Kannada News: ದರ್ಶನ್ ರವರ ಕ್ರಾಂತಿ ಸಿನಿಮಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ರಚಿತಾ ರಾಮ್. ಹುಡುಗರಂತೂ ಫುಲ್ ಫಿದಾ. ಹೇಗಿದೆ ಗೊತ್ತೇ?

12

Kannada News: ಬಹುನಿರೀಕ್ಷಿತ ಕ್ರಾಂತಿ (Kranthi) ಸಿನಿಮಾದ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಚಿತ್ರತಂಡ ರಾಜ್ಯದ ಎಲ್ಲೆಡೆ ಪ್ರಚಾರ ಕಾರ್ಯವನ್ನು ಬಿರುಸಿನಿಂದ ನಡೆಸುತ್ತಿದೆ. ಇದಲ್ಲದೆ ಚಿತ್ರವು ಪ್ರತಿ ಒಂದೊಂದು ಹಾಡನ್ನು ಒಂದೊಂದು ಜಿಲ್ಲೆಗಳಲ್ಲಿ ಬಿಡುಗಡೆ ಮಾಡುತ್ತಾ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇದೇ ಜನವರಿ 26ರಂದು ತೆರೆ ಕಾಣಲಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಕ್ರಾಂತಿ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದ ಮೊದಲ ಹಾಡನ್ನು ಮೈಸೂರಿನಲ್ಲಿ, ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆಗೊಡಿಸಲಾಗಿತ್ತು. ಇನ್ನು ಚಿತ್ರದ ಮೂರನೇ ಹಾಡನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆಗೊಳಿಸಲಾಗಿದ್ದು, ಪುಷ್ಪವತಿ ಹಾಡು ಸಾಕಷ್ಟು ಟ್ರೆಂಡ್ ಸೃಷ್ಟಿಸುತ್ತಿದೆ. ಇದೀಗ ಟೇಕ್ ಇಟ್ ಪುಷ್ಪವತಿ ಹಾಡಿಗೆ ರಚಿತಾ ರಾಮ್ ಭರ್ಜರಿ ಸ್ಟೆಪ್ಸ್ ಹಾಕಿದ್ದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಒಂದೊಂದು ಜಿಲ್ಲೆಯಲ್ಲಿ ಕ್ರಾಂತಿ ಸಿನಿಮಾದ ಒಂದೊಂದು ಹಾಡನ್ನು ಬಿಡುಗಡೆಗೊಳಿಸಲಾಗುತ್ತಿದೆ. ಕನ್ನಡ ನಾಡಿನ ಕುರಿತಾಗಿ ವಿಶೇಷ ಸಾಹಿತ್ಯ ಒಳಗೊಂಡ ಧರಣಿ ಹಾಡನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಆನಂತರ ಬೊಂಬೆ ಬೊಂಬೆ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇನ್ನೂ ಕಳೆದ ಡಿಸೆಂಬರ್ 25ರಲ್ಲಿ ಚಿತ್ರದ ಟೇಕ್ ಇಟ್ ಪುಷ್ಪವತಿ ಹಾಡನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಯಿತು. ಹುಬ್ಬಳ್ಳಿ ಮಂದಿ ಪುಷ್ಪವತಿಯ ಮೋಡಿಗೆ ಫಿದಾ ಆಗಿದ್ದಲ್ಲದೆ, ಇಡೀ ಕರುನಾಡ ಮಂದಿ ಈ ಹಾಡಿಗೆ ತಲೆದೂಗಿದ್ದರು. ಈ ಹಾಡಿನಲ್ಲಿ ನಿಮಿಕಾ ರತ್ನಾಕರ್ (Nimika Rathnakar) ಅವರ ಜೊತೆಗೆ ನಟ ದರ್ಶನ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯವಿರುವ ಈ ಹಾಡನ್ನು ಐಶ್ವರ್ಯ ರಂಗರಾಜನ್ (Aishwarya Rangarajan) ಮತ್ತು ವಿ ಹರಿಕೃಷ್ಣ (V Harikrishna) ಹಾಡಿದ್ದಾರೆ. ಇದನ್ನು ಓದಿ..Biggboss Kannada: ಪ್ರೀತಿ ಪಕ್ಷಿಗಳಾಗಿ ಹಾರಾಡಿ, ದೇಶವೇ ಮೆಚ್ಚಿದ್ದ ಅರವಿಂದ್-ದಿವ್ಯ ಮದುವೆಯಾದರೆ ಏನಾಗುತ್ತದೆ ಅಂತೇ ಗೊತ್ತೇ? ಷಾಕಿಂಗ್ ಭವಿಷ್ಯ ನುಡಿದ ಗುರೂಜಿ, ಕಣ್ಣೀರಿಟ್ಟ ಫ್ಯಾನ್ಸ್.

ಪುಷ್ಪವತಿ ಹಾಡು ಇದೀಗ ಸಾಕಷ್ಟು ಸದ್ದು ಮಾಡುತ್ತಿದ್ದು ಎಲ್ಲೇ ಕೇಳಿದರೂ ಈ ಹಾಡೇ ಕೇಳಿ ಬರುತ್ತಿದೆ. ಅಷ್ಟರ ಮಟ್ಟಿಗೆ ಪುಷ್ಪವತಿ ಹವಾ ಸೃಷ್ಟಿಸಿದೆ. ಇದೀಗ ಈ ಹಾಡಿಗೆ ನಟಿ ರಚಿತಾ ರಾಮ್ (Rachita Ram) ಅದ್ದೂರಿ ಸ್ಟೆಪ್ಸ್ ಹಾಕಿರೋದು ಅಭಿಮಾನಿಗಳಿಗೆ ಖುಷಿಯಾಗಿದೆ. ಗುಲಾಬಿ ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿರುವ ನಟಿ ರಚಿತಾ ರಾಮ್ ಟೇಕ್ ಇಟ್ ಪುಷ್ಪವತಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಇನ್ಸ್ತ್ರಗ್ರಂನಲ್ಲಿ ಹಂಚಿಕೊಂಡಿರುವ ನಟಿ ರಚಿತಾ ರಾಮ್ ಹಾಡಿನಲ್ಲಿ ಫುಲ್ ಮಿಂಚಿಂಗ್ ಅಂತಲೇ ಹೇಳಬಹುದು. ಪುಷ್ಪವತಿ ಹಾಡಿಗೆ ರೀಲ್ ವಿಡಿಯೋ ಮಾಡಿರುವ ಅವರು ಅದನ್ನು ಹಂಚಿಕೊಂಡಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಲಕ್ಷಾಂತರ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದು, ಸಾವಿರಾರು ಜನರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ಹಾಡು ಟ್ರೆಂಡಿಂಗ್ ಸೃಷ್ಟಿಸಿದೆ. ಇದನ್ನು ಓದಿ.. Kannada News: ಟ್ರೋಲ್ಸ್ ಗಳನ್ನೂ ತಡೆದುಕೊಳ್ಳಲಾರದೆ ಗಟ್ಟಿ ನಿರ್ಧಾರ ಮಾಡಿದ ರಶ್ಮಿಕಾ: ಇನ್ನು ಸಿನಿ ಜೀವನ ಕಥಂ ಆಗೋದು ಪಕ್ಕನಾ? ಬೀದಿಯಲ್ಲಿ ಕಣ್ಣೀರಿಟ್ಟ ಫ್ಯಾನ್ಸ್.