Biggboss Kannada: ನಿಜ ನನಗೆ 50 ಲಕ್ಷ ಸಿಗಲಿಲ್ಲ, ಆದರೆ ರೂಪೇಶ್ ರಾಜಣ್ಣ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೆ??

63

Biggboss Kannada: ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ಸೀಸನ್ 9 (Biggboss Kannada Season 9) ಗ್ರಾಂಡ್ ಫಿನಾಲೆ ಮೂಲಕ ಮುಕ್ತಾಯಗೊಂಡಿದೆ. ಈ ಕಾರ್ಯಕ್ರಮದಲ್ಲಿ ರೂಪೇಶ್ ರಾಜಣ್ಣ ಮೂರನೇ ರನ್ನರ್ ಅಪ್ ಆಗಿದ್ದಾರೆ. ರೂಪೇಶ್ ರಾಜಣ್ಣ (Roopesh Rajanna) ಈ ಮೊದಲು ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡವರು. ಕನ್ನಡ, ಕರ್ನಾಟಕದ ವಿಷಯವಾಗಿ ಯಾವುದೇ ಕಾರ್ಯಕ್ರಮ, ಅನ್ಯಾಯ, ಹೋರಾಟಗಳಿದ್ದರೂ ಅವುಗಳಲ್ಲಿ ಮುಂಚೂಣಿಯಾಗಿ ರೂಪೇಶ್ ರಾಜಣ್ಣ ಕಾಣಿಸಿಕೊಳ್ಳುತ್ತಿದ್ದರು. ಈ ಮೂಲಕ ಅವರು ಕನ್ನಡದ ಪರವಾಗಿ ಅಪಾರ ಕಳಕಳಿ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇನ್ನು ಯಾವುದೇ ಹಿನ್ನೆಲೆ ಮತ್ತು ಜನಪ್ರಿಯತೆ ಇಲ್ಲದೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ರೂಪೇಶ್ ರಾಜಣ್ಣ ಗ್ರಾಂಡ್ ಫಿನಾಲೆವರೆಗೂ ಇದ್ದರು. ಬಿಗ್ ಬಾಸ್ ಮುಗಿದ ನಂತರ ರೂಪೇಶ್ ರಾಜಣ್ಣ ಸಂದರ್ಶನ ಒಂದರಲ್ಲಿ ತಮಗೆ ಶೋ ಇಂದ 50 ಲಕ್ಷ ಸಿಗದೇ ಇರುವುದರ ಕುರಿತಾಗಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ರೂಪೇಶ್ ರಾಜಣ್ಣ ಅವರ ವಿಷಯದಲ್ಲಿ ಮತ್ತೊಂದು ವಿಶೇಷ ಅಂಶವೇನೆಂದರೆ ಗ್ರಾಂಡ್ ಫಿನಾಲೆಗೆ ತಲುಪಿದ ಸ್ಪರ್ಧಿಗಳಲ್ಲಿ ನವೀನರ ವಿಭಾಗದಲ್ಲಿ ಗ್ರಾಂಡ್ ಫಿನಾಲೆವರೆಗೂ ಬಂದಿದ್ದ ಏಕೈಕ ವ್ಯಕ್ತಿ ಎಂದರೆ ಅದು ರಾಜಣ್ಣ. ಉಳಿದ ಎಲ್ಲಾ ಸ್ಪರ್ಧಿಗಳಿಗೆ ಈ ಮೊದಲೇ ಬಿಗ್ ಬಾಸ್ ಮನೆಯ ಕುರಿತ ಅನುಭವವಿತ್ತು. ಆದರೆ ಬಿಗ್ ಬಾಸ್ ಮನೆ ಹೇಗಿರುತ್ತದೆ ಎಂದೇ ಗೊತ್ತಿಲ್ಲದೆ ಮನೆಗೆ ಎಂಟ್ರಿಕೊಟ್ಟು ಗ್ರಾಂಡ್ ಫಿನಾಲೆವರೆಗೂ ತಲುಪಿದ್ದು ರೂಪೇಶ್ ರಾಜಣ್ಣ ಎನ್ನುವುದು ವಿಶೇಷವೇ ಸರಿ. ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಇವರು ಹೆಚ್ಚು ದಿನಗಳ ಕಾಲ ಇರಲಾರರು ಎಂದೇ ಭಾವಿಸಲಾಗಿತ್ತು. ರಾಜಣ್ಣ ಬಿಗ್ ಬಾಸ್ ಸೀಸನ್ 9ರ 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರಿಗೆ ಗೆಲುವಿನ ಮೊತ್ತದ ರೂಪದಲ್ಲಿ ಮೂರು ಲಕ್ಷ ರೂಪಾಯಿ ಮೊತ್ತವನ್ನು ನೀಡಲಾಗಿದೆ. ಇದನ್ನು ಓದಿ..Kannada News: ದರ್ಶನ್ ಹಾಗೂ ಸುದೀಪ್ ಯಾವಾಗ ಒಂದಾಗೋದು ಎಂಬ ಪ್ರಶ್ನೆಗೆ ವಿಚಿತ್ರವಾಗಿ ಉತ್ತರಿಸಿದ ಕ್ರಾಂತಿ ಪುಷ್ಪವತಿ. ಹೇಳಿದ್ದೇನು ಗೊತ್ತೇ??

ಸಾಮಾನ್ಯವಾಗಿ ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಇವರಿಗೆ ಹೆಚ್ಚಿನ ಜನಪ್ರಿಯತೆ ಇರಲಿಲ್ಲ. ಆದರೆ ಇವರ ಸ್ವಂತ ಪ್ರತಿಭೆ ಮತ್ತು ಆಟ ಆಡುವ ಶೈಲಿಯಿಂದಾಗಿ ದಿನೇ ದಿನೇ ಇವರ ಜನಪ್ರಿಯತೆ ಹೆಚ್ಚಾಗ ತೊಡಗಿತ್ತು. ವಾರದಿಂದ ವಾರಕ್ಕೆ ಅವರು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದರು. ಆಟ, ಮನರಂಜನೆ, ಸ್ಪರ್ಧೆ, ಜಗಳ ಎಲ್ಲ ವಿಷಯದಲ್ಲಿಯೂ ಇವರು ಸದಾ ಮುಂದಿದ್ದರು. ಇನ್ನು ಬಿಗ್ ಬಾಸ್ ಮುಗಿದ ನಂತರ ಮನೆಯಿಂದ ಹೊರಗೆ ಬಂದಿರುವ ರೂಪೇಶ್ ರಾಜಣ್ಣ ಟಿವಿ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇದೇ ವೇಳೆ ಸಂದರ್ಶನ ಒಂದರಲ್ಲಿ ಅವರಿಗೆ ವಿಶೇಷವಾದ ಗಿಫ್ಟ್ ಒಂದನ್ನು ನೀಡಲಾಗಿದೆ. ಅದನ್ನು ಸ್ವೀಕರಿಸಿದ ರಾಜಣ್ಣ ಬಿಗ್ ಬಾಸ್ ಕಡೆಯಿಂದ 50 ಲಕ್ಷ ಅಂತೂ ಸಿಗಲಿಲ್ಲ, ಆದರೆ ಅದಕ್ಕಿಂತಲೂ ಬೆಳೆ ಬಾಳುವ ಈ ಗಿಫ್ಟ್ ನನಗೆ ಸಿಕ್ಕಿದೆ ಎಂದು ತಮಾಷೆ ಮಾಡಿದ್ದಾರೆ. ಇದನ್ನು ಓದಿ.. Kannada News: ದಿಡೀರ್ ಎಂದು ಯಾರು ಊಹಿಸದ ರೀತಿ ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್. ಹೇಳಿದ್ದೇನು ಗೊತ್ತೇ??