Biggboss Kannada: ಎರಡನೇ ಬಾರಿ ಫೈನಲ್ ಗೆ ಬಂದು ಸೋತು ಹೋದ ದೀಪಿಕಾ ದಾಸ್ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಕಡಿಮೆ ಏನು ಆಗಿಲ್ಲ ಸ್ವಾಮಿ.

56

Biggboss Kannada: ನೆನ್ನೆ ನಡೆದ ಬಿಗ್ ಬಾಸ್ ಸೀಸನ್ 9 (Bigg Boss Kannada Season 9) ರ ಗ್ರಾಂಡ್ ಫಿನಾಲೆಯಲ್ಲಿ ದೀಪಿಕಾ ದಾಸ್ (Deepika Das) ಎರಡನೇ ರನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದಿನ ಸೀಸನ್ ಅಲ್ಲಿಯೂ ಕೂಡ ದೀಪಿಕಾ ದಾಸ್ ಫಿನಾಲೆವರೆಗೂ ಬಂದಿದ್ದರು. ಈ ಬಾರಿಯೂ ಕೂಡ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದ ಅವರು ಫಿನಾಲೆವರೆಗೂ ಬಂದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದ್ದಾರೆ. ಕಳೆದ ಸೀಸನ್ ಅನುಭವ ಹೊಂದಿದ ಅವರು ಈ ಸೀಸನ್ ನಲ್ಲಿ ಗೆಲ್ಲುವ ನಿರೀಕ್ಷೆ ಮೂಡಿಸಿದರು. ಆದರೆ ಅವರ ಲೆಕ್ಕಚಾರ ಉಲ್ಟಾ ಹೊಡೆದಿದ್ದು, ಕೇವಲ ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ. ಅಂದ ಹಾಗೆ ಧಾರವಾಹಿ ಮತ್ತು ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದಿರುವ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ?

ನಟಿ ದೀಪಿಕಾ ದಾಸ್ ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿದ್ದ ನಾಗಿಣಿ (Nagini) ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಾಗಿಣಿ ಧಾರಾವಾಹಿಯ ಅಮೃತ ಪಾತ್ರ ಅವರಿಗೆ ಅಪಾರ ಜನಮಣ್ಣನೆ ನೀಡಿತು. ಫ್ಯಂಟಸಿ ಕಥೆ ಹೊಂದಿದ ನಾಗಿಣಿ ಧಾರವಾಹಿಯಲ್ಲಿ ಅವರ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಆ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಅಲ್ಲದೆ instagram ನಲ್ಲಿ ಒಂದು ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿರುವ ಕಿರುತೆರೆಯ ಕೆಲವೇ ಕೆಲವು ನಟಿಯರಲ್ಲಿ ದೀಪಿಕಾ ದಾಸ್ ಕೂಡ ಒಬ್ಬರು. ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ನಾಗಿಣಿ ಧಾರಾವಾಹಿಯ ನಂತರ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಶೈನ್ ಶೆಟ್ಟಿ ಅವರೊಂದಿಗೆ ದೀಪಿಕಾ ದಾಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆ ಸೀಸನ್ ನಲ್ಲಿ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಜೋಡಿ ಸಾಕಷ್ಟು ಮೋಡಿ ಮಾಡಿತ್ತು. ಇಂದಿಗೂ ಈ ಜೋಡಿಗೆ ಅಪಾರ ಅಭಿಮಾನಿಗಳಿದ್ದಾರೆ. ಇದನ್ನು ಓದಿ..Kannada News: ದರ್ಶನ್ ಗೆ ವಾರ್ನಿಂಗ್, ಕ್ರಾಂತಿ ಸಿನೆಮಾ ಬ್ಯಾನ್?? ದರ್ಶನ್ ವಿರುದ್ಧ ನಡೆದಿದೆ ದೊಡ್ಡ ಷ್ಯಡ್ಯಂತ್ರ. ಏನಾಗಿದೆ ಗೊತ್ತೇ??

ಮೊನ್ನೆ ಫಿನಾಲೆಯಲ್ಲಿ ದೀಪಿಕಾ ಗೆ ಡೆಡಿಕೇಶನ್ ಸಾಂಗ್ ಒಂದಕ್ಕೆ ಶೈನ್ ಶೆಟ್ಟಿ (Shine Shetty) ಡಾನ್ಸ್ ಮಾಡಿದ್ದರು. ಇನ್ನು ಸೀಸನ್ 9ಕ್ಕೆ ಪ್ರವೀಣರ ವಿಭಾಗದಲ್ಲಿ ಎಂಟ್ರಿ ಕೊಟ್ಟಿದ್ದ ದೀಪಿಕಾ ದಾಸ್ ತಮ್ಮ ಅನುಭವದಿಂದಾಗಿ ಗೆದ್ದೇ ಗೆಲ್ಲುವ ಭರವಸೆ ಮೂಡಿಸಿದರು. ಆದರೆ ಕಳೆದ ಸೀಸನ್ ಅಷ್ಟು ಹೆಚ್ಚು ಚುರುಕಾಗಿ ದೀಪಿಕಾ ದಾಸ್ ಆಡುವುದರಲ್ಲಿ ವಿಫಲರಾದರು. ಕಡಿಮೆ ವೋಟ್ ಪಡೆದದ್ದಕ್ಕಾಗಿ ಅವರು ಎಲಿಮಿನೇಟ್ ಕೂಡ ಆಗಬೇಕಾಯಿತು. ಆದರೆ ಬಿಗ್ ಬಾಸ್ (Bigg Boss) ಅವರಿಗೆ ಮತ್ತೊಂದು ಅವಕಾಶ ನೀಡಿ ಮನೆಯೊಳಗೆ ಕಳುಹಿಸಿ ಕೊಟ್ಟಿತ್ತು. ನಿಜಕ್ಕೂ ದೀಪಿಕಾ ದಾಸ್ ತಮಗೆ ಸಿಕ್ಕ ಮತ್ತೊಂದು ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಪ್ರವೇಶಿಸಿ ಅದ್ಭುತವಾಗಿಯೇ ಆಡಿದರು. ಅದೇ ಕಾರಣಕ್ಕೆ ಅವರು ಗ್ರಾಂಡ್ ಫಿನಾಲೆ ವರೆಗೂ ತಲುಪಿದರು. ಆದರೆ ಅವರು ಟ್ರೋಫಿ ಗೆಲ್ಲಲಾಗದೆ ಬರಿ ಮೂರನೇ ಸ್ಥಾನ ಪಡೆಯಬೇಕಾಯಿತು. ಅಂದ ಹಾಗೆ ನಟಿ ದೀಪಿಕಾ ದಾಸ್ ಅವರ ವಯಸ್ಸು 29 ವರ್ಷ. ಇನ್ನು ಮುಂದೆ ಅವರು ಬೇರೆ ಬೇರೆ ಪ್ರಾಜೆಕ್ಟ್ ಮತ್ತು ಸಿನಿಮಾಗಳಲ್ಲಿ ಬಿಜಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ.. Biggboss Kannada: ನಾನು ಬರಲ್ಲ ಅಂದೇ, ಅವರು ಕರೆದರೂ, ಅದಕ್ಕಾಗಿ ಮುಲಾಜಿಲ್ಲದೆ ದಿವ್ಯ ಉರುಡುಗ ಪಡೆದ ಸಂಭಾವನೆ ಎಷ್ಟು ಗೊತ್ತೇ??