Kannada Astrology: ಈ ವರ್ಷ ಭಾರತಕ್ಕೆ ಕಾದಿದೆಯೇ ಮಹಾ ಗಂಡಾತರ?? ಬಾಬಾ ವಂಗ ನುಡಿದಿರುವ ಭವಿಷ್ಯ ಕೇಳಿದರೆ, ಮೈಯೆಲ್ಲಾ ನಡುಗುತ್ತದೆ.
Kannada Astrology: ಬಲ್ಗೇರಿಯನ್ ಅತೀಂದ್ರಿಯ ಭವಿಷ್ಯಗಾರ್ತಿ ಬಾಬಾ ವಂಗಾ ಅವರು ಭವಿಷ್ಯಗಾರ್ತಿಯಾಗಿ ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ. ಕೋಟ್ಯಾಂತರ ಭಕ್ತರುಗಳನ್ನು ಹೊಂದಿದ್ದಾರೆ. ಈ ಹಿಂದೆ ಅವರು ನುಡಿದಿರುವ ಅದೆಷ್ಟೋ ಭವಿಷ್ಯ ಸತ್ಯವಾಗಿದೆ. ಅಮೆರಿಕದ ಉಗ್ರ ದಾಳಿ, ಬರಾಕ್ ಒಬಾಮ ಅಧ್ಯಕ್ಷ ಚುಕ್ಕಾಣಿ ಹಿಡಿಯುವುದು, ಕೋವಿಡ್ ವೈರಸ್, ಪ್ರವಾಹ ಹೀಗೆ ಹಲವಾರು ವಿಷಯಗಳ ಕುರಿತಾಗಿ ಅವರು ಹಲವು ವರ್ಷಗಳ ಹಿಂದೆಯೇ ನುಡಿದಿದ್ದ ಭವಿಷ್ಯ ಸತ್ಯವಾಗಿದೆ. ಹೀಗಾಗಿ ಅವರು ಹೇಳುವ ಭವಿಷ್ಯವನ್ನು ಜನರು ಬಹಳ ಗಂಭೀರ ಮತ್ತು ಭಕ್ತಿಯಿಂದ ನೋಡುತ್ತಾರೆ. ಇದೀಗ ಬಾಬಾ ವಂಗ ಭಾರತದ ಬಗ್ಗೆ ಶಾಕಿಂಗ್ ಭವಿಷ್ಯವನ್ನು ನುಡಿದಿದ್ದಾರೆ. ಇದೀಗ ಈ ಭವಿಷ್ಯವನ್ನು ಕೇಳಿ ಎಲ್ಲರೂ ಆತಂಕ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತದ ಕುರಿತಾಗಿ ಭವಿಷ್ಯ ನುಡಿದಿರುವ ಬಾಬಾ ವಂಗ ಮುಂದಿನ ದಿನಗಳಲ್ಲಿ ಭಾರತ ನೀರಿನ ಕೊರತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಲ್ಲದೆ ಇದರ ಮೇಲೆ ರಾಜಕೀಯದ ಪರಿಣಾಮವು ಸಹ ಇರಲಿದೆ ಎಂದು ಅವರು ಹೇಳಿದ್ದಾರೆ. ಭಾರತದ ತಾಪಮಾನ ಐವತ್ತು ಡಿಗ್ರಿಗೆ (50℃) ಏರಲಿದೆ. ಹಾಗೆಯೇ ಮಿಡತೆಗಳು ಕೃಷಿ ಬೆಳೆಗಳನ್ನು ಹಾಳು ಮಾಡುತ್ತವೆ ಎನ್ನುವ ಆತಂಕಕಾರಿ ಭವಿಷ್ಯವನ್ನು ಅವರು ನುಡಿದಿದ್ದಾರೆ. ಆಸ್ಟ್ರೇಲಿಯಾ ಮತ್ತು ಏಷ್ಯಾದಲ್ಲಿ ಭಯಂಕರ ಪ್ರವಾಹಗಳು ಆಗಲಿದ್ದು, ಸುನಾಮಿಯು ಸಹ ಸಂಭವಿಸಲಿದೆ ಎಂದು ಅವರ ಭವಿಷ್ಯದಲ್ಲಿ ಹೇಳಲಾಗಿದೆ. ಕರೋನ ವೈರಸ್ ಕುರಿತಾಗಿ ಮೊದಲೇ ಭವಿಷ್ಯ ನುಡಿದಿದ್ದ ಬಾಬಾ ವಂಗ ಇದೀಗ ಇಡೀ ಜಗತ್ತು ಮತ್ತೊಂದು ಹೊಸ ವೈರಸ್ ನಿಂದ ಸಂಕಷ್ಟ ಎದುರಿಸಲಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಓದಿ..Biggboss Kannada: ಪ್ರೀತಿ ಪಕ್ಷಿಗಳಾಗಿ ಹಾರಾಡಿ, ದೇಶವೇ ಮೆಚ್ಚಿದ್ದ ಅರವಿಂದ್-ದಿವ್ಯ ಮದುವೆಯಾದರೆ ಏನಾಗುತ್ತದೆ ಅಂತೇ ಗೊತ್ತೇ? ಷಾಕಿಂಗ್ ಭವಿಷ್ಯ ನುಡಿದ ಗುರೂಜಿ, ಕಣ್ಣೀರಿಟ್ಟ ಫ್ಯಾನ್ಸ್.

ಮತ್ತೊಂದು ಸಾಂಕ್ರಾಮಿಕ ರೋಗದ ಕುರಿತಾಗಿ ಭವಿಷ್ಯ ನುಡಿದಿರುವ ಬಾಬಾ ವಂಗ ಹೆಪ್ಪುಗಟ್ಟಿದ ವೈರಸ್ ನಿಂದ ಈ ಸಾಂಕ್ರಾಮಿಕ ರೋಗ ಉಂಟಾಗುತ್ತದೆ ಎಂದು ಹೇಳಿದ್ದಾರೆ. 2023ರ ಹೊತ್ತಿಗೆ ಭೂಮಿಯ ಕಕ್ಷೆ ಬದಲಾಗಲಿದೆಯಂತೆ, ಜೊತೆಗೆ 2028ಕ್ಕೆ ಮಾನವರು ಶುಕ್ರ ಗ್ರಹವನ್ನು ಭೇಟಿ ಮಾಡಲಿದ್ದಾರೆ. 2043ರಲ್ಲಿ ಮುಸ್ಲಿಮರು ಯುರೋಪ್ ಅನ್ನು ಆಳಲಿದ್ದಾರೆ. 5079ಕ್ಕೆ ಈ ಇಡೀ ಜಗತ್ತು ಬ್ರಹ್ಮಾಂಡ ಕೊನೆಗೊಳ್ಳುತ್ತದೆ ಎಂದು ಸಹ ಅವರು ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ. 2046ರಲ್ಲಿ ಮನುಷ್ಯರು ನೂರು ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಬದುಕಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ರೀತಿಯಾಗಿ ಮುಂದೆ ಏನೆಲ್ಲಾ ಮಹತ್ವದ ಘಟನೆಗಳು ಜರುಗಲಿವೆ ಎಂದು ಬಾಬಾ ವಂಗ ತಿಳಿಸಿದ್ದಾರೆ. ಇದರಲ್ಲಿ ಕೆಲವು ಭವಿಷ್ಯಗಳು ಆತಂಕವನ್ನು ಸೃಷ್ಟಿಸುತ್ತಿದೆ. ಇದನ್ನು ಓದಿ.. LIC Policy: ಕುಣಿದು ಕುಪ್ಪಳಿಸಿದ LIC ಪಾಲಿಸಿದಾರರೂ, ಮಹತ್ವದ ನಿರ್ಧಾರ ತೆಗೆದುಕೊಂಡ LIC. ಏನು ಗೊತ್ತೇ??