Kannada News: ದರ್ಶನ್ ಹಾಗೂ ಸುದೀಪ್ ಯಾವಾಗ ಒಂದಾಗೋದು ಎಂಬ ಪ್ರಶ್ನೆಗೆ ವಿಚಿತ್ರವಾಗಿ ಉತ್ತರಿಸಿದ ಕ್ರಾಂತಿ ಪುಷ್ಪವತಿ. ಹೇಳಿದ್ದೇನು ಗೊತ್ತೇ??

17

Kannada News: ಕ್ರಾಂತಿ (Kranthi) ಚಿತ್ರ ದಿನೇ ದಿನೇ ಅಭಿಮಾನಿಗಳಿಗೆ ನಿರೀಕ್ಷೆಯನ್ನು ಹೆಚ್ಚಾಗಿಸುತ್ತಲೇ ಇದೆ. ಇನ್ನು ಮೊನ್ನೆ ಮೊನ್ನೆ ಅಷ್ಟೇ ಚಿತ್ರದ ಮೂರನೇ ಹಾಡಾದ ಶೇಕ್ ಇಟ್ ಪುಷ್ಪವತಿ ಹಾಡು ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ದರ್ಶನ್ (Darshan) ಜೊತೆಗೆ ಮಂಗಳೂರು ಬೆಡಗಿ ನಿಮಿಕಾ ರತ್ನಾಕರ್ (Nimika Rathnakar) ಅವರು ಹೆಜ್ಜೆ ಹಾಕಿದ್ದಾರೆ. ಈ ಹಾಡು ಇದೀಗ ಸಾಕಷ್ಟು ಟ್ರೆಂಡ್ ಸೃಷ್ಟಿಸುತ್ತಿದ್ದು, ಎಲ್ಲರ ಬಾಯಲ್ಲಿ ಗುನುಗುವಂತಾಗಿದೆ. ಎಲ್ಲೆಡೆ ಪುಷ್ಪವತಿಯ ಹಾಡು ಕೇಳಿ ಬರುತ್ತಿದೆ. ಇತ್ತೀಚಿಗೆ ನಟಿ ನಿಮಿಕಾ ಅವರ ಸಂದರ್ಶನದಲ್ಲಿ ಅವರಿಗೆ ದರ್ಶನ್ ಸುದೀಪ್ ಅವರ ಸ್ನೇಹದ ಬಗ್ಗೆ ಪ್ರಶ್ನಿಸಲಾಗಿದೆ. ಆದರೆ ಇದಕ್ಕೆ ಸಾಮಾನ್ಯವಾಗಿ ಎಲ್ಲರೂ ನಿರೀಕ್ಷಿಸುವುದಕ್ಕಿಂತಲೂ ಬೇರೆಯದೇ ರೀತಿಯಾಗಿ ಅವರು ಉತ್ತರಿಸಿದ್ದಾರೆ. ಇದೀಗ ಪುಷ್ಪವತಿ ನಿಮಿಕಾ ನೀಡಿದ ಉತ್ತರ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.

ಪುಷ್ಪವತಿ ಹಾಡು ಸಾಕಷ್ಟು ಸದ್ದು ಮಾಡುತ್ತಿದೆ. ನಟಿ ರಚಿತಾ ರಾಮ್ (Rachita Ram) ಜೊತೆಗೆ, ಕೇವಲ ಒಂದು ಹಾಡಿನಲ್ಲಿ ಕಾಣಿಸಿಕೊಂಡಿರುವ ನಿಮಿಕ ಅವರಿಗೂ ಕೂಡ ಅಭಿಮಾನಿಗಳು ಸೃಷ್ಟಿಯಾಗುತ್ತಿದ್ದಾರೆ. ಅವರ ಭರ್ಜರಿ ಸ್ಟೆಪ್ಸ್ ನೋಡಿ ಫಿದಾ ಆಗಿದ್ದಾರೆ. ಇದೀಗ ಈ ಮಂಗಳೂರು ಬೆಡಗಿ ಕರ್ನಾಟಕದ ಹೊಸ ಕ್ರಶ್ ಎಂದು ಮೀಮ್ಸ್ ಮಾಡಲಾಗುತ್ತಿದೆ. ಒಂದು ಹಾಡಿನ ಮೂಲಕ ನಿಮಿಕಾ ಜನಪ್ರಿಯತೆ 100 ಪಟ್ಟು ಹೆಚ್ಚಾಗಿದೆ. ಅಲ್ಲದೆ ಅವರಿಗೆ ಹೊಸ ಹೊಸ ಅವಕಾಶಗಳು ಕೂಡ ಕೇಳಿ ಬರುತ್ತಿವೆಯಂತೆ. ಅಂದಹಾಗೆ ಈ ಹಾಡು ಇತ್ತೀಚಿಗಷ್ಟೇ ಹುಬ್ಬಳ್ಳಿಯಲ್ಲಿ ಬಿಡುಗಡೆಗೊಂಡಿತು. ಹಾಡು ಬಿಡುಗಡೆಗೊಂಡ ದಿನದಿಂದ ಇಲ್ಲಿಯವರೆಗೂ ಕೂಡ ಜನರ ಪ್ರತಿಕ್ರಿಯೆ ಭರ್ಜರಿಯಾಗಿ ಸಿಗುತ್ತಿದೆ. ಇದನ್ನು ಓದಿ..Kannada News: ದರ್ಶನ್ ರವರ ಕ್ರಾಂತಿ ಸಿನಿಮಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ರಚಿತಾ ರಾಮ್. ಹುಡುಗರಂತೂ ಫುಲ್ ಫಿದಾ. ಹೇಗಿದೆ ಗೊತ್ತೇ?

ಇನ್ನು ಈ ಹಾಡಿನ ಜನಪ್ರಿಯತೆಯ ನಂತರ ನಿಮಿಕಾ ಅವರು ಸಾಕಷ್ಟು ಮಾಧ್ಯಮಗಳ ಜೊತೆಗೆ ಸಂದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚಿಗೆ ಅವರು ನೀಡಿದ ಸಂದರ್ಶನದಲ್ಲಿ ಅವರನ್ನು ನಟ ದರ್ಶನ್ ಮತ್ತು ಸುದೀಪ್ (Sudeep) ಅವರು ಮತ್ತೆ ಒಂದಾಗುವ ಮುನ್ಸೂಚನೆ ಏನಾದರೂ ಇದೆಯೇ ಎಂದು ಪ್ರಶ್ನೆಸಲಾಗಿದೆ. ಇದಕ್ಕೆ ನಟಿ ನಿಮಿಕಾ ಸಾಕಷ್ಟು ಬೋಲ್ಡ್ ಮತ್ತು ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ. “ಅವರಿಬ್ಬರೂ ಒಂದಾಗುವ ಅಗತ್ಯವೇನಿದೆ? ಅವರು ಬೇರೆಯಾಗಿದ್ದರೆ ತಾನೇ ಮತ್ತೆ ಒಂದಾಗುವ ಮಾತು. ನಾನು ನನ್ನ ಬೆಸ್ಟ್ ಫ್ರೆಂಡ್ ಜೊತೆ ದಿನನಿತ್ಯವೂ ಮಾತನಾಡುತ್ತೇನೆ. ಆದರೆ ಅದೆಲ್ಲವನ್ನು ನಿಮ್ಮ ಜೊತೆ ಹೇಳಿಕೊಳ್ಳಬೇಕು ಎಂದೇನೂ ಇಲ್ಲ. ಇದು ಸಹ ಹಾಗೆಯೇ, ದರ್ಶನ್ ಸರ್ ಮತ್ತು ಸುದೀಪ್ ಸರ್ ಅವರು ಇಬ್ಬರೂ ಸಹ ಇಂದಿಗೂ ಅದೇ ರೀತಿಯ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದಾರೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ.. Kannada News: ಕಳೆದ ವರ್ಷ ಎಲ್ಲಿ ನೋಡಿದರೂ ಅದಿತಿ ರವರದ್ದೇ ಹವಾ, ಟಾಪ್ ನಟಿಯರ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಅದಿತಿ.