Cricket News:ಭಾರತೀಯ ಬೌಲರ್ ಉಮ್ರಾನ್ ಮಲಿಕ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಪಾಕ್ ನ ಸಲ್ಮಾನ್ ಬಟ್. ಹೇಳಿದ್ದೇನು ಗೊತ್ತೇ??

135

Cricket News: ಬಾಂಗ್ಲಾ ಪ್ರವಾಸ ಮುಗಿಸಿ ಬಂದ ಬಳಿಕ ಇದೀಗ ಟೀಮ್ ಇಂಡಿಯಾ ಶ್ರೀಲಂಕಾ (India vs Srilanka) ವಿರುದ್ಧ ಪಂದ್ಯಗಳಲ್ಲಿ ಸೆಣೆಸುತ್ತಿದೆ. ಭಾರತದ ತವರಿನಲ್ಲೇ ಆಯೋಜಿಸಲಾಗಿರುವ ಈ ಮೂರು ಪಂದ್ಯಗಳ ಟಿ ಟ್ವೆಂಟಿ ಪಂದ್ಯಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನವನ್ನು ತೋರುತ್ತಿದೆ. ಇನ್ನೂ ಇದೆ ವೇಳೆ ಭಾರತ ತಂಡದ ವೇಗದ ಬೌಲರ್ ಉಮ್ರಾನ್ ಮಲಿಕ್ ಅವರ ಕುರಿತಾಗಿ ಇದೀಗ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ (Salman Butt) ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. ಯುವ ವೇಗಿಯಾಗಿ ಗುರುತಿಸಿಕೊಂಡಿರುವ ಉಮ್ರಾನ್ ಮಲಿಕ್ ಅವರ ಆಟದ ಕುರಿತಾಗಿ ಪಾಕಿಸ್ತಾನಿ ಮಾಜಿ ನಾಯಕ ಸಲ್ಮಾನ್ ಬಟ್ ಹೇಳಿರುವ ಅಭಿಪ್ರಾಯ ಇದೀಗ ಸುದ್ದಿ ಆಗುತ್ತಿದೆ.

ಉಮ್ರಾನ್ ಮಲಿಕ್ (Umran Malik) ಅವರ ಕುರಿತಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸಲ್ಮಾನ್ ಮಾತನಾಡಿದ್ದಾರೆ. ಉಮ್ರಾನ್ ಮಲಿಕ್ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ ಇನ್ನು ಕೆಲವು ಪಂದ್ಯಗಳಲ್ಲಿ ದುಬಾರಿಯಾಗುತ್ತಾರೆ. ಇದೇ ವಿಷಯದ ಕುರಿತಾಗಿ ಅವರು ಮಾತನಾಡಿದ್ದಾರೆ. ಕಳೆದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಮಲಿಕ್ ಬೌಲ್ ಮಾಡಿದ್ದರು. ಈ ವೇಳೆ ಅವರು 4 ಓವರ್ ಗಳಲ್ಲಿ ಮೂರು ವಿಕೆಟ್ ಕಬಳಿಸಿದರು. ಹೀಗಿದ್ದರೂ ಅವರು ಆ ಪಂದ್ಯದಲ್ಲಿ ಕೇವಲ 48 ರನ್ಗಳನ್ನು ಗಳಿಸಲು ಮಾತ್ರವೇ ಸಾಧ್ಯವಾಗಿದೆ. ಹೀಗಾಗಿ ಅವರು ತಂಡಕ್ಕೆ ಒಂದು ರೀತಿಯಾಗಿ ದುಬಾರಿಯಾಗಿ ಪರಿಣಮಿಸಿದ್ದರು. ಅಂದಹಾಗೆ ಉಮ್ರಾನ್‌ ಮಲಿಕ್‌ ಅವರು 147 ಹಾಗೂ 140 ವೇಗದ ಎಸೆತಗಳಲ್ಲಿ ವಿಕೆಟ್‌ ಕಿತ್ತಿದ್ದರು. ಇದನ್ನು ಓದಿ.. Business Idea: ಒಂದು ಸಲ ಕಾರ್ ಖರೀದಿ ಮಾಡಿ, ಇಲ್ಲಿ ಬಾಡಿಗೆಗೆ ಕೊಡಿ, ಅವರೇ ಹುಡುಕಿಕೊಂಡು ಬಂದು 50 ಸಾವಿರ ಕೊಡ್ತಾರೆ. ಏನು ಮಾಡಬೇಕು ಗೊತ್ತೆ??

ವೇಗದ ಜೊತೆ ಜೊತೆಗೆ ಸಮಯಕ್ಕೆ ತಕ್ಕಂತೆ ಚಾಕಚಕ್ಯತೆಯಿಂದ ಬೌಲಿಂಗ್ ಮಾಡುವುದನ್ನು ಅವರು ಅಳವಡಿಸಿಕೊಂಡರೆ ಅತ್ಯುತ್ತಮ. ಈ ಸಾಮರ್ಥ್ಯವನ್ನು ಅಳವಡಿಸಿಕೊಂಡರೆ ಅವರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬಹುಬೇಗ ಬೆಳೆಯುವುದು ಸಾಧ್ಯವಾಗುತ್ತದೆ. ಆದರೆ ಎರಡನೇ ಟಿ-20 ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ತೋರಲಿಲ್ಲ. ಅವರಲ್ಲಿ ಸಾಕಷ್ಟು ಅನುಭವದ ಕೊರತೆ ಎದ್ದು ಕಾಣುತ್ತಿತ್ತು ಎಂದು ಸಲ್ಮಾನ್ ಬಟ್ ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಉಮ್ರಾನ್ ಮಲಿಕ್ ಆಟದಲ್ಲಿ ವೇಗವಿದೆ. ಜೊತೆಗೆ ರಿದಂ, ಆಕ್ಷನ್ ಎಲ್ಲವೂ ಚೆನ್ನಾಗಿದೆ. ಆದರೆ ಅವರಿಗೆ ಇರುವುದು ಕೇವಲ ಅನುಭವದ ಕೊರತೆ. ಅವರು ಇನ್ನಷ್ಟು ಅನುಭವವನ್ನು ಪಡೆದುಕೊಂಡರೆ ಅವರ ಆಟ ಇನ್ನಷ್ಟು ಕಳೆಯಿಂದ ಕೂಡಿರಲಿದೆ ಎಂದು ಅವರು ಹೇಳಿದ್ದಾರೆ. ಈ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಗಳಲ್ಲಿ ಉಮ್ರಾನ್ ಮಲಿಕ್ ಮೊದಲಿಗರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನು ಓದಿ..Kannada News: ಮುಂದಿನ ಅಪ್ಪು ದೊಡ್ಮನೆ ಯುವರಾಜನಿಗೆ ಬೇರೆ ಭಾಷೆಯಿಂದ ಬಂದ ಅಪ್ಸರೆ. ಈಕೆಯನ್ನು ನೋಡಿದರೇ ಮೈ ಬೆವರುತ್ತೆ. ಯಾರು ಗೊತ್ತೇ ಆ ಚೆಲುವೆ?