Biggboss: ಕೊನೆ ಕ್ಷಣದಲ್ಲಿ ನಡೆಯಿತು ಅಚಾತುರ್ಯ; ಕತ್ತಲಲ್ಲಿ ಬಿಗ್ ಬಾಸ್ ನಲ್ಲಿ ನಡೆಯಿತು ಮುತ್ತಿನಾಟ: ತುಟಿಗೆ ತುಟಿ ಒಟ್ಟಿದವರು ಯಾರು ಗೊತ್ತೇ??
Biggboss: ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸಾಮಾನ್ಯವಾಗಿ ಸ್ಪರ್ಧಿಗಳು ಮುದ್ದು ಮಾಡುವುದು, ಮುತ್ತು ಕೊಡುವುದು, ತಬ್ಬಿಕೊಳ್ಳುವುದು, ಅಕ್ಕಪಕ್ಕ ಮಲಗಿಕೊಂಡು ಹೊರಳಾಡುವುದು ಹೀಗೆ ಏನೇನೋ ದೃಶ್ಯಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ದೃಶ್ಯಗಳಂತೂ ಕುಟುಂಬ ಸಮೇತ ಕುಳಿತು ನೋಡಲಿಕ್ಕೆ ಆಗದಷ್ಟರ ಮಟ್ಟಿಗೆ ಅಶ್ಲೀಲ ಎನಿಸುವಷ್ಟರ ಮಟ್ಟಿಗೆ ಸ್ಪರ್ಧಿಗಳು ನಡೆದುಕೊಳ್ಳುತ್ತಿರುತ್ತಾರೆ. ಇದೀಗ ಬಿಗ್ ಬಾಸ್ ಶೋನಲ್ಲಿ ಇಂಥದೇ ಒಂದು ಘಟನೆ ನಡೆದಿದೆ. ಕತ್ತಲಲ್ಲಿ ಇಬ್ಬರು ಸ್ಪರ್ಧಿಗಳು ತುಟಿಗೆ ತುಟಿ ಇಟ್ಟು ಮುತ್ತು ಕೊಟ್ಟಿರುವ ದೃಶ್ಯ ವೈರಲ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಲೈಟ್ ಆಫ್ ಆದ ನಂತರ ಬೆಡ್ ಮೇಲೆ ಸುಮ್ಮನೆ ತಮ್ಮ ಪಾಡಿಗೆ ತಾವು ಮಲಗದೆ ಇಬ್ಬರು ಸ್ಪರ್ಧಿಗಳು ಲಿಪ್ ಲಾಕ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಅಂದಹಾಗೆ ಇಂತಹದೊಂದು ಘಟನೆ ನಡೆದಿರುವುದು ಹಿಂದಿಯ ಬಿಗ್ ಬಾಸ್ ಸೀಸನ್ ಹದಿನಾರರಲ್ಲಿ (Biggboss 16). ಹೌದು, ಬೇರೆ ಭಾಷೆಗಳ ಹಾಗೂ ಹೊರ ದೇಶಗಳ ಬಿಗ್ ಬಾಸ್ ಅಲ್ಲಿ ಸ್ಪರ್ಧಿಗಳು ಅಶ್ಲೀಲವಾಗಿ ಏನೇನೋ ಮಾಡಿದ ಅನೇಕ ಘಟನೆಗಳು ನಡೆದಿದೆ. ಅದಕ್ಕೆ ಹೋಲಿಸಿಕೊಂಡರೆ ಕನ್ನಡದ ಬಿಗ್ ಬಾಸ್ ನಿಜಕ್ಕೂ ತಕ್ಕ ಮಟ್ಟಿಗೆ ಓಕೆ ಓಕೆ ಎಂದೆ ಹೇಳಬಹುದು. ಇನ್ನು ಬಿಗ್ ಬಾಸ್ ಸೀಸನ್ 16 ಹಿಂದಿ ಆವೃತ್ತಿಯಲ್ಲಿ ಇದೀಗ ಇಬ್ಬರು ಸ್ಪರ್ದಿಗಳು ತುಟಿಗೆ ತುಟಿ ಇಟ್ಟು ಲಿಪ್ ಲಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅಂದಹಾಗೆ ಈ ಲಿಪ್ ಲಾಕ್ ಮಾಡಿರುವುದು ಯಾರೋ ಹುಡುಗ ಹುಡುಗಿ ಸ್ಪರ್ಧಿ ಎಂದುಕೊಳ್ಳಬೇಡಿ, ಬದಲಿಗೆ ಇಬ್ಬರೂ ಕೂಡ ಮಹಿಳಾ ಸ್ಪರ್ಧೆಗಳೇ ಹೀಗೆ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಇದನ್ನು ಓದಿ..Kannada News: ತೆಲುಗಿನ ಚಿತ್ರದ ಪ್ರಚಾರದಲ್ಲಿ ಕಾಂತಾರ ಕುರಿತು ಮಾತನಾಡಿದ ಶ್ರೀ ಲೀಲಾ ಹೇಳಿದ್ದೇನು ಗೊತ್ತೇ??

ಸೌಂದರ್ಯ ಶರ್ಮಾ (Soundarya Sharma) ಮತ್ತು ಶ್ರೀಜಿತಾ ಡಿ (Sreejitha D) ಇಬ್ಬರೂ ಸಹ ಬಿಗ್ ಬಾಸ್ ಮನೆಯಲ್ಲಿ ಲೈಟ್ಸ್ ಆಫ್ ಆಗಿ ಎಲ್ಲಾ ಸ್ಪರ್ಧಿಗಳು ಮಲಗಿದ್ದಾಗ, ಬೆಡ್ ಮೇಲೆ ಒಬ್ಬರಿಗೊಬ್ಬರು ಲಿಪ್ ಲಾಕ್ ಮಾಡಿದ್ದಾರೆ. ಅದು ಸಹ ಅಚ್ಚರಿ ಎಂಬಂತೆ ಪುರುಷ ಸ್ಪರ್ಧಿಗಳ ಎದುರಿಗೆ. ಅಬ್ದು ರೋಜಿಕ್ (Abdu Rojik) ಮತ್ತು ಶಿವ್ ಠಾಕರೆ (Shiva Thakre) ಇವರಿಬ್ಬರೂ ಬೆಡ್ ಮೇಲೆ ಮಲಗಿದ್ದ ವೇಳೆ ಅಲ್ಲಿಗೆ ಬಂದ ಈ ಇಬ್ಬರು ಮಹಿಳಾ ಸ್ಪರ್ಧಿಗಳು ಅವರ ಮುಂದೆಯೇ ಲಿಪ್ ಲಾಕ್ ಮಾಡಿದ್ದಾರೆ. ಇದನ್ನು ನೋಡಿದ ಅಬ್ದು ಮತ್ತು ಶಿವ ಅವರಿಗೆ ದಿಬ್ರಮೆಯಾಗಿದೆ. ಈ ಇಬ್ಬರು ಏನು ಮಾಡುತ್ತಿದ್ದಾರೆ ಎಂದು ಎರಡು ಕ್ಷಣ ಗೊಂದಲಕ್ಕೀಡಾಗಿದ್ದಾರೆ. ಬೆಡ್ ಮೇಲೆ ಮಲಗಿದ್ದ ಅಬ್ದು ಮತ್ತು ಶಿವ ಅವರ ಬಳಿಗೆ ಸೌಂದರ್ಯ ಮತ್ತು ಶ್ರೀಜಿತ ಬರುತ್ತಾರೆ.
ಈ ವೇಳೆ ಸೌಂದರ್ಯ ಶಿವನೊಂದಿಗೆ ಪ್ಲರ್ಟ್ ಮಾಡುತ್ತಾ ಅವನ ಕೆನ್ನೆಗೆ ಕಿಸ್ ಮಾಡುತ್ತಾಳೆ. ಆನಂತರ ಇದನ್ನು ಕಂಡು ಅಬ್ದು ಗೆ ಅಸೂಯೆ ಆಗುತ್ತದೆ. ಆನಂತರ ಅಬ್ದುಗೆ ಸಹ ಕಿಸ್ ಮಾಡಿ ಮಲಗಿಕೊಳ್ಳಿ ಗುಡ್ ನೈಟ್ ಎಂದು ಹೇಳುತ್ತಾಳೆ. ಆನಂತರ ಶ್ರೀಜಿತ ಮತ್ತು ಸೌಂದರ್ಯ ಇಬ್ಬರೂ ಕೂಡ ಅವರ ಮುಂದೆ ಲಿಪ್ ಲಾಕ್ ಮಾಡುತ್ತಾರೆ. ಇದನ್ನು ನೋಡಿ ಆ ಹುಡುಗರಿಗೆ ಶಾಕ್ ಉಂಟಾಗುತ್ತದೆ. ಆದರೆ ಅಚ್ಚರಿ ಎಂಬಂತೆ ಸೌಂದರ್ಯ ನೀವು ಇದೇ ರೀತಿ ಕಿಸ್ ಮಾಡಿ ಎಂದು ಹೇಳುತ್ತಾಳೆ. ಅದಕ್ಕೆ ಅವರಿಬ್ಬರಿಗೂ ಪಾಗಲ್ ಹೈ ಕ್ಯಾ ಎಂದು ಕೇಳುವ ಮೂಲಕ ನಿಮಗೇನು ಹುಚ್ಚು ಹಿಡಿದಿದೆಯಾ? ತಲೆ ಕೆಟ್ಟಿದೆಯ ಎಂದು ಪ್ರಶ್ನಿಸಿದ್ದಾರೆ. ಈ ಲಿಪ್ ಲಾಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. ಇದನ್ನು ಓದಿ.. Kannada News: ಕನ್ನಡ, ತೆಲುಗು, ತಮಿಳಿಗರಿಗೆ ಒಮ್ಮೆಲ್ಲೇ ಶಾಕ್ ಕೊಟ್ಟ ರಶ್ಮಿಕಾ: ಹಿಂದಿಯವರಿಗೆ ಬಕೆಟ್ ಇಡಿದಿದ್ದು ಹೇಗೆ ಗೊತ್ತೆ??