Biggboss Kannada: ಮನೆಯಲ್ಲಿ ಸೋನು, ಅಮ್ಮು ಇಬ್ಬರಿಗೂ ಇಷ್ಟವಾಗಿದ್ದ ರಾಕೇಶ್ ಅಡಿಗ, ಸೋನು ಜೊತೆ ಮದುವೆ ಬಗ್ಗೆ ಹೇಳಿದ್ದೇನು ಗೊತ್ತೇ?
Biggboss Kannada: ಕಳೆದ ವಾರವಷ್ಟೇ ಬಿಗ್ ಬಾಸ್ ಸೀಸನ್ 9ರ (Biggboss Kannada Season 9) ಗ್ರಾಂಡ್ ಫಿನಾಲೆಯಾಗಿದೆ. ರೂಪೇಶ್ ಶೆಟ್ಟಿ ಈ ಸೀಸನ್ ವಿನ್ನರ್ ಆಗಿದ್ದಾರೆ. ರಾಕೇಶ್ ಅಡಿಗ (Rakesh Adiga) ರನ್ನರ್ ಆಗಿದ್ದಾರೆ. ತಮ್ಮ ವಿಭಿನ್ನ ವ್ಯಕ್ತಿತ್ವದ ಕಾರಣದಿಂದಾಗಿ ರಾಕೇಶ್ ಅಡಿಗ ಬಿಗ್ ಬಾಸ್ (Bigg Boss) ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಆಟ, ಮನರಂಜನೆ, ಮಾತು ಹೀಗೆ ಎಲ್ಲಾ ವಿಷಯಗಳಲ್ಲಿಯೂ ಕೂಡ ರಾಕೇಶ್ ಅಡಿಗ ಅವರ ನಡವಳಿಕೆಯನ್ನು ಅಭಿಮಾನಿಗಳು ಬಹಳ ಮೆಚ್ಚಿಕೊಂಡಿದ್ದರು. ಓ ಟಿ ಟಿ ಸೀಸನ್ಗೆ ಎಂಟ್ರಿಕೊಟ್ಟು ಆನಂತರ ಟಿವಿ ಲಗ್ಗೆ ಇಟ್ಟ ರಾಕೇಶ್ ಅಡಿಗ ಅಲ್ಲಿಯೂ ಕೂಡ ಗೆಲುವಿನ ನಾಗಲೋಟ ಮುಂದುವರಿಸಿದ್ದರು. ಇದೀಗ ಕಾರ್ಯಕ್ರಮ ಮುಗಿದ ಬಳಿಕ ರಾಕೇಶ್ ಅಡಿಗ ಅನೇಕ ಟಿವಿ ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನೂ ಈ ವೇಳೆ ಅವರಿಗೆ ಸೋನು ಗೌಡ (Sonu Gowda) ಅವರನ್ನು ನೀವು ಮದುವೆಯಾಗುತ್ತೀರಾ ಎನ್ನುವ ರೀತಿಯ ಪ್ರಶ್ನೆಗಳ ಹೆಚ್ಚಾಗಿ ಎದುರಾಗುತ್ತವೆ. ಇದೀಗ ಅದಕ್ಕೆ ರಾಕೇಶ್ ಅಡಿಗ ತಕ್ಕ ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ಮುಗಿದ ನಂತರ ರಾಕೇಶ್ ಅಡಿಗ ಸಾಕಷ್ಟು ಬಿಸಿಯಾಗಿದ್ದಾರೆ. ಹಲವಾರು ಟಿವಿ ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ ನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲಿ ಕಳೆದ ನೆನಪುಗಳು, ಸ್ಪರ್ಧಿಗಳು, ಆಟ, ಕಲಿತ ಪಾಠ ಹೀಗೆ ಪ್ರತಿಯೊಂದು ವಿಷಯಗಳನ್ನು ಬಹಳ ಖುಷಿಯಿಂದ ರಾಕೇಶ್ ಅಡಿಗ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿರುವ ಅವರು ಜನ ನನ್ನನ್ನು ಇಷ್ಟೊಂದು ಪ್ರೀತಿಸುತ್ತಾರೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಅವರಿಗೆ ನೀವು ಸೋನು ಗೌಡ ಅವರನ್ನು ಮದುವೆಯಾಗುತ್ತೀರಾ ಎನ್ನುವ ಪ್ರಶ್ನೆ ಕೇಳಲಾಗಿದೆ. ಇದನ್ನು ಓದಿ..Kannada News: ಮೂರನೇ ಹೆಂಡತಿ ಕೈಯಲ್ಲಿ ತಪ್ಪಿಸಿಕೊಂಡು ಪವಿತ್ರ ರವರನ್ನು ಮದುವೆಯಾಗಲು ನರೇಶ್ ಕೊಡುತ್ತಿರುವ ಪರಿಹಾರ ಎಷ್ಟು ಕೋತಿ ಗೊತ್ತೇ??

ಸೋನು ಗೌಡ ಮತ್ತು ರಾಕೇಶ್ ಅಡಿಗ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಯಾವಾಗಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ರಾಕೇಶ್ ಅಡಿಗ ಅವರನ್ನು ನೀವು ಸೋನು ಗೌಡ ಅವರನ್ನು ಮದುವೆಯಾಗುತ್ತೀರಾ ಎಂದು ಮಾಧ್ಯಮದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಒಂದು ವೇಳೆ ಸೋನು ಗೌಡ ಅವರ ಮನೆಯಿಂದ ಮದುವೆ ಪ್ರೋಪೋಸಲ್ ಕೇಳಿ ಬಂದರೆ ಅದಕ್ಕೆ ಸ್ವತಹ ಸೋನು ಅವರೇ ಉತ್ತರಿಸುತ್ತಾರೆ. ಅದು ನನ್ನವರೆಗೆ ಬರುವುದೇ ಇಲ್ಲ. ಇನ್ನು ಸೋನು ಗೌಡ ಏನಾದ್ರೂ ನನ್ನ ಬಳಿ ಮದುವೆಯ ಇಚ್ಛೆ ವ್ಯಕ್ತಪಡಿಸಿದರೆ ನಾನು ಏನು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವಳು ಕೇಳುವುದಿಲ್ಲ. ಒಂದು ವೇಳೆ ಕೇಳಿದರೂ ನಾನು ನೋ ಎಂದೇ ಉತ್ತರಿಸುತ್ತೇನೆ. ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹವಿದೆ, ಅದನ್ನು ಬಿಟ್ಟು ಮತ್ತೇನು ಇಲ್ಲ. ಮದುವೆಯ ಮಾತುಕತೆ ಎಲ್ಲವೂ ಅರ್ಥವಿಲ್ಲದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ.. Kannada News:ಎಲ್ಲವನ್ನು ತಾಳ್ಮೆಯಿಂದ ನೋಡುತ್ತಿದ್ದ ಡಿ ಬಾಸ್, ತಾಕತ್ತು ತೋರಿಸಲು ಭರ್ಜರಿ ಪ್ಲಾನ್: ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡುತ್ತಿದ್ದಾರೆ ಗೊತ್ತೇ??