Kannada News: ತೆಲುಗಿನ ಚಿತ್ರದ ಪ್ರಚಾರದಲ್ಲಿ ಕಾಂತಾರ ಕುರಿತು ಮಾತನಾಡಿದ ಶ್ರೀ ಲೀಲಾ ಹೇಳಿದ್ದೇನು ಗೊತ್ತೇ??
Kannada News: ನಟಿ ಶ್ರೀ ಲೀಲಾ (Sreeleela) ಇದೀಗ ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿಯೂ ಕೂಡ ಗುರುತಿಸಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ತಮ್ಮ ಮೊದಲ ಚಿತ್ರ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಇದೀಗ ಅವರ ಎರಡನೇ ಚಿತ್ರ ಧಮಾಕ (Dhamaka) ಬಿಡುಗಡೆಗೊಂಡಿದೆ. ಈ ಚಿತ್ರವೂ ಕೂಡ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು ಶ್ರೀ ಲೀಲಾ ಅವರನ್ನು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಕರ್ನಾಟಕ ಮೂಲದ ನಟಿಯರೇ ಅಧಿಪತ್ಯ ಸ್ಥಾಪಿಸಿರುವ ತೆಲುಗು ಚಿತ್ರರಂಗದಲ್ಲಿ ಇದೀಗ ಶ್ರೀ ಲೀಲಾ ಕೂಡ ಟಾಪ್ ನಟಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇದರ ಬೆನ್ನಲ್ಲೇ ರಶ್ಮಿಕ ರೀತಿ ಶ್ರೀಲೀಲಾ ಕೂಡ ಕನ್ನಡ ಕರ್ನಾಟಕವನ್ನು ಮರೆತುಬಿಡುತ್ತಾರೆ, ಮರೆತುಬಿಟ್ಟಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದವು. ಇದೀಗ ಆರೋಪಗಳನ್ನು ಸುಳ್ಳು ಮಾಡುವಂತೆ ಶ್ರೀ ಲೀಲಾ ಅಚ್ಚರಿಯ ಹೇಳಿಕೆ ಒಂದನ್ನು ನೀಡಿದ್ದಾರೆ.
ನಟಿ ಶ್ರೀಲೀಲಾ ತೆಲುಗಿನಲ್ಲಿ ತನ್ನ ಮೊದಲ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಎರಡನೇ ಚಿತ್ರವಾದ ದಮಾಕದಲ್ಲೂ ಕೂಡ ಗೆಲುವು ಕಂಡಿದ್ದಾರೆ. ಅವರ ನಟನೆ, ಡ್ಯಾನ್ಸ್ ಸ್ಟೆಪ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ತೆಲುಗು ಸಿನಿ ಪ್ರೇಕ್ಷಕರು ಇದೀಗ ಶ್ರೀಲೀಲಾ ಅವರು ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗಡೆ ಅವರನ್ನೇ ಮೀರಿಸುವಂತಹ ನಟಿಯಾಗುತ್ತಾರೆ ಎಂದು ಭವಿಷ್ಯ ಹೇಳುತ್ತಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭದಲ್ಲಿ ಅನಗತ್ಯವಾಗಿ ನಟಿ ಶ್ರೀ ಲೀಲಾ ತೆಲುಗುನಲ್ಲಿ ಮಾತನಾಡುವ ಮೂಲಕ ಕನ್ನಡಿಗರ ಕೋಪಕ್ಕೆ ತುತ್ತಾಗಿದ್ದರು. ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ನಟಿಯಾಗಿ ಅವರು ತೆಲುಗಿನಲ್ಲಿ ಮಾತನಾಡಿದ್ದು ಕನ್ನಡಿಗರಿಗೆ ಬೇಸರ ತರಿಸಿತ್ತು. ಇದಲ್ಲದೆ ಈ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಕೆಲವರು ಕನ್ನಡ ಕನ್ನಡ ಎಂದು ಜೋರಾಗಿ ಕೂಗಿದ್ದರು. ಆನಂತರ ರಶ್ಮಿಕ ಅವರಂತೆ ಕನ್ನಡವನ್ನು ಮರೆತುಬಿಟ್ಟರು ಎಂದು ಕೋಪ ಮಾಡಿಕೊಂಡಿದ್ದರು.

ಇದೀಗ ಅವರ ತೆಲುಗಿನ ಎರಡನೇ ಚಿತ್ರ ಧಮಾಕ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೇ ವೇಳೆ ಮಾಧ್ಯಮದವರ ಜೊತೆಗೆ ಮಾತನಾಡಿರುವ ನಟಿ ಶ್ರೀಲೀಲಾ ಅವರು ಹೇಳಿರುವ ಮಾತುಗಳು ಇದೀಗ ಕನ್ನಡಿಗರಿಗೆ ಮತ್ತೆ ಅವರ ಮೇಲೆ ನಂಬಿಕೆ ಮೂಡಲು ಕಾರಣವಾಗಿದೆ ಎಂದು ಹೇಳಬಹುದು. ನಟಿ ಶ್ರೀ ಲೀಲ ಮಾಧ್ಯಮದವರ ಜೊತೆಗೆ ತಮ್ಮ ಯಶಸ್ಸಿನ ಕುರಿತಾಗಿ ಮಾತನಾಡುತ್ತಾ ಕಾಂತಾರ ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ. ಕಾಂತಾರ ಚಿತ್ರವನ್ನು ನಾನು ನೋಡಿದ್ದೇನೆ. ಕಾಂತಾರ ಇದೀಗ ಭಾರತದ ಎಲ್ಲ ಭಾಷೆಗಳಲ್ಲಿಯೂ, ಮೂಲೆ ಮೂಲೆಗಳಲ್ಲಿಯೂ ಸದ್ದು ಮಾಡುತ್ತಿದೆ. ಕಾಂತಾರ ನಮ್ಮ ಕನ್ನಡದ ಚಿತ್ರ ಎನ್ನುವುದು ನನಗೆ ಹೆಮ್ಮೆಯಾಗುತ್ತದೆ. ನಾನು ಸಹ ಅದೇ ಭಾಷೆಯ ನಟಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ನಾನು ಕನ್ನಡದ ನಟಿ, ಕರ್ನಾಟಕ ಮೂಲದವಳು ಎಂಬ ಖುಷಿ ಇದೆ. ಕಾಂತಾರದಂತಹ ಕನ್ನಡ ಚಿತ್ರಗಳು ಭಾರತದಾದ್ಯಂತ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ವಿಷಯ ನನಗೆ ಖುಷಿ ನೀಡುತ್ತದೆ ಎಂದು ಅವರು ಬಹಳ ಅಭಿಮಾನದಿಂದ ಮಾತನಾಡಿದ್ದಾರೆ. ನಟಿ ಶ್ರೀ ಲೀಲಾ ಅವರ ಈ ಮಾತುಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ಶ್ರೀಲೀಲ ಮಾತುಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.