುರುಷರಿಗೆ ಎಚ್ಚರ. ಹೇಗೆ ಗೊತ್ತೆ??

ಮಧುಮೇಹಿಗಳು ಸೊಪ್ಪು ಮತ್ತು ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು. ಇವುಗಳಲ್ಲಿ ಫೈಬರ್, ಮೆಗ್ನೀಷಿಯಂ ನಂತಹ ಅಂಶಗಳು ಇದ್ದು ಇವುಗಳು ಮಧುಮೇಹದ ನಿಯಂತ್ರಣಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ಪಾಲಕ್ ಸೊಪ್ಪು ಡಯಾಬಿಟಿಸ್ ರೋಗಿಗಳಿಗೆ ತಮ್ಮ ಆರೋಗ್ಯ ಸ್ಥಿತಿಯನ್ನು ಕಾಯ್ದುಕೊಳ್ಳಲು ಅತ್ಯುತ್ತಮ ಮಾರ್ಗೋಪಾಯವೆಂದೇ ಹೇಳಬಹುದು. ಸಾಮಾ ನ್ಯವಾಗಿ ತೂಕ ಇಳಿಸಿಕೊಳ್ಳಲು ಹೆಚ್ಚಾಗಿ ಓಟ್ಸ್ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಕಡಿಮೆ ಫೈಬರ್ ಆಹಾರವಾಗಿರುವ ಓಟ್ಸ್ ಅನ್ನು ಡಯಾಬಿಟಿಸ್ ನಿಯಂತ್ರಣಕ್ಕಾಗಿ ಸೇವಿಸಬಹುದು. ಇದನ್ನು ಓದಿ..Health Tips: ಹತ್ತು ದಿನ ಬ್ರಷ್ ಮಾಡದೆ ಇದ್ದರೂ ದುರ್ವಾಸನೆ ಬರಬಾರದು ಅಂದ್ರೆ ಏನು ಮಾಡಬೇಕು ಗೊತ್ತೇ??