Kannada News: ದಿಡೀರ್ ಎಂದು ರಶ್ಮಿಕಾಗೆ ನೆನಪಿತು ಕಿರಿಕ್ ಪಾರ್ಟಿ: ಇದ್ದಕ್ಕಿದ್ದ ಹಾಗೆ ನೆನಪಾಗಲು ಕಾರಣವೇನು ಗೊತ್ತೇ?
Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಒಂದಲ್ಲ ಒಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಬರೀ ಸುದ್ದಿಯಾಗುವುದು ಮಾತ್ರವಲ್ಲ ಕರ್ನಾಟಕದಲ್ಲಿ ಅತಿ ಹೆಚ್ಚು ಟ್ರೋಲ್ ಆಗುವ ನಟಿಯಂದರೆ ಅದು ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ಅನಂತರ ಬೇರೆ ಬೇರೆ ಭಾಷೆಗಳಲ್ಲಿಯೂ ಅವಕಾಶ ಪಡೆಯುತ್ತಾ ಹೋದರು. ಅವರು ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಕನ್ನಡ ಮತ್ತು ಕರ್ನಾಟಕದ ವಿಷಯವಾಗಿ ಅವರ ಕೆಲವು ಅಭಿಪ್ರಾಯಗಳು, ಮಾತುಗಳು ಕನ್ನಡಿಗರನ್ನು ಕೋಪಕ್ಕೆ ಗುರಿಯಾಗಿರುತ್ತದೆ. ತಾವು ಬೆಳೆದು ಬಂದ ಹಾದಿಯನ್ನೇ ಅವರು ಮರೆತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇದೀಗ ತಮ್ಮ ನಿರಂತರವಾಗಿ ಸೋಲು ಕಾಣುತ್ತಿರುವ ರಶ್ಮಿಕ ತೇಪೆ ಹಚ್ಚಿಕೊಳ್ಳಲು ಕಿರಿಕ್ ಪಾರ್ಟಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಪರಿಚಯಗೊಂಡಿದ್ದು ಕನ್ನಡದ ಕಿರಿಕ್ ಪಾರ್ಟಿ (Kirik Party) ಮೂಲಕ. ಆ ಚಿತ್ರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ನೀಡಿತು. ಆರಂಭದಲ್ಲಿ ಕನ್ನಡಿಗರು ಅವರನ್ನು ಕರ್ನಾಟಕದ ಕ್ರಶ್ ಎಂದೇ ಕರೆದರು. ಆದರೆ ಆನಂತರ ರಶ್ಮಿಕಾ ಪರಭಾಷೆಯಲ್ಲಿ ಅವಕಾಶ ಪಡೆಯುತ್ತಾ ಹೋದಾಗ ಕನ್ನಡದ ಬಗ್ಗೆ ಆಡಿದ ಮಾತುಗಳು, ಬೆಳೆದು ಬಂದ ಹಾದಿಯನ್ನು ಮರೆತದ್ದು ಕರ್ನಾಟಕದ ಜನತೆಗೆ ಕೋಪ ತರಿಸಿದ್ದು, ಕನ್ನಡಿಗರಿಗೆ ಒಳ್ಳೆಯವರನ್ನು ಬೆಳೆಸುವುದು ಗೊತ್ತು ಹಾಗೆ ದುರಹಂಕಾರ ತೋರಿಸಿದವರಿಗೆ ತಕ್ಕ ಪಾಠ ಕಲಿಸುವುದು ಗೊತ್ತು. ಅದು ಸ್ವತಃ ರಶ್ಮಿಕ ಅವರಿಗೆ ಚೆನ್ನಾಗಿ ಅನುಭವ ಆದಂತಾಗಿದೆ. ತಮ್ಮನು ಚಿತ್ರರಂಗಕ್ಕೆ ಪರಿಚಯಿಸಿದ ಕಿರಿಕ್ ಪಾರ್ಟಿ ಮತ್ತು ಆ ಸಿನಿಮಾ ಸಂಸ್ಥೆಯ ಹೆಸರನ್ನು ಹೇಳಲು ಬಯಸದೆ ಕೇವಲ ಬೆರಳು ಅಲ್ಲಾಡಿಸಿ ಅದೊಂದು ಸಂಸ್ಥೆ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದು ಕೂಡ ಕನ್ನಡಿಗರ ಕೋಪಕ್ಕೆ ಗುರಿಯಾಗಿತ್ತು.

ಅಲ್ಲದೆ ಇತ್ತೀಚಿಗೆ ರಶ್ಮಿಕಾ ಮಂದಣ್ಣ ಅವರು ನಟಿಸುತ್ತಿರುವ ಚಿತ್ರಗಳು ಅಷ್ಟೇನೂ ಸದ್ದು ಮಾಡುತ್ತಿಲ್ಲ. ನಿರಂತರವಾಗಿ ರಶ್ಮಿಕಾ ಸೋಲು ಕಾಣುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ರಶ್ಮಿಕ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಕನ್ನಡಿಗರನ್ನು ನೈಸ್ ಮಾಡಲು, ಆಗಿರುವ ತಪ್ಪುಗಳಿಗೆ ತೇಪೆ ಹಚ್ಚುವಂತೆ ಇದೀಗ ಅವರು ಕಿರಿಕ್ ಪಾರ್ಟಿ ಬಗ್ಗೆ ಮಾತನಾಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಕೆಲಸ ಶುರುವಾಗಿ ಆರು ವರ್ಷಗಳು ಆಗಿರುವ ಈ ಸಮಯದಲ್ಲಿ ಅವರು ಕಿರಿಕ್ ಪಾರ್ಟಿ ಪೋಸ್ಟರ್ ಹಂಚಿಕೊಂಡು ಆರು ವರ್ಷಗಳ ಹಿಂದೆ ಇದೆಲ್ಲವೂ ಶುರುವಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ತಾವು ಹಿಂದೆ ಮಾಡಿಕೊಂಡಿರುವ ಎಡವಟ್ಟುಗಳನ್ನು ಮುಚ್ಚಿ ಹಾಕಲು ರಶ್ಮಿಕ ಹೀಗೆಲ್ಲ ಮಾಡುತ್ತಿದ್ದಾರೆ, ಇವರಿಗೆ ಇಷ್ಟು ದಿನ ಕಿರಿಕ್ ಪಾರ್ಟಿ ಸಿನಿಮಾ ನೆನಪಿಗೆ ಬಂದಿರಲಿಲ್ಲ. ಈಗ ಸೋಲು ಕಾಣುತ್ತಿರುವ ಹೊತ್ತಲ್ಲಿ ಹಳೆಯದ್ದು ನೆನಪಾಗಿದೆ ಎಂದು ಕನ್ನಡಿಗರು ಆರೋಪಿಸಿದ್ದಾರೆ. ಈ ವಿಷಯದ ಕುರಿತಾಗಿ ನಿಮ್ಮ ಅಭಿಪ್ರಾಯಗಳನ್ನು ಸಹ ಕಾಮೆಂಟ್ ಮಾಡುವ ಮೂಲಕ ತಿಳಿಸಿ.