Kannada News: ಕಳೆದ ವರ್ಷ ಎಲ್ಲಿ ನೋಡಿದರೂ ಅದಿತಿ ರವರದ್ದೇ ಹವಾ, ಟಾಪ್ ನಟಿಯರ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಅದಿತಿ.
Kannada News: ನಟಿ ಅದಿತಿ ಪ್ರಭುದೇವ (Aditi Prabhudeva) ಸದ್ಯ ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಅವರು ಸದ್ಯ ಕನ್ನಡ ಚಿತ್ರರಂಗದಲ್ಲಿ ಬಿಸಿ ಆಗಿರುವ ನಟಿ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ಅವರು ಆನಂತರ ಚಿತ್ರರಂಗದಲ್ಲಿ ಒಂದೊಂದೇ ಹೆಜ್ಜೆ ಇರಿಸುತ್ತಾ ಇದೀಗ ಟಾಪ್ ನಟಿಯರಲ್ಲಿ ಒಬ್ಬರೆಂದು ಕರೆಸಿಕೊಳ್ಳುತ್ತಿದ್ದಾರೆ. ಗುಂಡ್ಯಾನ ಹೆಂಡತಿ ಹಾಗೂ ನಾಗಕನ್ನಿಕೆ ಧಾರವಾಹಿಯಲ್ಲಿ ನಟಿ ಅದಿತಿ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದರು. ಆನಂತರ ಅವರಿಗೆ ಚಿತ್ರರಂಗದಿಂದ ಕರೆ ಬಂತು. ಸದ್ಯ ಕಳೆದ 2022 ರಲ್ಲಿ ಅದಿತಿಯವರ ಅತಿ ಹೆಚ್ಚು ಚಿತ್ರಗಳು ತೆರೆಕಂಡಿವೆ. ಈ ಮೂಲಕ ಅವರು ಎಲ್ಲ ನಟಿಯರ ದಾಖಲೆಗಳನ್ನು ಮುರಿದಿದ್ದಾರೆ ಎಂದು ವರದಿಯಾಗಿದೆ.
ನಟಿ ಅದಿತಿಯವರು ಕೇವಲ ನಟನೆ ಮಾತ್ರವಲ್ಲದೆ ಸಾರ್ವಜನಿಕವಾಗಿ ಅವರ ಮಾತುಗಳು ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗುತ್ತದೆ. ಬಹಳ ತೂಕದ ಅವರ ಮಾತುಗಳನ್ನು ಕೇಳುವುದೇ ಒಂದು ಚೆಂದ ಎಂದು ಅಭಿಮಾನಿಗಳು ಅಭಿಪ್ರಾಯ ಪಡುತ್ತಾರೆ. ಎಲ್ಲವನ್ನು ನೇರವಾಗಿ ಪ್ರಾಕ್ಟಿಕಲ್ ಆಗಿ ಮಾತನಾಡುವ ಅವರು ತಮ್ಮ ನೇರ ನುಡಿಗೆ ಹೆಸರಾಗಿದ್ದಾರೆ. ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿತ್ರರಂಗದ ಹಿನ್ನೆಲೆ ಇರದ ವ್ಯಕ್ತಿ ಒಬ್ಬರನ್ನು ಅವರು ವರಿಸಿದ್ದಾರೆ. ಕುಟುಂಬದವರು ಸೂಚಿಸಿದ ಹುಡುಗನೊಟ್ಟಿಗೆ ಅವರು ಸುಖಿ ದಾಂಪತ್ಯವನ್ನು ಶುರು ಮಾಡಿದ್ದಾರೆ ಎಂದು ಹೇಳಬಹುದು. ಇದೀಗ ನಟಿ ಅದಿತಿ ಪ್ರಭುದೇವ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ. ಅದು ಏನೆಂದರೆ ಕಳೆದ ವರ್ಷ ಅವರ ಚಿತ್ರಗಳು ಅತಿ ಹೆಚ್ಚಾಗಿ ತೆರೆಕಂಡಿವೆ. ಈ ಮೂಲಕ ಅದೆಷ್ಟು ನಟಿಯರ ದಾಖಲೆಗಳನ್ನು ಅದಿತಿ ಪ್ರಭುದೇವ ಮುರಿದಿದ್ದಾರೆ. ಇದನ್ನು ಓದಿ..Kannada News: ಟ್ರೋಲ್ಸ್ ಗಳನ್ನೂ ತಡೆದುಕೊಳ್ಳಲಾರದೆ ಗಟ್ಟಿ ನಿರ್ಧಾರ ಮಾಡಿದ ರಶ್ಮಿಕಾ: ಇನ್ನು ಸಿನಿ ಜೀವನ ಕಥಂ ಆಗೋದು ಪಕ್ಕನಾ? ಬೀದಿಯಲ್ಲಿ ಕಣ್ಣೀರಿಟ್ಟ ಫ್ಯಾನ್ಸ್.

ಒಂಬತ್ತನೇ ದಿಕ್ಕು, ಓಲ್ಡ್ ಮಾಂಕ್, ಗಜಾನನ ಆ್ಯಂಡ್ ಗ್ಯಾಂಗ್, ಚಾಂಪಿಯನ್, ತೋತಾಪುರಿ, ತ್ರಿಬಲ್ ರೈಡಿಂಗ್ ಇಷ್ಟು ಚಿತ್ರಗಳಲ್ಲಿ ಅವರು 2022ರ ವರ್ಷದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಒಂದೊಂದು ಚಿತ್ರಗಳಲ್ಲಿಯೂ ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದಲ್ಲದೆ ಆ ಚಿತ್ರದ ಮೂಲಕ ಸಕ್ಸಸ್ ಕೂಡ ಕಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಕಳೆದ ಡಿಸೆಂಬರ್ 30ರಂದು ಅವರ ನಟನೆಯ ಎರಡು ಚಿತ್ರಗಳು ಒಂದೇ ದಿನ ತೆರೆಕಂಡಿದ್ದವು. ನಟ ಡಾಲಿ ಧನಂಜಯ್ ಅವರ ಜೊತೆಗಿನ ಜಮಾಲಿ ಗುಡ್ಡ ಚಿತ್ರ ಹಾಗೆ ಹೊಸ ಕಲಾವಿದರು ಅಭಿನಯಿಸುತ್ತಿರುವ ಪದವಿಪೂರ್ವ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಈ ಎರಡು ಚಿತ್ರಗಳು ಕಳೆದ ಡಿಸೆಂಬರ್ 30 ರಲ್ಲಿ ತೆರೆಕಂಡಿವೆ. ಈ ಮೂಲಕ ಕಳೆದ ವರ್ಷ ಅತಿ ಹೆಚ್ಚು ಚಿತ್ರಗಳಲ್ಲಿ ನಟಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಅದಿತಿಯವರ ಕೈಯಲ್ಲಿ ಇನ್ನಷ್ಟು ಚಿತ್ರಗಳಿದ್ದು ನಟನೆಯಲ್ಲಿ ಅವರು ಸಾಕಷ್ಟು ಸಕ್ರಿಯರಾಗಿದ್ದಾರೆ. ಇದನ್ನು ಓದಿ.. Kannada News: ದರ್ಶನ್ ರವರ ಕ್ರಾಂತಿ ಸಿನಿಮಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ರಚಿತಾ ರಾಮ್. ಹುಡುಗರಂತೂ ಫುಲ್ ಫಿದಾ. ಹೇಗಿದೆ ಗೊತ್ತೇ?