Food Recipe:ಈರುಳ್ಳಿ ಬಳಸಿ, ಈ ರೀತಿಯ ಚಟ್ನಿ ಮಾಡಿದರೆ, ಅನ್ನದಿಂದ ದೋಸೆ ಚಪಾತಿವರೆಗೂ ಎಲ್ಲದಕ್ಕೂ ಬೆಸ್ಟ್. ಮನೆಮಂದಿಯೆಲ್ಲ ಇಷ್ಟ ಪಟ್ಟು ಮತ್ತೆ ಮಾಡು ಅಂತಾರೆ
Food Recipe: ಇಂದು ನಾವು ನಿಮಗೆ ಒಂದು ರುಚಿಕಾರವಾದ ಈರುಳ್ಳಿ ಪಚಡಿ ರೆಸಿಪಿಯನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ. ಇದನ್ನು ತಿಂದರೆ ನಿಮ್ಮ ಬಾಯಿಗೆ ರುಚಿ, ಇದನ್ನು ನೀವು ಅನ್ನದ ಜೊತೆಗೆ ಅಥವಾ ಚಪಾತಿಯ ಜೊತೆಗೆ ತಿನ್ನಬಹುದು. ಬೆಳಗ್ಗೆ ತಿಂಡಿಗೆ ಇದನ್ನು ಮಾಡಬಹುದು. ಹಾಗಿದ್ದಲ್ಲಿ ಈರುಳ್ಳಿ ಪಚಡಿ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.
ಈರುಳ್ಳಿ ಪಚಡಿ ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ಹೀಗಿವೆ.. ಈರುಳ್ಳಿ, ಬೇಳೆ, ಶೇಂಗಾ, ಜೀರಿಗೆ, ಧನಿಯಾ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಒಣ ಮೆಣಸಿನಕಾಯಿ, ಉಪ್ಪು, ಖಾರದ ಪುಡಿ, ಅರಿಶಿನ, ಹುಣಸೆಹಣ್ಣು, ಇಂಗು, ಸಾಸಿವೆ ಇನ್ನಿತರ ವಸ್ತುಗಳು..
ಇದನ್ನು ಮಾಡುವ ವಿಧಾನ.. ಮೊದಲು ಈರುಳ್ಳಿ ತೆಗೆದುಕೊಂಡು ಅವುಗಳನ್ನು ಉದ್ದವಾಗಿ ಕಟ್ ಮಾಡಿ. ಒಂದು ಬಾಣಲೆಯನ್ನು ಸ್ಟವ್ ಮೇಲೆ ಇಟ್ಟು ಮೂರು ಸ್ಪೂನ್ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಬೇಳೆ ಎರಡು ಚಮಚ ಹಾಕಿ ಫ್ರೈ ಮಾಡಿ. ನಂತರ ಒಂದು ಚಮಚ ಜೀರಿಗೆ ಮತ್ತು ನಾಲ್ಕೈದು ಎಸಳು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ನಂತರ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ, ಅದರ ನಂತರ ಐದರಿಂದ ಆರು ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ ಹುರಿದ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಒಂದು ಅಥವಾ ಎರಡು ಚಮಚ ಹಸಿಮೆಣಸಿನಕಾಯಿ, ಸ್ವಲ್ಪ ಹುಣಸೆಹಣ್ಣು ಮತ್ತು ಒಂದು ಚಮಚ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಐದು ನಿಮಿಷ ಬೇಯಿಸಿ. ನಂತರ ಈ ಮಿಶ್ರಣವನ್ನು ಹೊರತೆಗೆದು ತಣ್ಣಗಾಗಲು ಬಿಡಿ. ಇದನ್ನು ಓದಿ..Kannada News: ಟ್ರೋಲ್ಸ್ ಗಳನ್ನೂ ತಡೆದುಕೊಳ್ಳಲಾರದೆ ಗಟ್ಟಿ ನಿರ್ಧಾರ ಮಾಡಿದ ರಶ್ಮಿಕಾ: ಇನ್ನು ಸಿನಿ ಜೀವನ ಕಥಂ ಆಗೋದು ಪಕ್ಕನಾ? ಬೀದಿಯಲ್ಲಿ ಕಣ್ಣೀರಿಟ್ಟ ಫ್ಯಾನ್ಸ್.

ನಂತರ ಇದನ್ನು ಮಿಕ್ಸರ್ ಗೆ ಹಾಕಿ ತುಂಬಾ ನುಣ್ಣಗೆ ಅಲ್ಲದೆ, ಸ್ವಲ್ಪ ಒರಟಾಗಿ ಅಥವಾ ನಿಮಗೆ ಬೇಕಿದ್ದರೆ ನಯವಾದ ಪೇಸ್ಟ್ ಮಾಡಿಕೊಳ್ಳಿ. ಹೀಗೆ ಮಾಡಿದ ಈರುಳ್ಳಿ ಚಟ್ನಿಯನ್ನು ಒಂದು ಕಡೆ ಇಡಿ. ಈ ಮತ್ತೆ ಸ್ಟವ್ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಸ್ವಲ್ಪ ಕರಿಬೇವು, ನಾಲ್ಕೈದು ಎಸಳು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಚೆನ್ನಾಗಿ ಫ್ರೈ ಆದ ನಂತರ ಸ್ವಲ್ಪ ಅರಿಶಿನ ಸೇರಿಸಿ ಮತ್ತು ಸ್ವಲ್ಪ ಇಂಗು ಸೇರಿಸಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈರುಳ್ಳಿ ಚಟ್ನಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ಟವ್ ಆಫ್ ಮಾಡಿ. ಈ ಚಟ್ನಿಯನ್ನು ಇನ್ನೊಂದು ಬೌಲ್ ಗೆ ಹಾಕಿಕೊಳ್ಳಿ. ಈರುಳ್ಳಿ ಚಟ್ನಿ ತಯಾರಿಸುವುದು ತುಂಬಾ ಸುಲಭ.. ಇದು ಬಹಳ ರುಚಿಯಾಗಿರುತ್ತದೆ. ಚಪಾತಿ, ಅನ್ನ, ರೊಟ್ಟಿ ಹೀಗೆ ಎಲ್ಲದರ ಜೊತೆಗೂ ತುಂಬಾ ರುಚಿಯಾಗಿರುತ್ತದೆ. ಇದನ್ನು ನೀವು ಒಮ್ಮೆ ಟ್ರೈ ಮಾಡಿ. ಇದನ್ನು ಓದಿ.. Health Tips: ಚುಮು ಚುಮು ಚಳಿಯಲ್ಲಿ ಶುಂಠಿಯನ್ನು ಈ ರೀತಿ ಸೇವನೆ ಮಾಡಿ, ರಾತ್ರಿ ಎಲ್ಲಾ ಪುರುಷರಿಗೆ ಎಚ್ಚರ. ಹೇಗೆ ಗೊತ್ತೆ??