Kannada News: ಬಿಡುಗಡೆಯಾಗಿರುವ ಕ್ರಾಂತಿ ಸಿನಿಮಾ ಟ್ರೈಲರ್ ನೋಡಿ ಅಚ್ಚರಿಯ ಹೇಳಿಕೆ ಕೊಟ್ಟ ಸುದೀಪ್: ಕನ್ನಡ ಚಿತ್ರರಂಗವೇ ಶಾಕ್. ಏನು ಹೇಳಿದ್ದಾರೆ ಗೊತ್ತೇ??
Kannada News: ಮೊನ್ನೆ ಶನಿವಾರ ದರ್ಶನ್ (Darshan) ಅವರ ಬಹು ನಿರೀಕ್ಷಿತ ಕ್ರಾಂತಿ (Kranthi) ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್ ಯುಟ್ಯೂಬ್ ವಾಹಿನಿಯಲ್ಲಿ ಟ್ರೈಲರ್ ಭರ್ಜರಿಯಾಗಿ ತೆರೆ ಕಂಡಿದೆ. ಈಗಾಗಲೇ ಈ ಟ್ರೈಲರ್ ಅನ್ನು ಹೆಚ್ಚು ಕಡಿಮೆ ಒಂದು ಕೋಟಿ ವೀಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿರುವ ಈ ಟ್ರೈಲರ್ ಬಗ್ಗೆ ಸುಮಾರು 50 ಸಾವಿರ ಜನರು ಪ್ರತಿಕ್ರಿಯಿಸಿದ್ದಾರೆ. ರಾಜ್ಯಾದ್ಯಂತ ಕ್ರಾಂತಿ ಚಿತ್ರದ ಟ್ರೈಲರ್ ಸದ್ದು ಮಾಡುತ್ತಿದ್ದು ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಇದೆ ವೇಳೆ ಕ್ರಾಂತಿ ಚಿತ್ರದ ಟ್ರೈಲರ್ ಕುರಿತಾಗಿ ಕಿಚ್ಚ ಸುದೀಪ್ (Kiccha Sudeep) ಅವರು ಹೇಳಿರುವ ಮಾತುಗಳು ವೈರಲ್ ಆಗುತ್ತಿವೆ.
ಒಂದು ಕಾಲದಲ್ಲಿ ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕೂಡ ಉತ್ತಮ, ಒಳ್ಳೆಯ ಸ್ನೇಹಿತರಂತೆ ಇದ್ದವರು. ಆದರೆ ಈ ನಡುವೆ ಕೆಲವು ಮನಸ್ತಾಪಗಳಿಂದ ಇಬ್ಬರು ತಮ್ಮ ಸ್ನೇಹವನ್ನು ಕಳೆದುಕೊಂಡಿದ್ದಾರೆ. ಆದರೆ ಈಗಲೂ ಇಬ್ಬರ ನಡುವೆಯೂ ಕೂಡ ಮೊದಲಿನಷ್ಟೇ ಪ್ರೀತಿ, ಗೌರವ ಇರುವುದಂತೂ ಸುಳ್ಳಲ್ಲ. ಇತ್ತೀಚಿಗೆ ದರ್ಶನವರಿಗೆ ಕಿಡಿಗೇಡಿಚಪ್ಪಲಿ ಎಸಿದ ಘಟನೆ ನಡೆದಿತ್ತು. ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಕಿಚ್ಚ ಸುದೀಪ್ ಅವರು ಬಹಳ ದೀರ್ಘವಾಗಿ ಬರೆದುಕೊಂಡಿದ್ದರು. ದರ್ಶನ್ ಪರವಾಗಿ ಮಾತನಾಡಿ ಕಲಾವಿದರಿಗೆ ಗೌರವನ್ನು ಕೊಡುವುದನ್ನು ಕಲಿಯಿರಿ ಎಂದು ಅವರು ಪಾಠ ಮಾಡಿದ್ದರು. ಆನಂತರ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದ ಎಂದು ದರ್ಶನ್ ಅವರು ಕಿಚ್ಚ ಸುದೀಪ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆಯನ್ನು ನೀಡಿದ್ದರು. ಇದನ್ನು ನೋಡಿದ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಬಹಳ ಖುಷಿಯಾಗಿದ್ದರು. ಇದನ್ನು ಓದಿ..Biggboss Kannada: ಮನೆಯಲ್ಲಿ ಸೋನು, ಅಮ್ಮು ಇಬ್ಬರಿಗೂ ಇಷ್ಟವಾಗಿದ್ದ ರಾಕೇಶ್ ಅಡಿಗ, ಸೋನು ಜೊತೆ ಮದುವೆ ಬಗ್ಗೆ ಹೇಳಿದ್ದೇನು ಗೊತ್ತೇ?

ಇದೀಗ ಕಿಚ್ಚ ಸುದೀಪ್ ಅವರು ದರ್ಶನವರ ಕ್ರಾಂತಿ ಚಿತ್ರದ ಟ್ರೈಲರ್ ನೋಡಿ ಅದರ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದ ಕಿಚ್ಚ ಸುದೀಪ್ ಅವರನ್ನು ಕ್ರಾಂತಿ ಚಿತ್ರದ ಟ್ರೈಲರ್ ನೋಡಿದ್ದೀರಾ, ನಿಮಗೆ ಹೇಗನಿಸಿತು ಎಂದು ಕೇಳಲಾಗಿದೆ. ಇದಕ್ಕೆ ಬಹಳ ಪ್ರೀತಿಯಿಂದಲೇ ಕಿಚ್ಚ ಸುದೀಪ್ ಉತ್ತರಿಸಿದ್ದಾರೆ. “ಹೌದು, ನಾನು ಕ್ರಾಂತಿ ಚಿತ್ರದ ಟ್ರೈಲರ್ ನೋಡಿದೆ. ನನಗೆ ಬಹಳ ಇಷ್ಟವಾಯಿತು. ತುಂಬಾ ವಿಭಿನ್ನ ರೀತಿಯಲ್ಲಿ ಚಿತ್ರವನ್ನು ಮಾಡಲಾಗಿದೆ. ಚಿತ್ರದ ಬಗ್ಗೆ ನನಗೆ ಕುತೂಹಲ ಹೆಚ್ಚಾಗಿದೆ. ಸರ್ಕಾರಿ ಶಾಲೆ ಅಲ್ಲಿನ ವ್ಯವಸ್ಥೆ, ಮಕ್ಕಳ ಬಗ್ಗೆ ಈ ಚಿತ್ರ ಇರಲಿದೆ ಎಂದು ಅನಿಸುತ್ತಿದೆ. ಒಂದು ಹೊಸ ರೀತಿಯ ಕಥೆ, ಕನ್ನಡದಲ್ಲಿ ಈಗ ಸಾಕಷ್ಟು ವಿಶೇಷ ಸದಭಿರುಚಿಯ ಚಿತ್ರಗಳು ಮೂಡಿ ಬರುತ್ತಿರುವುದು ತುಂಬಾ ಒಳ್ಳೆಯ ವಿಷಯ” ಎಂದು ಅವರು ಕ್ರಾಂತಿ ಚಿತ್ರದ ಟ್ರೈಲರ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ.. Kannada News: ಚಿಂದಿ ಚಿತ್ರಾನ್ನ ಬುದ್ದಿ ಮೊಸರನ್ನ ಅನ್ನುವಂತೆ ಹಾಡಿದ ರೇವಣ ಸಿದ್ದ ಹಾಗೂ ಶಿವಾನಿ: ಬೊಂಬೆ ಆಟವಯ್ಯ ಹಾಡು ಹೇಗೆ ಹಾಡಿದ್ದಾರೆ ಗೊತ್ತೇ??