Kannada News: ಮೂರನೇ ಹೆಂಡತಿ ಕೈಯಲ್ಲಿ ತಪ್ಪಿಸಿಕೊಂಡು ಪವಿತ್ರ ರವರನ್ನು ಮದುವೆಯಾಗಲು ನರೇಶ್ ಕೊಡುತ್ತಿರುವ ಪರಿಹಾರ ಎಷ್ಟು ಕೋತಿ ಗೊತ್ತೇ??
Kannada News: ನಟಿ ಪವಿತ್ರ ಲೋಕೇಶ್ (Pavitra Lokesh) ಹಾಗೂ ನರೇಶ್ (Naresh) ಅವರ ಜೋಡಿಯ ಬಗ್ಗೆ ಸಾಕಷ್ಟು ಸುದ್ದಿ ಆಗುತ್ತಲೇ ಇದೆ. ಈ ಜೋಡಿಯ ನಡುವೆ ಏನೋ ಇದೆ ಎನ್ನುವ ಗಾಸಿಪ್ ಗಳು ಮಾಧ್ಯಮಗಳಲ್ಲಿ ಕೇಳಿ ಬರುತ್ತಿರುವ ಹೊತ್ತಲ್ಲೇ ಮಾಧ್ಯಮದವರು ಜೊತೆಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ನರೇಶ್ ಹಾಗೂ ಪವಿತ್ರ ಅವರು ಉಳಿದುಕೊಂಡಿದ್ದ ಹೋಟೆಲ್ ಮೇಲೆ ದಾಳಿ ಮಾಡಿದ್ದು, ಆ ಸುದ್ದಿ ದೊಡ್ಡ ಮಟ್ಟದ ವೈರಲ್ಗೆ ಕಾರಣವಾಗಿತ್ತು. ಅಲ್ಲದೆ ನರೇಶ್ ಮತ್ತು ಪವಿತ್ರ ಅವರು ಮೈಸೂರಿನ ಹೋಟೆಲ್ ಒಂದರಲ್ಲಿ ಉಳಿದುಕೊಂಡು ರಮ್ಯಾ ಅವರಿಗೆ ಸಿಕ್ಕಿಬಿದ್ದಿದ್ದರು. ಆಗ ಅವರ ಮೇಲೆ ರಮ್ಯಾ ದಾಳಿ ಮಾಡುವ ಪ್ರಯತ್ನವನ್ನು ಮಾಡಿದ್ದರು. ಇಷ್ಟೆಲ್ಲಾ ಡ್ರಾಮಾ ನಡುವೆ ಇದೀಗ ನರೇಶ್ ಪವಿತ್ರ ಮದುವೆಯಾಗುತ್ತಿದ್ದಾರೆ. ಅಲ್ಲದೆ ಇದಕ್ಕಾಗಿ ನರೇಶ್ ರಮ್ಯಾ ಅವರಿಗೆ ನೀಡುತ್ತಿರುವ ಪರಿಹಾರದ ಹಣ ಎಷ್ಟೆಂದು ತಿಳಿದರೆ ನಿಜಕ್ಕೂ ಶಾಕ್ ಆಗುತ್ತದೆ.
ಮೈಸೂರಿನಲ್ಲಿ ತಮ್ಮ ಮೂರನೇ ಪತ್ನಿ ಹಾಗೂ ಮಾಧ್ಯಮದವರ ಮುಂದೆ ಸಿಕ್ಕಿಹಾಕಿಕೊಂಡ ನಂತರ ನರೇಶ್ ಮತ್ತು ಪವಿತ್ರ ಜೋಡಿ ಬಗ್ಗೆ ದಿನಕ್ಕೊಂದು ಸುದ್ದಿಗಳು ಕೇಳಿ ಬರುತ್ತಿದ್ದವು. ತಿಂಗಳುಗಳ ಕಳೆದರೂ ಈ ಜೋಡಿಯ ಕುರಿತ ಮಾತುಗಳು ಕಮ್ಮಿಯಾಗಿಲ್ಲ. ಅಷ್ಟರಮಟ್ಟಿಗೆ ಜೋಡಿ ಹಾಟ್ ಟಾಪಿಕ್ ಆಗಿದ್ದಾರೆ. ನಮ್ಮಿಬ್ಬರ ನಡುವೆ ಏನೇನು ಇಲ್ಲ ಒಳ್ಳೆಯ ಸ್ನೇಹ ಇದೆ ಅಷ್ಟೇ. ಒಬ್ಬರ ಮೇಲೆ ಒಬ್ಬರಿಗೆ ಪರಸ್ಪರ ಗೌರವವಿದೆ. ಸುಮ್ಮನೆ ನಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಏನೇನೋ ಸೃಷ್ಟಿ ಮಾಡಿ ಹೇಳಬೇಡಿ ಎಂದು ನರೇಶ್ ಹೇಳಿದ್ದರು. ಪವಿತ್ರ ಅವರು ಸಹ ಎಲ್ಲ ವದಂತಿಗಳನ್ನು ತಳ್ಳಿ ತಳ್ಳಿ ಹಾಕಿದ್ದರು. ಆದರೆ ಇದೀಗ ಈ ಜೋಡಿ ಮದುವೆಯಾಗುವ ನಿಶ್ಚಯ ಮಾಡಿಕೊಂಡಿದೆ. ಇದನ್ನು ಓದಿ..Kannada News: ದರ್ಶನ್ ಹಾಗೂ ಸುದೀಪ್ ಯಾವಾಗ ಒಂದಾಗೋದು ಎಂಬ ಪ್ರಶ್ನೆಗೆ ವಿಚಿತ್ರವಾಗಿ ಉತ್ತರಿಸಿದ ಕ್ರಾಂತಿ ಪುಷ್ಪವತಿ. ಹೇಳಿದ್ದೇನು ಗೊತ್ತೇ??

ಹೊಸ ವರ್ಷಕ್ಕೆ ಹೊಸದೊಂದು ಸುದ್ದಿ ನೀಡಿರುವ ಈ ಜೋಡಿ ಕೊನೆಗೂ ತಾವಿಬ್ಬರು ಮದುವೆಯಾಗುತ್ತಿರುವ ವಿಷಯವನ್ನು ಬಹಿರಂಗಗೊಳಿಸಿದೆ. ಅಲ್ಲದೆ ನರೇಶ್ ಪವಿತ್ರಾಗೆ ಲಿಪ್ ಲಾಕ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈಗಾಗಲೇ ಎರಡು ಮದುವೆ ಸಂಬಂಧಗಳನ್ನು ಮುರಿದುಕೊಂಡಿದ್ದ ನರೇಶ್ ಅವರಿಗೆ ರಮ್ಯಾ ಅವರು ಮೂರನೇ ಪತ್ನಿ. ಇನ್ನೂ ಪವಿತ್ರ ಅವರ ಜೊತೆಗೆ ಮದುವೆಯಾಗಬೇಕೆಂದರೆ ನರೇಶ್ ರಮ್ಯಾ ರಘುಪತಿ ಅವರಿಗೆ ವಿಚ್ಛೇದನ ನೀಡಲೇಬೇಕಾಗುತ್ತದೆ. ವಿಚ್ಛೇದನ ನೀಡಿದರೆ ಪರಿಹಾರದ ಹಣವಾಗಿ ನರೇಶ್ ಅವರು ಐದು ಕೋಟಿ ನೀಡಲು ಯೋಚಿಸಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ರಮ್ಯಾ ಅವರು ಸಹ ವೈಯಕ್ತಿಕವಾಗಿ ಅತ್ಯಂತ ಶ್ರೀಮಂತರಾಗಿದ್ದಾರೆ. ಹೀಗಾಗಿ ಬರೀ 5 ಕೋಟಿಗೆ ಒಪ್ಪುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ. ಇದನ್ನು ಓದಿ..Kannada News: ದಿಡೀರ್ ಎಂದು ಯಾರು ಊಹಿಸದ ರೀತಿ ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್. ಹೇಳಿದ್ದೇನು ಗೊತ್ತೇ??