Kannada News: ದೇಶವೇ ತಿರುಗಿ ನೋಡುವಂತೆ ಮದುವೆಯಾಗಿದ್ದ ಮಹಾಲಕ್ಷ್ಮಿ, ಇದೀಗ ಗಂಡನ ಬಗ್ಗೆ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ?

175

Kannada News: ಇತ್ತೀಚಿಗಷ್ಟೇ ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ (Mahalakshmi) ಹಾಗೂ ರವೀಂದ್ರನ್ (Ravindran) ಅವರ ಮದುವೆ ದೊಡ್ಡ ಸದ್ದು ಮಾಡಿತ್ತು. ಆಗರ್ಭ ಶ್ರೀಮಂತರಾದ ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರವೀಂದ್ರನ್ ಅವರು ಮಹಾಲಕ್ಷ್ಮಿಯನ್ನು ಇತ್ತೀಚೆಗೆ ವರಿಸಿದರು. ನಟಿ ಮಹಾಲಕ್ಷ್ಮಿಯವರು ಅತ್ಯಂತ ಸೌಂದರ್ಯವತಿ, ಪ್ರತಿಭಾ ಶಾಲಿಯು ಆಗಿದ್ದಾರೆ. ತಮ್ಮ ಸೌಂದರ್ಯ ಹಾಗೂ ನಟನೆಯಿಂದಲೇ ಅವರು ಲಕ್ಷಾಂತರ ಅಭಿಮಾನಿಗಳನ್ನು ಕಿರಿತೆರೆಯಿಂದ ಗಳಿಸಿದ್ದಾರೆ. ಆದರೆ ಅವರು ರವೀಂದ್ರನ್ ಅಂತಹ ವ್ಯಕ್ತಿಯನ್ನು ಮದುವೆಯಾದಾಗ ನೆಟ್ಟಿಗರು ಸಾಕಷ್ಟು ಟ್ರೋಲ್ ಮಾಡಿದರು. ಆದರೂ ಕೂಡ ಈ ಜೋಡಿ ಇಂದಿಗೂ ಕೂಡ ದೃಢವಾಗಿ, ಖುಷಿಯಿಂದ ಒಟ್ಟಾಗಿ ಜೀವಿಸುತ್ತಿದ್ದಾರೆ. ಇದೀಗ ನಟಿ ಮಹಾಲಕ್ಷ್ಮಿ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಒಂದು ಸಾಕಷ್ಟು ವೈರಲ್ ಆಗುತ್ತಿದೆ.

ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ದುಡ್ಡು ಮಾಡೋ ಮೂದೇವಿ, ನಿನಗೂ ಸಿಕ್ತಾಳೆ ಶ್ರೀದೇವಿ ಎನ್ನುವಂತಹ ಟ್ರೋಲ್ ಸೇರಿದಂತೆ ಸಾಕಷ್ಟು ಅವಹೇಳನಕಾರಿಯಾಗಿ ಈ ಜೋಡಿಯನ್ನು ನಿಂದಿಸಲಾಗಿತ್ತು. ಇದರ ಜೊತೆಗೆ ಮಹಾಲಕ್ಷ್ಮಿ ರವೀಂದ್ರನ್ ಅವರ ಶ್ರೀಮಂತಿಕೆ ಮತ್ತು ಹಣಕ್ಕಾಗಿ ಮದುವೆಯಾಗಿದ್ದಾರೆ. ಈ ಜೋಡಿ ಹೆಚ್ಚು ಕಾಲ ಒಟ್ಟಿಗೆ ಇರುವುದಿಲ್ಲ, ಎಲ್ಲವೂ ದುಡ್ಡಿಗಾಗಿ ಎಂಬಂತಹ ಮಾತುಗಳು ಸಹ ಕೇಳಿ ಬಂದಿದ್ದವು. ಅಲ್ಲದೇ ನಟಿ ಮಹಾಲಕ್ಷ್ಮಿ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಈಗಾಗಲೇ ಅವರಿಗೆ ಒಬ್ಬ ಮಗನಿದ್ದಾನೆ. ಮೊದಲ ಪತಿಗೆ ವಿಚ್ಛೇದನ ನೀಡಿರುವ ಅವರು ರವೀಂದ್ರನ್ ಅವರ ಜೊತೆಗೆ ಎರಡನೇ ಮದುವೆಯಾಗಿದ್ದಾರೆ. ದುಡ್ಡಿಗಾಗಿ ಇವರು ಎಷ್ಟು ಬೇಕಾದರೂ ಮದುವೆಯಾಗುತ್ತಾರೆ ಎನ್ನುವ ಟ್ರೋಲ್ ಗಳನ್ನು ಕೂಡ ಮಾಡಲಾಗಿತ್ತು. ಇದನ್ನು ಓದಿ..Kannada News: ಅಂದು ಕಣ್ಣು ಕಾಣದ ಅಜ್ಜಿ, ಅಪ್ಪು ಬಳಿ ಬಂದ ತಕ್ಷಣ ಮಾಡಿದ್ದೇನು ಗೊತ್ತೇ?? ಮನಸ್ಸಿಗೆ ನೆಮ್ಮದಿ ನೀಡುವ ವಿಡಿಯೋ ನೋಡಿ.

ಯಾರು ಏನೇ ಹೇಳಿದರೂ ಕೂಡ ಸದ್ಯಕಂತು ಈ ಜೋಡಿ ಖುಷಿಯಾಗಿ ಒಟ್ಟಿಗೆ ಜೀವಿಸುತ್ತಿದ್ದಾರೆ. ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ. ಅಲ್ಲದೆ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದು ತಮ್ಮ ಜೀವನದ ಪ್ರಮುಖ ಘಟ್ಟಗಳ, ಪ್ರಮುಖ ಕ್ಷಣಗಳ ಕುರಿತ ಫೋಟೋ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಮನೆಯಲ್ಲಿ ಕುಟುಂಬದವರ ಜೊತೆಗೆ ಅನೇಕ ಕಾರ್ಯಕ್ರಮಗಳು, ಹಬ್ಬಗಳಲ್ಲಿ ಖುಷಿಯಿಂದ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದಲ್ಲದೆ ಇತ್ತೀಚಿಗೆ ನಟಿ ಮಹಾಲಕ್ಷ್ಮಿಯವರು ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಪತಿಯ ಜೊತೆಗೆ ಇರುವ ಈ ಫೋಟೋದಲ್ಲಿ ಇಬ್ಬರೂ ಕೂಡ ಕಪ್ಪು ಬಣ್ಣದ ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ಧರಿಸಿದ್ದು ಫೋಟೋಗೆ ಪೋಸ್ ಕೊಟ್ಟಿದಾರೆ. ಈ ಫೋಟೋ ಶೇರ್ ಮಾಡಿಕೊಂಡಿರುವ ಮಹಾಲಕ್ಷ್ಮಿ ಕ್ಯಾಪ್ಷನ್ ಅಲ್ಲಿ ನೀನು ಚೆಂದ, ಈ ಲೈಫು ಚಂದ, ಬದುಕು ನಿನ್ನಷ್ಟೇ ಸುಂದರವಾಗಿದೆ ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಕಷ್ಟು ಸದ್ದು ಮಾಡುತ್ತಿದೆ. ಇದನ್ನು ಓದಿ.. Kannada News: ಪ್ರಕರಣ ತಣ್ಣಗೆ ಆದ ಮೇಲು ಸುಮ್ಮನಿರದ ರೂಪೇಶ್; ಚಪ್ಪಲಿ ಎಸೆತದ ಬಗ್ಗೆ ಲೈವ್ ಬಂದು ಹೇಳಿದ್ದೇನು ಗೊತ್ತೇ? ಇವಾಗ ಇವೆಲ್ಲ ಬೇಕಿತ್ತಾ??