Kannada News: ಪ್ರಕರಣ ತಣ್ಣಗೆ ಆದ ಮೇಲು ಸುಮ್ಮನಿರದ ರೂಪೇಶ್; ಚಪ್ಪಲಿ ಎಸೆತದ ಬಗ್ಗೆ ಲೈವ್ ಬಂದು ಹೇಳಿದ್ದೇನು ಗೊತ್ತೇ? ಇವಾಗ ಇವೆಲ್ಲ ಬೇಕಿತ್ತಾ??
Kannada News: ನಟ ದರ್ಶನ್ ಅವರಿಗೆ ಹೊಸಪೇಟೆಯ ಕಾರ್ಯಕ್ರಮ ಒಂದರಲ್ಲಿ ಚಪ್ಪಲಿ ಎಸೆದ ಘಟನೆ ನಡೆದಿತ್ತು. ಈ ಪ್ರಕರಣದ ಕುರಿತಾಗಿ ಇದೀಗ ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಅಂದ ಹಾಗೆ ರೂಪೇಶ್ ರಾಜಣ್ಣ ಇಂತಹದೊಂದು ಸನ್ನಿವೇಶ ಜರುಗಿದಾಗ ಬಿಗ್ ಬಾಸ್ ಮನೆಯ ಒಳಗಿದ್ದರು. ಈ ಸಮಯದಲ್ಲಿ ಅವರಿಗೆ ಇಂತಹದೊಂದು ಘಟನೆ ನಡೆದಿದೆ ಎನ್ನುವುದೇ ತಿಳಿದಿರಲಿಲ್ಲ. ಇನ್ನೂ ಗ್ರಾಂಡ್ ಫಿನಾಲೆ ಮುಗಿದ ಬಳಿಕ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಆ ಮೂಲಕ ಅವರಿಗೆ ಹೊರಗೆ ನಡೆದಿರುವ ಘಟನೆಗಳ ಬಗ್ಗೆ ತಿಳಿದು ಬಂದಿದೆ. ಈ ವೇಳೆ ದರ್ಶನ್ ಗೆ ಮಾಡಿರುವ ಅಪಮಾನವನ್ನು ಅವರು ಖಂಡಿಸಿದ್ದು ದರ್ಶನ್ ಪರ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಅವರು ಉತ್ತಮವಾಗಿ ಆಟ ಆಡುವ ಮೂಲಕ ಗ್ರಾಂಡ್ ಫಿನಾಲೆವರೆಗೂ ತಲುಪಿದರು. ಈ ಸೀಸನ್ ಅಲ್ಲಿ ನವೀನರ ವಿಭಾಗದಲ್ಲಿ ಗ್ರಾಂಡ್ ಫಿನಾಲೆಗೆ ತಲುಪಿದ ಏಕೈಕ ಸ್ಪರ್ಧಿ ಎಂದರೆ ಅದು ರೂಪೇಶ್ ರಾಜಣ್ಣ ಎನ್ನುವುದು ಗಮನಿಸಲೇಬೇಕಾದ ಸಂಗತಿಯಾಗಿದೆ. ಇದೀಗ ಅವರು ತಮ್ಮ ಮನೆಗೆ ಮರಳಿದ್ದಾರೆ. ಇದೇ ಸಂದರ್ಭದಲ್ಲಿ ದರ್ಶನ್ ಅವರಿಗೆ ಹೊಸಪೇಟೆ ಕಾರ್ಯಕ್ರಮದಲ್ಲಿ ಚಪ್ಪಲಿ ಎಸೆದಿರುವ ಘಟನೆಯ ಕುರಿತಾಗಿಯೂ ತಿಳಿದು ಬಂದಿದೆ. ಕನ್ನಡದ ಭಾಷೆ, ನಾಡು ನುಡಿ, ಜಲ, ಕಲಾವಿದರ ಬಗ್ಗೆ ಅವರು ಯಾವಾಗಲೂ ಪರವಹಿಸಿ ಮಾತನಾಡುತ್ತಾರೆ. ಅನ್ಯಾಯದ ವಿರುದ್ಧ ಗುಡುಗುತ್ತಾರೆ. ಇದೀಗ ದರ್ಶನ್ ಅವರಿಗೆ ಮಾಡಲಾದ ಅಪಮಾನದ ಕುರಿತಾಗಿ ಅವರು ಕಿಡಿ ಕಾರಿದ್ದಾರೆ. ಇದನ್ನು ಓದಿ..Kannada News: ಮೂರನೇ ಹೆಂಡತಿ ಕೈಯಲ್ಲಿ ತಪ್ಪಿಸಿಕೊಂಡು ಪವಿತ್ರ ರವರನ್ನು ಮದುವೆಯಾಗಲು ನರೇಶ್ ಕೊಡುತ್ತಿರುವ ಪರಿಹಾರ ಎಷ್ಟು ಕೋತಿ ಗೊತ್ತೇ??

ದರ್ಶನ್ ಅವರು ಒಬ್ಬ ಒಳ್ಳೆಯ ನಟ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರು ಸುಲಭವಾಗಿ ಮೇಲೆ ಬಂದವರಲ್ಲ, ಇಷ್ಟೊಂದು ಹೆಸರು ಮಾಡಲು ಅವರು ಬಹಳ ಕಷ್ಟ ಪಟ್ಟಿದ್ದಾರೆ. ಕೆಲಸ ಮಾಡಿದ್ದಾರೆ, ಶ್ರಮವಹಿಸಿದ್ದಾರೆ. ಅವರಿಗೆ ಅಪಮಾನ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಲೈಟ್ ಬಾಯ್ ಕೆಲಸದಿಂದ ಸೂಪರ್ ಸ್ಟಾರ್ ಆಗುವವರೆಗೂ ಅವರು ಬೆಳೆದಿದ್ದಾರೆ. ಈ ಜರ್ನಿ ಅಷ್ಟು ಸುಲಭವಾಗಿರುವುದಿಲ್ಲ. ಕಲಾವಿದನಾಗಿ ಗುರುತಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ದರ್ಶನ್ ಅವರ ಬಗ್ಗೆ ನನಗೆ ಅಪಾರ ಅಭಿಮಾನವಿದೆ. ಅವರು ಕನ್ನಡ ಪರವಾಗಿಯೇ ವಿವಿಧ ಸಮಸ್ಯೆಗಳು ಬಂದಾಗ ಅದರ ವಿರುದ್ಧ ದನಿಯತ್ತುತ್ತಾರೆ. ಅವರಿಗೆ ಈ ರೀತಿ ಅಪಮಾನ ಮಾಡಿರುವುದು ಈ ದುಷ್ಕೃತ್ಯ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಮೂಲಕ ದರ್ಶನ್ ಪರ ರೂಪೇಶ್ ರಾಜಣ್ಣ ಬ್ಯಾಟ್ ಬೀಸಿದ್ದಾರೆ. ಇದನ್ನು ಓದಿ.. Kannada News:ಎಲ್ಲವನ್ನು ತಾಳ್ಮೆಯಿಂದ ನೋಡುತ್ತಿದ್ದ ಡಿ ಬಾಸ್, ತಾಕತ್ತು ತೋರಿಸಲು ಭರ್ಜರಿ ಪ್ಲಾನ್: ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡುತ್ತಿದ್ದಾರೆ ಗೊತ್ತೇ??