Kannada News: ಹೆಂಡತಿ ಇದ್ರೂ, ಪುರುಷರು ಪರ ಸ್ತ್ರೀ ಜೊತೆ ಡಿಂಗ್ ಡಾಂಗ್ ಆಡಲು ಮುಂದಾಗುವುದು ಯಾಕೆ ಗೊತ್ತೇ?? ಕಾರಣವಿಲ್ಲದೆ ಏನು ಮಾಡೋಲ್ಲ ಪುರುಷರು.

180

Kannada News: ಕೆಲವೊಮ್ಮೆ ಈಗಾಗಲೇ ವಿವಾಹವಾಗಿರುವ ಪುರುಷರು ಪರಿಸ್ತ್ರಿಯ ಮೇಲೆ ಆಕರ್ಷಿತರಾಗುವುದು, ಅನೈತಿಕ ಸಂಬಂಧ ಇರಿಸಿಕೊಳ್ಳುವುದು ಇತ್ಯಾದಿ ವಿಷಯಗಳ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ, ಸುದ್ದಿ ಓದುತ್ತಿರುತ್ತೇವೆ. ಕೆಲವೊಮ್ಮೆ ಸ್ವತಹ ಇಂತಹ ಘಟನೆಗಳನ್ನು ಪ್ರತ್ಯಕ್ಷವಾಗಿ ನೋಡಿರಲುಬಹುದು. ನೆಮ್ಮದಿಯಾಗಿ ತಮಗೆ ಸಿಕ್ಕ ಬದುಕನ್ನು ನಡೆಸಿಕೊಂಡು ಸಂಗಾತಿಯ ಜೊತೆಗೆ ಖುಷಿಯಾಗಿ ಇರುವುದರ ಬದಲಿಗೆ ಕೆಲವು ಪುರುಷರು ಅಕ್ರಮ ಸಂಬಂಧವನ್ನು ಸಹ ಇರಿಸಿಕೊಂಡಿರುವ ಅದೆಷ್ಟೋ ಘಟನೆಗಳು ಸುದ್ದಿಯಾಗುತ್ತಿರುತ್ತದೆ. ಆದರೆ ಈ ರೀತಿಯಾಗಿ ಪುರುಷರು ಪರಿಸ್ತ್ರಿಯ ಮೇಲೆ ಆಕರ್ಷಣೆ ಆಗುವುದು ಯಾಕೆ ಗೊತ್ತಾ, ಅರ್ಥಶಾಸ್ತ್ರದ ಪಿತಾಮಹ ಆಚಾರ್ಯ ಚಾಣಕ್ಯ ಅವರು ಇದಕ್ಕೆ ಪ್ರಮುಖ ಐದು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಪುರುಷರು ಪರಿಸ್ತ್ರಿಯ ಮೇಲೆ ಮೋಹಿತರಾಗುವುದಕ್ಕೆ ಇವೆ ಐದು ಪ್ರಮುಖ ಕಾರಣಗಳಂತೆ.

ಮೊದಲನೆಯದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುವುದು ಒಂದು ಕಾರಣವಂತೆ. ಮದುವೆ, ಸಂಸಾರದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲದ ಸಮಯದಲ್ಲಿ ಮದುವೆ ಮಾಡುವುದರಿಂದಾಗಿ ಪುರುಷರಿಗೆ ಸಂಸಾರದ ಬೆಲೆ ಅರ್ಥವಾಗುವುದಿಲ್ಲ. ಅಲ್ಲದೆ ಅವರು ಜವಾಬ್ದಾರಿಯಿಂದ ವಿಮುಖರಾಗುತ್ತಾರಂತೆ, ತಕ್ಷಣದ ಸುಖ, ದೈಹಿಕ ಆಮಿಷಗಳಿಗೆ ಒಳಗಾಗುವ ಪುರುಷರು ಬೇರೊಂದು ಸಂಬಂಧದ ಕಡೆಗೆ ಆಕರ್ಷಿತರಾಗುತ್ತಾರೆ. ಎರಡನೆಯದಾಗಿ ದೈಹಿಕ ತೃಪ್ತಿಯ ಕೊರತೆ ಅಥವಾ ಅಸಮಾನತೆ. ಪತಿ ಪತ್ನಿ ಇಬ್ಬರು ಒಟ್ಟಾಗಿ ದೈಹಿಕವಾಗಿ ಸುಖ ಹಾಗೂ ತೃಪ್ತಿಯನ್ನು ಅನುಭವಿಸದೆ ಇದ್ದಾಗ ಈ ರೀತಿಯ ವಿವಾಹೇತರ ಸಂಬಂಧಗಳ ಕಡೆಗೆ ಪುರುಷ ಮಾರು ಹೋಗುತ್ತಾನೆ. ದೈಹಿಕ ಸುಖ ಎಂದರೆ ಅದು ಕೇವಲ ಹಾಸಿಗೆಯ ಮೇಲಿನ ಲೈಂಗಿಕ ಕ್ರಿಯೆ ಮಾತ್ರವಲ್ಲ. ಪರಸ್ಪರ ಗಂಡ ಹೆಂಡತಿ ಪ್ರೀತಿಯಿಂದ ಮಾತನಾಡುವುದು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ಒಬ್ಬರ ಕಷ್ಟ ಸುಖ ಎರಡಕ್ಕೂ ಸ್ಪಂದಿಸುವುದು ಎಲ್ಲವೂ ಸೇರಿರುತ್ತದೆ.

ಮೂರನೆಯದಾಗಿ ಸಂಬಂಧಗಳಲ್ಲಿ ನಂಬಿಕೆಯ ಕೊರತೆ ಇರುವುದು ಮತ್ತೊಂದು ಕಾರಣವಾಗಿದೆ. ಯಾವುದೇ ಸಂಬಂಧ ನಂಬಿಕೆಯ ಮೇಲೆಯೇ ನಿಂತಿರುತ್ತದೆ. ಸಂಗಾತಿಯ ಮೇಲೆ ಅನುಮಾನವಿರುವುದು, ಅವರನ್ನು ಸಂದೇಹಿಸುವುದು ಕೂಡ ಈ ರೀತಿಯ ಅಕ್ರಮ ಸಂಬಂಧಗಳಿಗೆ ಕಾರಣವಾಗುತ್ತದೆ. ಅಲ್ಲದೆ ಕೆಲವರು ಇಂತಹ ಅಕ್ರಮ ಸಂಬಂಧಗಳನ್ನು ಹೊಂದಿರುವುದೇ ಪ್ರತಿಷ್ಠೆಯ ವಿಷಯ ಎಂದು ಭಾವಿಸುತ್ತಾರಂತೆ. ನಾಲ್ಕನೆಯದಾಗಿ ತಮ್ಮ ಸಂಗಾತಿಯನ್ನು ಬೇರೆಯವರ ಜೊತೆಗೆ ಹೋಲಿಸಿ ನಿರಾಶೆ ಗೊಳ್ಳುವುದಾಗಿದೆ. ಅವರು ಹಾಗಿದ್ದಾರೆ, ತಮ್ಮ ಪತ್ನಿ ಆ ರೀತಿ ಇಲ್ಲ. ತನ್ನ ಹೆಂಡತಿ ಸುಂದರವಾಗಿಲ್ಲ, ಬುದ್ಧಿವಂತೆಯಲ್ಲ, ಬೇರೆಯವರ ಹಾಗೆ ಇಲ್ಲ. ಈ ರೀತಿಯಾಗಿ ಬೇರೆ ಸ್ತ್ರೀಯರ ಜೊತೆಗೆ ತಮ್ಮ ಪತ್ನಿಯನ್ನು ಹೋಲಿಸಿಕೊಳ್ಳುವುದು ಕೂಡ ಪುರುಷರಿಗೆ ನಿರಾಶೆ ಉಂಟುಮಾಡುತ್ತದೆ. ಆಗ ಅವರು ದಾರಿ ತಪ್ಪಿ ಅನೈತಿಕ ಸಂಬಂಧದ ಕಡೆಗೆ ಮುಖ ಮಾಡುತ್ತಾರೆ. ಇದನ್ನು ಓದಿ..Kannada News: ಬಿಡುಗಡೆಯಾಗಿರುವ ಕ್ರಾಂತಿ ಸಿನಿಮಾ ಟ್ರೈಲರ್ ನೋಡಿ ಅಚ್ಚರಿಯ ಹೇಳಿಕೆ ಕೊಟ್ಟ ಸುದೀಪ್: ಕನ್ನಡ ಚಿತ್ರರಂಗವೇ ಶಾಕ್. ಏನು ಹೇಳಿದ್ದಾರೆ ಗೊತ್ತೇ??

ಐದನೆಯದಾಗಿ ದಂಪತಿಗಳಿಗೆ ಮಕ್ಕಳಾದ ಮೇಲೆ ಪರಸ್ಪರ ಆಕರ್ಷಣೆ ಕಡಿಮೆಯಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಮಕ್ಕಳಾದ ಮೇಲೆ ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಮಗುವಿನ ಮೇಲೆ ಹೆಚ್ಚಿನ ಗಮನ ನೀಡುತ್ತಾರೆ. ಮಕ್ಕಳ ಆರೈಕೆ, ಪಾಲನೆ ಪೋಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಪುರುಷರಿಗೆ ಇದು ಬೇರೆಯದೇ ರೀತಿಯಲ್ಲಿ ಕಾಣುತ್ತದೆ. ಗಂಡನಿಗೆ ಹೆಚ್ಚಿನ ಸಮಯ ನೀಡುವುದು ಮತ್ತು ದೈಹಿಕ ತೃಪ್ತಿ ಈಡೇರಿಸುವುದೇ ಅವರ ಕೆಲಸ ಎಂದು ಕೂಡ ಕೆಲವು ಪುರುಷರು ಯೋಚಿಸುವುದಿದೆಯಂತೆ. ಹೀಗಾಗಿ ಅವರು ಮತ್ತೊಂದು ಸಂಬಂಧದ ಕಡೆಗೆ ಆಕರ್ಷಿತರಾಗುತ್ತಾರೆ. ಈ ರೀತಿಯಾಗಿ ಆಚಾರ್ಯ ಚಾಣಕ್ಯರು ತಮ್ಮ ಪುಸ್ತಕದಲ್ಲಿ ಪುರುಷರು ಪರಿಸ್ತ್ರಿಯ ಕಡೆಗೆ ಮೋಹಿತರಾಗುವುದಕ್ಕೆ ಇರುವ ಐದು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಇದನ್ನು ಓದಿ..Kannada News: ದೇಶವೇ ತಿರುಗಿ ನೋಡುವಂತೆ ಮದುವೆಯಾಗಿದ್ದ ಮಹಾಲಕ್ಷ್ಮಿ, ಇದೀಗ ಗಂಡನ ಬಗ್ಗೆ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ?