Kannada News: ಅಂದು ಕಣ್ಣು ಕಾಣದ ಅಜ್ಜಿ, ಅಪ್ಪು ಬಳಿ ಬಂದ ತಕ್ಷಣ ಮಾಡಿದ್ದೇನು ಗೊತ್ತೇ?? ಮನಸ್ಸಿಗೆ ನೆಮ್ಮದಿ ನೀಡುವ ವಿಡಿಯೋ ನೋಡಿ.

36

Kannada News: ಪುನೀತ್ ರಾಜಕುಮಾರ್ ಕೇವಲ ನಟನೆ ಮಾತ್ರದಿಂದಲೇ ಅಲ್ಲದೆ ತಮ್ಮ ಒಳ್ಳೆಯ ನಡತೆಯಿಂದ ಹೆಸರಾದವರು. ಬಹುತೇಕ ಎಲ್ಲ ಮನೆಗಳಲ್ಲೂ ಪುನೀತ್ ಎಂದರೆ ನಿಜಕ್ಕೂ ಅಪ್ಪಟ ಪ್ರೀತಿ ಎಂದೇ ಹೇಳಬಹುದು. ಇಂತಹ ಒಬ್ಬ ಮಗ ನಮ್ಮ ಮನೆಯಲ್ಲಿ ಇರಬೇಕು ಎಂದು ಬಯಸುವಂತಹ ವ್ಯಕ್ತಿತ್ವವನ್ನು ಹೊಂದಿದ್ದರು. ಒಳ್ಳೆಯ, ಉತ್ತಮ ಚಿತ್ರಗಳನ್ನು ನಟಿಸಿದ್ದು ಮಾತ್ರವಲ್ಲ ಚಿತ್ರದಲ್ಲಿ ಸಂದೇಶ ನೀಡುವುದರ ಜೊತೆಗೆ ನಿಜ ಜೀವನದಲ್ಲೂ ಅವರು ಹಾಗೆಯೇ ಬದುಕಿದ್ದರು. ದೊಡ್ಡವರು, ಚಿಕ್ಕವರು, ಬಡವ, ಶ್ರೀಮಂತ ಎನ್ನುವ ಭೇದಭಾವವಿಲ್ಲದೆ ಪುನೀತ್ ಎಲ್ಲರನ್ನೂ ಬಹಳ ಗೌರವ ಮತ್ತು ಪ್ರೀತಿಯಿಂದ ನೋಡುತ್ತಿದ್ದರು. ಇದೀಗ ಪುನೀತ್ ಕಣ್ಣು ಕಾಣದ ಅಜ್ಜಿಯೊಂದಿಗೆ ಬಹಳ ಪ್ರೀತಿಯಿಂದ ನಡೆದುಕೊಂಡಿದ್ದ ವಿಡಿಯೋ ಒಂದು ಮತ್ತೆ ವೈರಲ್ ಆಗಿದೆ.

ನಟ ಪುನೀತ್ ರಾಜಕುಮಾರ್ ಅವರು ಇದೀಗ ಕರ್ನಾಟಕದ ಎಲ್ಲರ ಮನೆಮನೆಗಳಲ್ಲೂ ತುಂಬಿಕೊಂಡಿದ್ದಾರೆ ಎಂದೇ ಹೇಳಬಹುದು. ಅವರು ಜೀವಂತವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರು ಯಾರಿಗೂ ಗೊತ್ತಾಗದಂತೆ ಸಾವಿರಾರು ಜನರಿಗೆ ಮಾಡಿದ ಸಹಾಯಗಳ ಮೂಲಕ ಅವರು ಇನ್ನೂ ಜೀವಂತವಾಗಿ ಉಳಿದಿದ್ದಾರೆ. ಇಷ್ಟು ಮಾತ್ರವಲ್ಲ ತಾವು ಮಾಡಿದ ಸಹಾಯವನ್ನು ಯಾರಿಗೂ ಹೇಳಬಾರದು ಎಂದು ತಿಳಿಸುತ್ತಿದ್ದ ಪುನೀತ್ ರಾಜಕುಮಾರ್ ನಿಜಕ್ಕೂ ಕೂಡ ಸಹಾಯ ಮಾಡುವುದು ಹೇಗೆ ಎಂಬುದಕ್ಕೆ ಒಂದು ಅರ್ಥ ಕೊಟ್ಟವರು. ಪುನೀತ್ ರಾಜಕುಮಾರ್ ಸಾಮಾನ್ಯವಾಗಿ ತಮ್ಮ ಅಭಿಮಾನಿಗಳ ಜೊತೆಗೆ ಬಹಳ ಪ್ರೀತಿಯಿಂದಲೇ ನಡೆದುಕೊಳ್ಳುತ್ತಾರೆ. ಎಂತಹ ಕೆಲಸದ ಒತ್ತಡವೇ ಇರಲಿ ಅವರು ಅಭಿಮಾನಿಗಳನ್ನು ಮಾತನಾಡಿಸುತ್ತರೆ. ಇಂತಹ ಅದೆಷ್ಟೋ ವಿಡಿಯೋಗಳು ವೈರಲ್ ಆಗಿದೆ. ಇದನ್ನು ಓದಿ.. Kannada News: ಚಿಂದಿ ಚಿತ್ರಾನ್ನ ಬುದ್ದಿ ಮೊಸರನ್ನ ಅನ್ನುವಂತೆ ಹಾಡಿದ ರೇವಣ ಸಿದ್ದ ಹಾಗೂ ಶಿವಾನಿ: ಬೊಂಬೆ ಆಟವಯ್ಯ ಹಾಡು ಹೇಗೆ ಹಾಡಿದ್ದಾರೆ ಗೊತ್ತೇ??

ಇದೀಗ ಪುನೀತ್ ಅವರು ಕಣ್ಣು ಕಾಣದ ಅಜ್ಜಿ ಒಬ್ಬರ ಜೊತೆಗೆ ಇರುವ ಹಳೆಯ ವಿಡಿಯೋ ಒಂದು ಮತ್ತೆ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಅಪ್ಪು ಅಜ್ಜಿಯನ್ನು ವಿಡಿಯೋದಲ್ಲಿ ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದಾರೆ. ಕಣ್ಣು ಕಾಣದ ಅಜ್ಜಿ ಮುಖ ಮೈಯನ್ನು ಸವರುವ ಮೂಲಕ ಪುನೀತ್, ಪುನೀತ ಎಂದು ಹೇಳಿದ್ದಾರೆ. ಈ ಮೂಲಕ ಅಜ್ಜಿಯವರು ಪುನೀತ್ ಅವರನ್ನು ಸ್ಪರ್ಶಿಸುವ ಮೂಲಕ ನಿಜವಾಗಿಯೂ ಒಂದರ್ಥದಲ್ಲಿ ಕಣ್ಣು ಕಾಣಿಸದಿದ್ದರೂ ಕಣ್ತುಂಬಿಕೊಂಡಿದ್ದಾರೆ ಎಂದೆ ಹೇಳಬಹುದು. ಒಟ್ಟಾರೆಯಾಗಿ ಈ ವಿಡಿಯೋ ಎಲ್ಲಾ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿದೆ. ಪುನೀತ್ ಅವರ ಇಂತಹ ಸರಳತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ..Biggboss Kannada: ಮನೆಯಲ್ಲಿ ಸೋನು, ಅಮ್ಮು ಇಬ್ಬರಿಗೂ ಇಷ್ಟವಾಗಿದ್ದ ರಾಕೇಶ್ ಅಡಿಗ, ಸೋನು ಜೊತೆ ಮದುವೆ ಬಗ್ಗೆ ಹೇಳಿದ್ದೇನು ಗೊತ್ತೇ?