Kannada News: ಎನ್ಟಿಆರ್ ಸಿನಿಮಾ ಜೊತೆ ನಟನೆ ಮಾಡಲು, ದೇಶವೇ ಗಡ ಗಡ ನಡುಗುವಂತೆ ಸಂಭಾವನೆ ಕೇಳಿದ ಜಾನ್ವಿ ಕಪೂರ್. ಎಷ್ಟು ಬೇಕಂತೆ ಗೊತ್ತೇ?
Kannada News: ಇತ್ತೀಚಿಗೆ ದಕ್ಷಿಣ ಭಾರತದ ಚಲನಚಿತ್ರಗಳು ದೊಡ್ಡಮಟ್ಟದ ದಾಖಲೆ ನಿರ್ಮಿಸುತ್ತಿವೆ. ಇತ್ತ ಭಾರತೀಯ ಚಿತ್ರರಂಗದಲ್ಲಿ ರಾಜನಂತೆ ಮೆರೆಯುತ್ತಿದ್ದ ಬಾಲಿವುಡ್ (Bollywood) ಚಿತ್ರಗಳು ನೆಲಕಚ್ಚುತ್ತಿವೆ. ಅಲ್ಲದೆ ಬಾಲಿವುಡ್ ನ ಸ್ಟಾರ್ ನಟ ನಟಿಯರೆಲ್ಲ ಇದೀಗ ತಮ್ಮ ವರ್ಚಸ್ಸು ಕಳೆದುಕೊಂಡಿದ್ದಾರೆ. ಇತ್ತ ದಕ್ಷಿಣ ಭಾರತದ ನಟ ನಟಿಯರಿಗೆ ಬೇಡಿಕೆ ಹೆಚ್ಚುತ್ತಿದೆ. ಇದೇ ಕಾರಣಕ್ಕಾಗಿ ಬಾಲಿವುಡ್ ನ ಕಲಾವಿದರು ದಕ್ಷಿಣ ಭಾರತದ ಚಿತ್ರಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಅಲ್ಲದೆ ನಮ್ಮ ದಕ್ಷಿಣ ಭಾರತದ ಚಿತ್ರರಂಗದ ಕಲಾವಿದರಿಗೆ ಬಾಲಿವುಡ್ ನಲ್ಲಿ ಅವಕಾಶಗಳು ಕೇಳಿ ಬರುತ್ತಿವೆ. ಇದೀಗ ನಟಿ ಜಾಹ್ನವಿ ಕಪೂರ್ (Janhvi Kapoor) ಅವರು ಟಾಲಿವುಡ್ ಗೆ (Tollywood) ಎಂಟ್ರಿ ಕೊಡುತ್ತಿದ್ದಾರೆ. ಜೂ. ಎನ್ ಟಿ ಆರ್ (Jr NTR) ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಅವರು ಆಯ್ಕೆಯಾಗಿದ್ದಾರೆ. ಆದರೆ ಈ ಚಿತ್ರಕ್ಕಾಗಿ ಅವರು ಪಡೆದಿರುವ ಸಂಭಾವನೆ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತದೆ.
ಅತಿಲೋಕ ಸುಂದರಿ, ಭಾರತದ ಪ್ರಖ್ಯಾತ ನಟಿ ಶ್ರೀದೇವಿ (Sridevi) ಅವರ ಮಗಳಾಗಿರುವ ಜಾಹ್ನವಿ ಕಪೂರ್ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಬಾಲಿವುಡ್ ನ ಯಾವ ಚಿತ್ರಗಳು ಅವರ ಕೈ ಹಿಡಿದಿಲ್ಲ ಎಂದು ಹೇಳಬಹುದು. ಬಾಲಿವುಡ್ ನಲ್ಲಿ ಅವರು ಅಷ್ಟೇನೂ ಹೆಸರು ಮಾಡಿಲ್ಲ. ಅವರ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸನ್ನು ಸಹ ಗಳಿಸಲು ವಿಫಲವಾಗುತ್ತಿವೆ. ಹೀಗಾಗಿ ಇಂಥ ಪರಿಸ್ಥಿತಿ ಇರುವಾಗ ಇತ್ತ ದಕ್ಷಿಣ ಭಾರತದ ಚಿತ್ರಗಳು ದೊಡ್ಡ ಗಳಿಕೆ ಕಾಣುತ್ತಿವೆ. ಆರ್ ಆರ್ ಆರ್, ಪುಷ್ಪ, ಕಾಂತಾರ ಸೇರಿದಂತೆ ಹಲವಾರು ಚಿತ್ರಗಳು ಭಾರತದಲ್ಲೇ ಗಲಾಪೆಟ್ಟಿಗೆ ಲೂಟಿ ಮಾಡುತ್ತಿವೆ. ಸದ್ಯ ದಕ್ಷಿಣ ಭಾರತದ ಚಿತ್ರರಂಗ ಶ್ರೀಮಂತಿಕೆಯಿಂದ ಮೆರೆಯುತ್ತಿದೆ. ಹೀಗಾಗಿಯೇ ದಕ್ಷಿಣ ಭಾರತದ ಕಡೆಗೆ ಬಾಲಿವುಡ್ನ ಕಲಾವಿದರು ಮುಖ ಮಾಡುತ್ತಿದ್ದಾರೆ. ಇಲ್ಲಿ ಗುರುತಿಸಿಕೊಂಡು ಸದ್ದು ಮಾಡಲು ಎಲ್ಲರೂ ತುದಿಕಾಲಿನಲ್ಲಿ ನಿಂತಿದ್ದಾರೆ. ಇದನ್ನು ಓದಿ.. Kannada News: ನಾಗಿಣಿ 2 ಖ್ಯಾತಿಯ ನಮ್ರತಾರವರ ಅಂದಕ್ಕೆ ಮರುಳಾಗದವರು ಯಾರು ಇಲ್ಲ, ಅಪ್ಸರೆಯೆಂತೆ ಪೋಸ್ ಕೊಟ್ಟ ನಮ್ರತಾ. ಹೇಗಿದೆ ಗೊತ್ತೇ ಫೋಟೋಸ್?

ಜಾಹ್ನವಿ ಕಪೂರ್ ಸಹ ಟಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಜೂನಿಯರ್ ಎನ್ಟಿಆರ್ ಅವರ ಮುಂದಿನ ಚಿತ್ರಕ್ಕಾಗಿ ಅವರು ಅಂತಿಮಗೊಂಡಿದ್ದಾರೆ. ಇದು ಎನ್ ಟಿ ಆರ್ ಅವರ 30ನೇ ಚಿತ್ರವಾಗಿದ್ದು, ಇದು ಸಹ ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದಾಗಿ ಈ ಚಿತ್ರದ ಬಗ್ಗೆ ಬಹಳ ಜಾಗೃತೆಯನ್ನು ಅವರು ವಹಿಸಿದ್ದಾರೆ. ಅಲ್ಲದೆ ಆರ್ ಆರ್ ಆರ್ ಚಿತ್ರದ ಗೆಲುವಿನ ನಂತರ ಅವರು ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದು ಈ ಚಿತ್ರದ ಬಗ್ಗೆ ಅವರು ಪಕ್ಕಾ ಲೆಕ್ಕಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅಂತಿಮವಾಗಿ ಈ ಚಿತ್ರಕ್ಕೆ ಜಾಹ್ನವಿ ಕಪೂರ್ ನಾಯಕಿಯಾಗಿ ಟಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಪಡೆದಿರುವ ಸಂಭಾವನೆ ನಿಜಕ್ಕೂ ಆಶ್ಚರ್ಯ ಉಂಟು ಮಾಡುವಂಥದ್ದು. ಏಕೆಂದರೆ ಅವರು ಈ ಚಿತ್ರದಲ್ಲಿ ನಟಿಸಲು ನಟಿ ರಶ್ಮಿಕ ಮಂದಣ್ಣ ಅವರು ಪಡೆಯುವ ಸಂಭಾವನೆಗಿಂತಲೂ ಹೆಚ್ಚಿನ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಈ ಹಿಂದಿನ ಸೂಪರ್ ಹಿಟ್ ಪುಷ್ಪ ಚಿತ್ರಕ್ಕಾಗಿ ಶ್ರೀವಲ್ಲಿ ರಶ್ಮಿಕಾ ಮಂದಣ್ಣ ಐದು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಇದೀಗ ಜಾಹ್ನವಿ ಕಪೂರ್ ಅವರಿಗಿಂತಲೂ ಹೆಚ್ಚಿನ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ..Kannada News: ಮುಂದಿನ ಅಪ್ಪು ದೊಡ್ಮನೆ ಯುವರಾಜನಿಗೆ ಬೇರೆ ಭಾಷೆಯಿಂದ ಬಂದ ಅಪ್ಸರೆ. ಈಕೆಯನ್ನು ನೋಡಿದರೇ ಮೈ ಬೆವರುತ್ತೆ. ಯಾರು ಗೊತ್ತೇ ಆ ಚೆಲುವೆ?