Cricket News: ಪದೇ ಪದೇ ತಂಡಕ್ಕೆ ಬಿಟ್ಟಿಯಾಗಿ ಆಯ್ಕೆಯಾಗುತ್ತಿರುವ ಮಹಾನ್ ಅದೃಷ್ಟವಂತ: ಟೀಮ್ ಇಂಡಿಯಾ ಗೆ ಈತನೇ ದೊಡ್ಡ ಕಂಟಕ. ಯಾರು ಗೊತ್ತೇ??

29

Cricket News: ಬಾಂಗ್ಲಾ ಪ್ರವಾಸ ಮುಗಿಸಿದ್ದ ಟೀಮ್ ಇಂಡಿಯಾ (Team India) ಅಲ್ಲಿ ಪಂದ್ಯದ ಟ್ರೋಫಿಯನ್ನು ಗೆಲ್ಲುವ ಮೂಲಕ ಭಾರತಕ್ಕೆ ಮರಳಿತ್ತು. ಇದೀಗ ವಿಶ್ರಾಂತಿ ಮುಗಿಸಿ ಇದೇ ಹೊಸ ವರ್ಷದಿಂದ ಶ್ರೀಲಂಕಾದ (India vs Srilanka) ವಿರುದ್ಧ ಮೂರು ಟಿ ಟ್ವೆಂಟಿ ಸರಣಿ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಇದೇ ಜನವರಿ ಮೂರರಿಂದ ಭಾರತದಲ್ಲಿ ಈ ಪಂದ್ಯಗಳು ಶುರುವಾಗಲಿದ್ದು ಶ್ರೀಲಂಕಾ ಈ ಪಂದ್ಯಗಳಿಗೆ ಭಾರತದ ಪ್ರವಾಸ ಕೈಗೊಳ್ಳಲಿದೆ. ಇನ್ನೂ ಈ ನಿರೀಕ್ಷಿತ ಪಂದ್ಯಗಳಿಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಈಗಾಗಲೇ ಆಯ್ಕೆ ಸಮಿತಿ ಈ ಪಂದ್ಯಗಳನ್ನು ಆಡಲು ಆಟಗಾರರನ್ನು ಆಯ್ಕೆಮಾಡಿದೆ. ಈ ಪಂದ್ಯಗಳಲ್ಲಿ ಯಾರೆಲ್ಲಾ ಆಡಲಿದ್ದಾರೆ, ಯಾರೆಲ್ಲಾ ಆಯ್ಕೆಯಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿತ್ತು. ಇದೀಗ ಆ ಕುತುಹಲಕ್ಕೆ ತೆರೆ ಬಿದ್ದಿದೆ. ಅಲ್ಲದೆ ಆಯ್ಕೆ ಸಮಿತಿ ಒಬ್ಬ ಕಳಪೆ ಆಟಗಾರನನ್ನು, ನಿರಂತರವಾಗಿ ಫಾರ್ಮ್ ಕಳೆದುಕೊಂಡಿರುವ ಆಟಗಾರರನ್ನು ಆಯ್ಕೆ ಮಾಡಿ ಕೊಳ್ಳುವ ಮೂಲಕ ದೊಡ್ಡ ಪ್ರಮಾದ ಮಾಡಿದೆ. ಅಲ್ಲದೆ ಈ ಆಟಗಾರ ಟೀಮ್ ಇಂಡಿಯಾಗೆ ಕಳಂಕ ಎಂದು ಸಹ ಆರೋಪಗಳು ಕೇಳಿ ಬರುತ್ತಿವೆ.

ಶ್ರೀಲಂಕದ ವಿರುದ್ಧ ಭಾರತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿ ಜನವರಿ ಮೂರರಿಂದ ಜನವರಿ 7ರವರೆಗೆ ನಡೆಯಲಿದೆ. ನಂತರ ಜನವರಿ 10 ರಿಂದ 15 ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡಗಳು ಆಡಲಿದ್ದಾರೆ. ಈ ಪಂದ್ಯಗಳಿಗಾಗಿ ಆಡಲು ಟೀಮ್ ಇಂಡಿಯಾ ಈಗಷ್ಟೇ ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಟಿ20 ಮತ್ತು ಏಕದಿನ ಮಾದರಿಯ ಪಂದ್ಯಗಳಲ್ಲಿ ಆಡಲು ಆಯ್ಕೆ ಸಮಿತಿ ಅಂತಿಮವಾಗಿ ಆಟಗಾರರನ್ನು ನಿಗದಿಗೊಳಿಸಿದೆ. ಈ ಆಟಗಾರರ ಪೈಕಿ ಒಬ್ಬ ಕಳಪೆ ಆಟಗಾರನು ಇರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಆಯ್ಕೆ ಸಮಿತಿ ಹಲವಾರು ಪಂದ್ಯಗಳಿಂದ ಕಳಪೆ ಪ್ರದರ್ಶನ ತೋರುತ್ತಿರುವ ಕೆ ಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿರುವುದು ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಓದಿ..Cricket News: 31 ಒಂದು ವರ್ಷಕ್ಕೆ ಅಂತ್ಯವಾಗುತ್ತ ರಾಹುಲ್ ರವರ ಕ್ರಿಕೆಟ್ ಭವಿಷ್ಯ: ಒಮ್ಮೆ ಹೊರಹೋದರೆ ಬರುವುದು ಕಷ್ಟವಾಗಿರುವಾಗ ಜಾಫರ್ ಹೇಳಿದ್ದೇನು ಗೊತ್ತೇ??

ನಿರಂತರವಾಗಿ ವೈಫಲ್ಯ ಕಾಣುತ್ತಿರುವ ರಾಹುಲ್ (K L Rahul) ಅವರನ್ನು ಆಯ್ಕೆ ಮಾಡಿ ಮತ್ತೆ ಅವಕಾಶ ನೀಡುವ ಮೂಲಕ ಆಯ್ಕೆ ಸಮಿತಿ ದೊಡ್ಡ ಪ್ರಮಾದ ಮಾಡಿದೆ ಎಂದೇ ಆರೋಪಿಸಲಾಗುತ್ತಿದೆ. ಕೆ ಎಲ್ ರಾಹುಲ್ ರವರ ಇತ್ತೀಚಿನ ಪಂದ್ಯಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ ಅವರು ಸಂಪೂರ್ಣವಾಗಿ ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ. ಇದಲ್ಲದೆ ಮಾಧ್ಯಮದವರ ಜೊತೆಗೂ ಸಹ ತಾವು ಫಾರ್ಮ್ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ವೈಫಲ್ಯವನ್ನು ಅವರು ಹೌದೆಂದು ಹೇಳಿದ್ದಾರೆ. ಟೆಸ್ಟ್, ಟಿ ಟ್ವೆಂಟಿ ಮತ್ತು ಏಕದಿನ ಈ ಎಲ್ಲಾ ಮೂರು ಮಾದರಿಯ ಪಂದ್ಯಗಳಲ್ಲಿಯೂ ಕೂಡ ಅವರು ಸೋಲು ಕಾಣುತ್ತಿದ್ದಾರೆ. ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಅವರು ವಿಫಲರಾಗುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರನ್ನು ಏಕದಿನ ಮತ್ತು ಟಿ ಟ್ವೆಂಟಿ ಮಾದರಿಯ ಕ್ರಿಕೆಟ್ ನಲ್ಲಿ ನೀಡಲಾಗಿದ್ದ ಉಪನಾಯಕನ ಸ್ಥಾನದಿಂದಲೂ ಕೂಡ ತೆಗೆದು ಹಾಕಲಾಗಿತ್ತು. ಅವರ ಜಾಗಕ್ಕೆ ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ಸ್ಥಾನ ನೀಡಲಾಗಿತ್ತು.

ಕೆ ಎಲ್ ರಾಹುಲ್ ಕಳೆದ 10 ಏಕದಿನ ಇನ್ನಿಂಗ್ಸ್ಗಳಲ್ಲಿ 7, 12, 55, 9, 49, 1, 30, 73, 14 ಮತ್ತು 8 ರನ್ ಗಳಿಸಿದ್ದಾರೆ. ನಿರಂತರವಾಗಿ ಸೋಲು ಕಾಣುತ್ತಿರುವ ಇವರ ಆಯ್ಕೆಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ರಾಹುಲ್ ಬದಲಿಗೆ ಭರವಸೆಯ ಆಟಗಾರ ಪೃಥ್ವಿ ಶಾ (Prithvi Shaw) ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಸಹ ಸಾಕಷ್ಟು ಜನರು ಹೇಳಿದ್ದಾರೆ. ಅತ್ಯುತ್ತಮವಾಗಿ ಆಡಬಲ್ಲ ಪೃಥ್ವಿ ಅವರು ತಮ್ಮ ಆಟದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರನ್ನು ನೆನಪಿಸುತ್ತಾರೆ ಎಂದು ಈ ಹಿಂದೆ ಸಾಕಷ್ಟು ಜನರು ಹೇಳಿದ್ದ ನಿದರ್ಶನಗಳು ಇವೆ. ಆದರೆ ಸಾಕಷ್ಟು ಉತ್ತಮ ಆಟಗಾರರನ್ನು ಹೊಂದಿರುವ ಟೀಮ್ ಇಂಡಿಯಾ ಇದೀಗ ಮತ್ತೆ ಕಳಪೆ ಆಟಗಾರ ರಾಹುಲ್ ಅವರನ್ನು ಆಯ್ಕೆ ಮಾಡುವ ಮೂಲಕ ದೊಡ್ಡ ಎಡವಟ್ಟು ಮಾಡಿಕೊಂಡಿದೆ ಎಂದೇ ಬಿಂಬಿಸಲಾಗುತ್ತಿದೆ. ಇದಲ್ಲದೆ ಇವರು ಇಂಡಿಯಾಗೆ ಮತ್ತು ತಂಡದ ಗೆಲುವಿಗೆ ದೊಡ್ಡ ಕಳಂಕ ಆಗುತ್ತಾರೆ ಎಂದೇ ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ಕಷ್ಟ ಪಟ್ಟು ಬೆವರು ಸುರಿಸಿ ತಮನ್ನಾ ರವರು ಸಂಪಾದನೆ ಮಾಡಿರುವ ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ, ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.