Biggboss Kannada: ಪ್ರೀತಿ ಪಕ್ಷಿಗಳಾಗಿ ಹಾರಾಡಿ, ದೇಶವೇ ಮೆಚ್ಚಿದ್ದ ಅರವಿಂದ್-ದಿವ್ಯ ಮದುವೆಯಾದರೆ ಏನಾಗುತ್ತದೆ ಅಂತೇ ಗೊತ್ತೇ? ಷಾಕಿಂಗ್ ಭವಿಷ್ಯ ನುಡಿದ ಗುರೂಜಿ, ಕಣ್ಣೀರಿಟ್ಟ ಫ್ಯಾನ್ಸ್.

27

Biggboss Kannada: ಬಿಗ್ ಬಾಸ್ ಸೀಸನ್ 9 (Biggboss Kannada Season 9) ರಲ್ಲಿ ಮತ್ತೊಮ್ಮೆ ಸ್ಪರ್ಧಿಯಾಗಿ ದಿವ್ಯ ಉರುಡುಗ (Divya Uruduga) ಭಾಗವಹಿಸಿದ್ದರು. ಕಳೆದ ಬಾರಿ ಗ್ರಾಂಡ್ ಫಿನಾಲೆಯವರೆಗೂ ತಲುಪಿದ್ದ ದಿವ್ಯ ಉರುಡುಗ ಇದೀಗ ಮತ್ತೆ ಪ್ರವೀಣರು ನವೀನರು ಕಾನ್ಸೆಪ್ಟ್ ಅಡಿಯ ಈ ಸೀಸನ್ ನಲ್ಲಿ ಪ್ರವೀಣರಾಗಿ ಮತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದರು. ಈಗಾಗಲೇ ತಮ್ಮ ಆಟದ ಮೂಲಕ ಇನ್ನಷ್ಟು ಜನರಿಗೆ ಹತ್ತಿರವಾಗಿದ್ದ ದಿವ್ಯ ರವರು ಉತ್ತಮವಾಗಿ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕಳೆದ ಸೀಸನ್ ನಲ್ಲಿ ದಿವ್ಯ ಮತ್ತು ಅರವಿಂದ್ (Aravind KP) ಅವರ ಜೋಡಿ ಸದ್ದು ಮಾಡಿತ್ತು. ಎಲ್ಲ ಸೀಸನ್ನಲ್ಲೂ ಯಾವುದಾದರೂ ಜೋಡಿ ಜನರ ಕಣ್ಣಿಗೆ ಬೀಳುತ್ತದೆ. ಆನಂತರ ಸಾಮಾನ್ಯವಾಗಿ ಅವರು ದೂರಾಗುತ್ತಾರೆ ಅಥವಾ ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ. ಆದರೆ ಮನೆಯಿಂದ ಹೊರಗೆ ಹೋದ ನಂತರವೂ ಅಷ್ಟೇ ಪ್ರೀತಿ ಗೌರವದಿಂದ ಇದ್ದ ಜೋಡಿ ಎಂದರೆ ಅದು ದಿವ್ಯ ಮತ್ತು ಅರವಿಂದ್. ಮನೆಯಲ್ಲಿ ಎಷ್ಟು ಗೌರವ ಮತ್ತು ಪ್ರೀತಿಯಿಂದ ಇದ್ದರೂ ಅದೇ ಭಾವನೆಯಿಂದ ಹೊರಗಡೆಯೂ ಕೂಡ ಗುರುತಿಸಿಕೊಂಡಿದ್ದು ಈ ಜೋಡಿ.

ಸೀಸನ್ ಒಂಬತ್ತಕ್ಕೆ ದಿವ್ಯ ಒಬ್ಬರೇ ಎಂಟ್ರಿ ಕೊಟ್ಟಿದ್ದರು. ಶೋ ಶುರುವಾಗುವ ಮೊದಲೇ ಅರವಿಂದ್ ಅವರು ಅತಿಥಿಯಾಗಿ ದಿವ್ಯ ಅವರನ್ನು ಮನೆಯೊಳಗೆ ಕಳಿಸಿಕೊಡಲು ಬಂದಿದ್ದರು. ಜೊತೆಗೆ ಈ ಬಾರಿಯೂ ಅವರು ಫೈನಲ್ ವರೆಗೂ ತಲುಪಿ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಇನ್ನು ಓಟಿಟಿ ಸೀಸನ್ ಅಲ್ಲಿ ಗುರುತಿಸಿಕೊಂಡ ಆರ್ಯ ವರ್ಧನ್ ಗುರೂಜಿ ಅವರು ಕೂಡ ಈ ಸೀಸನ್ಗೆ ಎಂಟ್ರಿ ಕೊಟ್ಟಿದ್ದು. ತಮ್ಮ ಆಟ, ತಮಾಷೆ, ಜ್ಯೋತಿಷ್ಯದ ಮೂಲಕ ಸದ್ದು ಮಾದಿದ್ದರು. ಅವರ ಜ್ಯೋತಿಷ್ಯವನ್ನು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ. ಆದರೂ ಅವರು ಆಗಾಗ ತಮ್ಮ ಜ್ಯೋತಿಷ್ಯ ಜ್ಞಾನದ ಮೂಲಕ ಭವಿಷ್ಯ ಹೇಳುತ್ತಾರೆ. ಇದೀಗ ದಿವ್ಯ ಅವರ ಬಗ್ಗೆ ಅವರೊಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ದಿವ್ಯ ಅರವಿಂದ್ ಮದುವೆಯಾದರೆ ನಿಮ್ಮಿಬ್ಬರಿಗೂ ಡಿವೋರ್ಸ್ ಆಗುತ್ತೆ ಎಂದು ಅವರು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಹೌದು ಸ್ನೇಹಿತರೆ ಹೀಗೆ ಹೇಳುವ ಮೂಲಕ ಎಲ್ಲರಿಗೂ ಆಶ್ಚರ್ಯವಾಗುವಂತೆ ಗುರೂಜಿ ಮಾತನಾಡಿದ್ದಾರೆ. ಇದನ್ನು ಓದಿ.. Biggboss Kannada: ಎರಡನೇ ಬಾರಿ ಫೈನಲ್ ಗೆ ಬಂದು ಸೋತು ಹೋದ ದೀಪಿಕಾ ದಾಸ್ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಕಡಿಮೆ ಏನು ಆಗಿಲ್ಲ ಸ್ವಾಮಿ.

ನಿನ್ನ ಹುಟ್ಟಿದ ದಿನಾಂಕಕ್ಕೂ ಅರವಿಂದ್ ಹುಟ್ಟಿದ ದಿನಾಂಕ ಹೋಲಿಕೆಯಾಗುವುದಿಲ್ಲ. ನೀವಿಬ್ಬರೂ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಅವರು ಶೋ ಮಧ್ಯದಲ್ಲಿ ಹೇಳಿದ್ದರು. 7ನೇ ತಾರೀಕು ಹುಟ್ಟಿದವರು 8ನೇ ತಾರೀಕಿನಲ್ಲಿ ಹುಟ್ಟಿದವರೊಂದಿಗೆ ಮದುವೆಯಾದರೆ ಅವರು ಒಟ್ಟಿಗೆ ಬಾಳುವುದಿಲ್ಲ. ಡಿವೋರ್ಸ್ ಆಗುತ್ತೆ, ನೀವಿಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿರಬಹುದು ಆದರೆ ಮದುವೆಯಾಗಿ ಒಟ್ಟಿಗೆ ಜೀವಿಸಲು ಸಾಧ್ಯವಾಗುವುದಿಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ್ದರು. ಇದನ್ನು ದಿವ್ಯ ಉರುಡುಗ ನಂಬಿದ್ದಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಈ ಭವಿಷ್ಯವನ್ನು ಕೇಳಿ ಅವರು ಸಾಕಷ್ಟು ನೊಂದುಕೊಂಡರು. ಇದೀಗ ಫಿನಾಲೆ ನಂತರ ಆರ್ಯವರ್ಧನ್ ಗುರೂಜಿ ಅವರು ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಆರ್ಯವರ್ಧನ್ (Aryavardhan) ಹೀ ಗೆ ಹೇಳಿದ್ದನ್ನು ನೆನಪಿಸಿದಾಗ ಮತ್ತೆ ಅವರು ನಿಜಕ್ಕೂ ಈ ಜೋಡಿ ಒಟ್ಟಿಗೆ ಮದುವೆಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ಅದೇ ಮಾತನ್ನು ಮತ್ತೆ ಹೇಳಿದ್ದಾರೆ. ಇದನ್ನು ಓದಿ..Biggboss Kannada: ನಾನು ಬರಲ್ಲ ಅಂದೇ, ಅವರು ಕರೆದರೂ, ಅದಕ್ಕಾಗಿ ಮುಲಾಜಿಲ್ಲದೆ ದಿವ್ಯ ಉರುಡುಗ ಪಡೆದ ಸಂಭಾವನೆ ಎಷ್ಟು ಗೊತ್ತೇ??