Kannada News: ದಿಡೀರ್ ಎಂದು ಯಾರು ಊಹಿಸದ ರೀತಿ ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್. ಹೇಳಿದ್ದೇನು ಗೊತ್ತೇ??

62

Kannada News: ನಟಿ ರಾಧಿಕಾ ಪಂಡಿತ್ (Radhika Pandit) ಸದ್ಯ ಚಿತ್ರಗಳಲ್ಲಿ ನಟಿಸುತ್ತಿಲ್ಲವಾದರೂ ಕೂಡ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡೆ ಬಂದಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಅವರ ಪತ್ನಿಯಾಗಿರುವ ರಾಧಿಕಾ ಪಂಡಿತ್ ಇದೀಗ ತಮ್ಮ ಕುಟುಂಬದ ಕಡೆಗೆ ಹೆಚ್ಚಿನ ಸಮಯ ನೀಡುತ್ತಿದ್ದಾರೆ. ಯಶ್ ಹಾಗೂ ರಾಧಿಕಾ ಅವರ ಮದುವೆ ನಿಶ್ಚಯವಾದ ನಂತರ ರಾಧಿಕ್ ಅವರು ಇದುವರೆಗೆ ಯಾವುದೇ ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಮದುವೆಯಾದ ನಂತರ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಇದೀಗ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಗುಡ್ ನ್ಯೂಸ್ ನೀಡಿದ್ದಾರೆ.

ಮೊಗ್ಗಿನ ಮನಸ್ಸು (Moggina Manasu) ಚಿತ್ರದ ಮೂಲಕ ಬೆಳ್ಳಿತರೆಗೆ ಪಾದಾರ್ಪಣೆ ಮಾಡಿದ ರಾಧಿಕಾ ಪಂಡಿತ್ ಆನಂತರ ಚಂದನವನದ ಟಾಪ್ ನಟಿಯರಲ್ಲಿ ಒಬ್ಬರಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ. ಒಂದು ಕೂಡ ವಿವಾದ ಇಲ್ಲದೆ ಜನರ ಪ್ರೀತಿಯನ್ನು ಅವರು ಪಡೆದುಕೊಂಡಿದ್ದಾರೆ. ಮದುವೆಯಾದ ನಂತರ ಅವರು ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಹೀಗಿದ್ದರೂ ಕೂಡ ಅವರು ಚಿತ್ರರಂಗಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳಲ್ಲಿ ಆಗಾಗ ಪಾಲ್ಗೊಳ್ಳುತ್ತಿರುತ್ತಾರೆ. ಅನೇಕ ವೇದಿಕೆಗಳಲ್ಲಿ ತಮ್ಮ ಪತಿ ಯಶ್ (Yash) ಅವರ ಜೊತೆಗೆ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಇದೆಲ್ಲದೆ ಪ್ರೀಮಿಯರ್ ಶೋ, ಟ್ರೈಲರ್, ಟೀಸರ್ ರಿಲೀಸ್, ಟಿವಿ ರಿಯಾಲಿಟಿ ಶೋ ಇತ್ಯಾದಿ ಕಾರ್ಯಕ್ರಮಗಳಲ್ಲಿ ನಟಿ ರಾಧಿಕಾ ಪಂಡಿತ್ ಆಗಾಗ ಭಾಗವಹಿಸುತ್ತಾರೆ. ಇದನ್ನು ಓದಿ..Biggboss Kannada: ಪ್ರೀತಿ ಪಕ್ಷಿಗಳಾಗಿ ಹಾರಾಡಿ, ದೇಶವೇ ಮೆಚ್ಚಿದ್ದ ಅರವಿಂದ್-ದಿವ್ಯ ಮದುವೆಯಾದರೆ ಏನಾಗುತ್ತದೆ ಅಂತೇ ಗೊತ್ತೇ? ಷಾಕಿಂಗ್ ಭವಿಷ್ಯ ನುಡಿದ ಗುರೂಜಿ, ಕಣ್ಣೀರಿಟ್ಟ ಫ್ಯಾನ್ಸ್.

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ರಾಧಿಕಾ ಪಂಡಿತ್ ನಿರಂತರವಾಗಿ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಅಲ್ಲದೆ ತಮ್ಮ ಕುಟುಂಬದ ವಿಶೇಷ ಕಾರ್ಯಕ್ರಮಗಳ ಫೋಟೋಗಳು ಹಾಗೂ ತಮ್ಮ ಮಕ್ಕಳ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗಷ್ಟೇ ರಾಧಿಕಾ ಪಂಡಿತ್ ತಮ್ಮ ಮನೆಯಲ್ಲಿ ಆಚರಿಸಿದ ಕ್ರಿಸ್ಮಸ್ ಫೋಟೋಗಳನ್ನು ಹಂಚಿಕೊಂಡಿದ್ದರು. ನಟಿ ರಾಧಿಕಾ ಪಂಡಿತ್ ಮದುವೆಯಾದ ನಂತರ ಯಾವುದೇ ಚಿತ್ರದಲ್ಲಿಯೂ ಅಭಿನಯಿಸುತ್ತಿಲ್ಲ. ಅವರು ಮತ್ತೆ ಚಿತ್ರರಂಗಕ್ಕೆ ಯಾವಾಗ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಆಗಾಗ ಕೇಳುತ್ತಲೇ ಇರುತ್ತಾರೆ. ಇದೀಗ ಅಭಿಮಾನಿಗಳಿಗೆ ನಟಿ ರಾಧಿಕಾ ಪಂಡಿತ್ ಗುಡ್ ನ್ಯೂಸ್ ನೀಡಿದ್ದಾರೆ. ಅವರು ಮತ್ತೆ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಈ ರೀತಿಯ ಇಂತಹದೊಂದು ಸುದ್ದಿ ಹೊರ ಬಿದ್ದಿದ್ದು ತೆರೆ ಮರೆಯಲ್ಲಿ ನಟಿ ರಾಧಿಕಾ ಪಂಡಿತ್ ಮತ್ತೆ ನಟನೆಗೆ ಮರಳುವುದರ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಓದಿ.. Kannada News: ಟ್ರೋಲ್ಸ್ ಗಳನ್ನೂ ತಡೆದುಕೊಳ್ಳಲಾರದೆ ಗಟ್ಟಿ ನಿರ್ಧಾರ ಮಾಡಿದ ರಶ್ಮಿಕಾ: ಇನ್ನು ಸಿನಿ ಜೀವನ ಕಥಂ ಆಗೋದು ಪಕ್ಕನಾ? ಬೀದಿಯಲ್ಲಿ ಕಣ್ಣೀರಿಟ್ಟ ಫ್ಯಾನ್ಸ್.