Kannada Astrology: ನಿಮ್ಮ ಅದೃಷ್ಟವೇ ಬದಲಾಗಿ ಹೋಗಬೇಕು ಎಂದರೆ, ಜಸ್ಟ್ 5 ವಸ್ತುಗಳಲ್ಲಿ ಒಂದನ್ನು ನಿಮ್ಮ ಮನೆ ಬಾಗಿಲ ಬಳಿ ಇಡೀ. ಸಾಕು.

38

Kannada Astrology: ಸಾಮಾನ್ಯವಾಗಿ ನಮ್ಮ ಹಿರಿಯರು ನಂಬಿಕೊಂಡು ಬಂದ ಧಾರ್ಮಿಕ ಆಚರಣೆಗಳನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶಾಸ್ತ್ರ ಹೇಳಿದ ಅದೆಷ್ಟು ನಿಯಮಗಳನ್ನು ನಾವು ಬಹಳ ಭಯ ಭಕ್ತಿಯಿಂದ ಆಚರಿಸುತ್ತೇವೆ. ಶಾಸ್ತ್ರ ಒಂದು ಒಳ್ಳೆಯ ಉದ್ದೇಶವನ್ನು ಹೊಂದಿರುವುದರಿಂದ ಅದರಿಂದ ನಮಗೆ ಒಳ್ಳೆಯದನ್ನೇ ಮಾಡುತ್ತದೆ. ವಿಶೇಷವಾಗಿ ಮನೆ ನಿರ್ಮಾಣ ಹಾಗೂ ಇತ್ಯಾದಿ ಗೃಹ ಚಟುವಟಿಕೆಗಳಲ್ಲಿ ವಾಸ್ತುವನ್ನು ನೋಡಲಾಗುತ್ತದೆ. ವಾಸ್ತುವಿನ ಪ್ರಕಾರವೇ ಮನೆ ನಿರ್ಮಾಣ ಮಾಡುವುದರ ಜೊತೆಗೆ ಪ್ರತಿಯೊಂದು ವಸ್ತುವನ್ನು ಇಡುವುದರಲ್ಲಿಯೂ ವಾಸ್ತುವನ್ನು ಗಮನಿಸಲಾಗುತ್ತದೆ. ವಾಸ್ತು ಶಾಸ್ತ್ರ ವಿಜ್ಞಾನವನ್ನೇ ಅವಲಂಬಿಸಿದೆ ಎಂದು ಸಹ ಹೇಳಲಾಗುತ್ತದೆ. ಇದರ ಜೊತೆಗೆ ಮನೆಯ ಬಾಗಿಲು ಯಾವ ದಿಕ್ಕಿನಲ್ಲಿ, ಯಾವ ರೀತಿ ಇರಬೇಕು ಎನ್ನುವುದನ್ನು ಸಹ ವಾಸ್ತುವನ್ನು ನೋಡಿಕೊಂಡು ನಿರ್ಧರಿಸಲಾಗುತ್ತದೆ.

ಇನ್ನು ಮನೆಯ ಬಾಗಿಲಿನ ಮುಂದೆ ಈ ಐದು ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಇರಿಸಿದರೂ ಸರಿಯೇ ಆ ಮನೆಯಲ್ಲಿ ನೆಮ್ಮದಿ ನೆಲೆಸುವುದರ ಜೊತೆಗೆ ಅನೇಕ ಒಳ್ಳೆಯ ಪ್ರಯೋಜನಗಳು, ಅದೃಷ್ಟ ಫಲಗಳು ಆಗಲಿದೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಆ ಐದು ವಸ್ತುಗಳು ಯಾವುದು ಎನ್ನುವುದನ್ನು ಇಲ್ಲಿ ತಿಳಿಯೋಣ. ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯ ಬಾಗಿಲನ್ನು ನಿರ್ಮಿಸುವುದರ ಜೊತೆಗೆ ಈ ಬಾಗಿಲನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಮನೆಯ ಬಾಗಿಲು ಮುಖ್ಯವಾಗಿ ಎಷ್ಟು ಸ್ವಚ್ಛವಾಗಿರುತ್ತದೆಯೋ ಅದೇ ರೀತಿ ದೇವತೆಗಳು ಪ್ರಸನ್ನರಾಗುತ್ತಾರೆ ಎಂದು ನಂಬಲಾಗಿದೆ. ಇನ್ನೂ ಬಾಗಿಲ ಮುಂದೆ ಈ ಐದು ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಇರಿಸುವುದರಿಂದಲೂ ಕೂಡ ನಾವು ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು. ಇದನ್ನು ಓದಿ..Kannada Astrology: ಈ ವರ್ಷ ಭಾರತಕ್ಕೆ ಕಾದಿದೆಯೇ ಮಹಾ ಗಂಡಾತರ?? ಬಾಬಾ ವಂಗ ನುಡಿದಿರುವ ಭವಿಷ್ಯ ಕೇಳಿದರೆ, ಮೈಯೆಲ್ಲಾ ನಡುಗುತ್ತದೆ.

ಮೊದಲನೇದಾಗಿ ಮನೆ ಬಾಗಿಲಿನ ಮುಂದೆ ಎರಡು ಬದಿಗಳಲ್ಲಿ ಸ್ವಸ್ತಿಕ್ ಚಿನ್ನೆಯನ್ನು ಇರಿಸುವುದು ಶುಭಕರವಾಗಿದೆ ಈ ಚಿಹ್ನೆ ಕೆಂಪು ಬಣ್ಣದಿಂದ ಕೂಡಿದ್ದರೆ ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ಕುಟುಂಬದ ಸದಸ್ಯರ ಆರೋಗ್ಯದಲ್ಲಿ ವೃದ್ಧಿಯಾಗಿ, ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗುವುದಿಲ್ಲ. ಸಾಮಾನ್ಯವಾಗಿ ಯಾವುದೇ ಒಂದು ಶುಭ ಕಾರ್ಯ ಅಥವಾ ಶಾಸ್ತ್ರವಿದ್ದರೂ ಮೊದಲಿಗೆ ಪುರೋಹಿತರು ಕಳಶ ಇಟ್ಟು ಅದಕ್ಕೆ ಪೂಜೆ ಸಲ್ಲಿಸಿ ಪೂಜೆಯನ್ನು ಶುರು ಮಾಡುತ್ತಾರೆ. ಏಕೆಂದರೆ ಕಳಶ ಅತ್ಯಂತ ಪೂಜನೀಯ ಎಂದು ಭಾವಿಸಲಾಗಿದೆ. ಹೀಗಾಗಿ ಮನೆಯ ಮುಂದೆ ಕಳಶ ಇಡುವುದು ಕೂಡ ಶುಭಕರವಾಗಿದ್ದು, ಈ ರೀತಿ ಮಾಡುವುದರಿಂದಾಗಿ ಮನೆಯಲ್ಲಿ ಸಮೃದ್ಧಿ, ಸಂಪತ್ತು ನೆಲೆಸಲಿದೆ.

ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡುವುದು ಮಾತ್ರವಲ್ಲ ಆ ಬಾಗಿಲಿಗೆ ಅಲಂಕಾರ ಮಾಡುವುದು ಮುಖ್ಯವಾಗುತ್ತದೆ. ಅದರಲ್ಲೂ ಮನೆಯ ಬಾಗಿಲಿಗೆ ಹೂವಿನ ಅಲಂಕಾರ ಮಾಡುವುದು ಶ್ರೇಯಸ್ಕರ. ಇದಲ್ಲದೆ ಹಣ್ಣು, ಎಲೆಗಳಿಂದಲೂ ಕೂಡ ಬಾಗಿಲಿನ ಅಲಂಕಾರ ಮಾಡಬಹುದಾಗಿದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ ಹಾಗೂ ಸಮೃದ್ಧಿ ನೆಲೆಸುತ್ತದೆ. ಜೊತೆಗೆ ಈ ರೀತಿ ಅಲಂಕಾರ ಮಾಡಿದ ನಂತರ ಹೂವು ಅಥವಾ ತಳಿರು ತೋರಣ ಒಣಗಿದ ಕೂಡಲೇ ಅದನ್ನು ತೆಗೆದುಬಿಡಬೇಕು. ಇನ್ನು ಮನೆಯ ಮುಂದೆ ತುಳಸಿ ಗಿಡವನ್ನು ನೆಡುವುದು ಒಳ್ಳೆಯದು. ತುಳಸಿ ಗಿಡದ ಮಹತ್ವ ಏನು ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇರುತ್ತದೆ. ಈ ಗಿಡದಲ್ಲಿ ದೇವಿ ಲಕ್ಷ್ಮಿ ನೆಲೆಸಿರುತ್ತಾಳೆ. ಹೀಗಾಗಿ ಮನೆಯಲ್ಲಿ ಮನೆಯ ಬಾಗಿಲ ಮುಂಭಾಗದಲ್ಲಿ ತುಳಸಿ ಗಿಡವನ್ನು ನೆಡುವುದರಿಂದಾಗಿ ಕೇವಲ ಲಕ್ಷ್ಮಿ ಮಾತ್ರವಲ್ಲದೆ ವಿಷ್ಣು, ಶಿವ, ಶನಿ ಹೀಗೆ ಅನೇಕ ದೇವತೆಗಳು ಪ್ರಸನ್ನರಾಗುತ್ತಾರೆ. ಇದರ ಜೊತೆಗೆ ಮನೆಯ ಮುಂದೆ ಗಣೇಶನ ಫೋಟೋ ಅಥವಾ ವಿಗ್ರಹ ಇರಿಸುವುದು ಒಳ್ಳೆಯದು. ಏಕೆಂದರೆ ಗಣೇಶನನ್ನು ಪ್ರಥಮ ಪೂಜಿತ ಮತ್ತು ಸಂಕಷ್ಟ ನಿವಾರಕ ಎಂದು ನಂಬಲಾಗಿದೆ. ಗಣೇಶನನ್ನು ಪೂಜಿಸುವುದರಿಂದಾಗಿ ಎಲ್ಲ ಕಷ್ಟಗಳು ನಿವಾರಣೆಯಾಗುತ್ತವೆ. ಇದನ್ನು ಓದಿ.. Kannada Astrology: ಈ ರಾಶಿಗಳಿಗೆ ಎಷ್ಟೇ ಕಷ್ಟ ಇರಲಿ, ಅದು ಎರಡು ವಾರ ಮಾತ್ರ, ಇನ್ನು ಮುಗಿಯಿತು ಕಷ್ಟ: ಶನಿ ದೇವ ಅದೃಷ್ಟ ನೀಡುವ ರಾಶಿಗಳು ಯಾವ್ಯಾವು ಗೊತ್ತೇ??