Kannada News: ಅಂಬಾನಿ ಮಗ ಅನಂತ್ ಅಂಬಾನಿ ಮದುವೆಯಾಗುತ್ತಿರುವ ಈ ಹುಡುಗಿ ಯಾರು ಗೊತ್ತೇ? ಇದಪ್ಪ ಅದೃಷ್ಟ ಅಂದ್ರೆ, ಆತನೇ ಅದೃಷ್ಟ ಮಾಡಿದ್ದು.

66

Kannada News: ಮುಕೇಶ್ ಅಂಬಾನಿ (Mukesh Ambani) ರಿಲಯನ್ಸ್ ಇಂಡಸ್ಟ್ರೀಸ್ ಮೂಲಕ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಸಿದ್ಧರಾಗಿದ್ದಾರೆ. ಭಾರತದ ಅತ್ಯಂತ ಟಾಪ್ ಉದ್ಯಮಿದಾರರಾಗಿರುವ ಮುಕೇಶ್ ಅಂಬಾನಿ ಅವರ ಪುತ್ರ ಇದೀಗ ಮದುವೆಯಾಗಲಿರುವ ಶುಭ ಸುದ್ದಿಯನ್ನು ನೀಡಿದ್ದಾರೆ. ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯವರು (Ananth Ambani) ಇತ್ತೀಚಿಗಷ್ಟೇ ತಮ್ಮ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮಾಡಿಕೊಂಡಿದ್ದಾರೆ. ರಾಧಿಕಾ ಮರ್ಚೆಂಟ್ ಎನ್ನುವವರ ಜೊತೆಗೆ ಅವರು ರಿಂಗ್ ಬದಲಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥಕ್ಕೆ ಮುನ್ನುಡಿಯಿರಿಸಿದ್ದಾರೆ. ಇಷ್ಟಕ್ಕೂ ರಾಧಿಕಾ ಮರ್ಚೆಂಟ್ (Radhika Merchant) ಅವರ ಹಿನ್ನೆಲೆ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುವುದು ಗ್ಯಾರಂಟಿ.

ಅನಂತ್ ಅಂಬಾನಿ ತಮ್ಮ ಬಾಲ್ಯದ ಸ್ನೇಹಿತೆ ರಾಧಿಕಾ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನೆನ್ನೆ ಗುರುವಾರ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಎನ್ಕೋರ್ ಹೆಲ್ತ್ ಕೇರ್ ಸಿಈಓ ವೀರೇನ್ ಮರ್ಚೆಂಟ್ ಅವರ ಹಿರಿಯ ಮಗಳು ರಾಧಿಕಾ ಮರ್ಚೆಂಟ್. ಮುಂಬೈಯಲ್ಲಿ ಆರಂಭಿಕ ಶಿಕ್ಷಣ ಮುಗಿಸಿರುವ ಅವರು ತಮ್ಮ ಉನ್ನತ ವ್ಯಾಸಂಗವನ್ನು ನ್ಯೂಯಾರ್ಕ್ ನಲ್ಲಿ ಮಾಡಿದ್ದಾರೆ. ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಿಂದ ರಾಜಕೀಯ ಮತ್ತು ಎಕನಾಮಿಕ್ಸ್ ವಿಷಯವಾಗಿ ಅವರು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ತಮ್ಮ ವ್ಯಾಸಂಗ ಮುಗಿಸಿದ ಬಳಿಕ ಭಾರತಕ್ಕೆ ಮರಳಿರುವ ಅವರು ಭಾರತದ ಅತ್ಯಂತ ಐಶಾರಾಮಿ ವಿಲ್ಲಾ ನೆಟ್ವರ್ಕ್ ಇಷ್ಟ್ರವ ದಲ್ಲಿ 2017 ರಿಂದ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅವರು ಎನ್ಕೋರ್ ಹೆಲ್ತ್ ಕೇರ್ ನ ನಿರ್ದೇಶಕಿಯಾಗಿದ್ದಾರೆ. ಇದನ್ನು ಓದಿ..Kannada News: ಕನ್ನಡ, ತೆಲುಗು, ತಮಿಳಿಗರಿಗೆ ಒಮ್ಮೆಲ್ಲೇ ಶಾಕ್ ಕೊಟ್ಟ ರಶ್ಮಿಕಾ: ಹಿಂದಿಯವರಿಗೆ ಬಕೆಟ್ ಇಡಿದಿದ್ದು ಹೇಗೆ ಗೊತ್ತೆ??

ರಾಧಿಕಾ ನೃತ್ಯದಲ್ಲಿಯೂ ಕೂಡ ಪ್ರವೀಣೆ, ಎಂಟು ವರ್ಷಗಳಿಂದಲೂ ಕೂಡ ಶಾಸ್ತ್ರೀಯವಾಗಿ ಅವರು ನೃತ್ಯ ಕಲಿತಿದ್ದಾರೆ. ಹೀಗಾಗಿ ಅವರು ನೃತ್ಯದಲ್ಲಿಯೂ ಕೂಡ ಪ್ರವೀಣ ಎಂದೇ ಹೇಳಬಹುದು. ನಿರಂತರವಾಗಿ ಎಂಟು ವರ್ಷಗಳ ಕಾಲ ಅವರು ಭರತನಾಟ್ಯ ಮತ್ತು ನೃತ್ಯಭ್ಯಾಸವನ್ನು ಮಾಡಿದ್ದಾರೆ. ಅನಂತ್ ಮತ್ತು ರಾಧಿಕಾ ಇಬ್ಬರು ಸಹ ಬಾಲ್ಯದ ಸ್ನೇಹಿತರಾಗಿದ್ದು ಈ ಮೊದಲು ಸಾಕಷ್ಟು ಬಾರಿ ಒಟ್ಟೆಗೆ ಕಾಣಿಸಿಕೊಂಡಿದ್ದರು. ಇದೀಗ ಈ ಜೋಡಿ ವಿವಾಹವಾಗಲಿದ್ದು ವಿವಾಹಕ್ಕೆ ಮುನ್ನುಡಿ ಎಂಬಂತೆ ನೆನ್ನೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದೆ. ತಮ್ಮ ನಿಶ್ಚಿತಾರ್ಥದ ಸಮಾರಂಭದ ಫೋಟೋಗಳನ್ನು ಈ ಜೋಡಿ ಇನ್ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ಇದನ್ನು ಓದಿ.. Biggboss: ಕೊನೆ ಕ್ಷಣದಲ್ಲಿ ನಡೆಯಿತು ಅಚಾತುರ್ಯ; ಕತ್ತಲಲ್ಲಿ ಬಿಗ್ ಬಾಸ್ ನಲ್ಲಿ ನಡೆಯಿತು ಮುತ್ತಿನಾಟ: ತುಟಿಗೆ ತುಟಿ ಒಟ್ಟಿದವರು ಯಾರು ಗೊತ್ತೇ??