Kannada News: ಕನ್ನಡ, ತೆಲುಗು, ತಮಿಳಿಗರಿಗೆ ಒಮ್ಮೆಲ್ಲೇ ಶಾಕ್ ಕೊಟ್ಟ ರಶ್ಮಿಕಾ: ಹಿಂದಿಯವರಿಗೆ ಬಕೆಟ್ ಇಡಿದಿದ್ದು ಹೇಗೆ ಗೊತ್ತೆ??
Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಸಹ ಬಹುಬೇಡಿಕೆ ನಟಿಯಾಗುವ ಕಡೆಗೆ ಹೆಚ್ಚಿನ ಗಮನ ನೀಡಿದ್ದಾರೆ. ಕನ್ನಡ ಚಿತ್ರದ ಮೂಲಕ ಪರಿಚಯಗೊಂಡ ನಟಿ ರಶ್ಮಿಕಾ ಮಂದಣ್ಣ ಇದೀಗ ಸೌತ್ ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ತಮಿಳು, ತೆಲುಗು ಚಿತ್ರರಂಗದಲ್ಲಿ ಅವರು ಸಾಕಷ್ಟು ಬಿಸಿಯಾಗಿದ್ದಾರೆ. ಇದಲ್ಲದೆ ಅವರು ಬಾಲಿವುಡ್ (Bollywood) ನಟನೆಯ ಹಿಂದಿಯ ಮತ್ತೊಂದು ಚಿತ್ರ ಬಿಡುಗಡೆಯ ಹಂತದಲ್ಲಿದೆ. ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಬಾಲಿವುಡ್ ಗೆ ಪ್ರವೇಶಿಸಿ ಸಹಿಯಾಗಿದ್ದ ಮಿಷನ್ ಮಜ್ನು (Mission Majnu) ಚಿತ್ರ ಇದೀಗ ಬಿಡುಗಡೆಯ ಹಂತದಲ್ಲಿದೆ. ಈಗಾಗಲೇ ಇದರ ನಂತರ ಒಪ್ಪಿಕೊಂಡಿದ್ದ ಗುಡ್ ಬೈ (Goodbye) ಚಿತ್ರವು ಬಿಡುಗಡೆ ಕಂಡು ನೆಲ ಕಚ್ಚಿತ್ತು. ಇನ್ನು ಮಿಷನ್ ಮಜ್ನು ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇದೆ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಬಾಲಿವುಡ್ ಬಗ್ಗೆ ಹೊಗಳುವ ಭರದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಕೇವಲವಾಗಿ ಮಾತನಾಡುವ ಮೂಲಕ ಮತ್ತೆ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದಾರೆ.
ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ನಟಿಸಲು ಮೊದಲು ಒಪ್ಪಿಕೊಂಡಿದ್ದ ಮಿಷನ್ ಚಿತ್ರ ಇದೀಗ ತೆರೆ ಕಾಣಲು ಸಿದ್ಧವಾಗಿದೆ. ಚಿತ್ರತಂಡ ಪ್ರಚಾರದಲ್ಲಿ ನಿರತವಾಗಿದೆ. ಈ ಮೊದಲು ರಶ್ಮಿಕ ಅವರ ನಟನೆಯ ಬಾಲಿವುಡ್ ಚಿತ್ರ ಗುಡ್ ಬೈ ತೆರೆಕಂಡಿತ್ತು. ಆದರೆ ಈ ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ. ಮೊದಲ ಬಾರಿಗೆ ಬಾಲಿವುಡ್ ನಲ್ಲಿ ತೆರೆಕಂಡ ಈ ಚಿತ್ರದ ಬಗ್ಗೆ ರಶ್ಮಿಕಾ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದರು. ಚಿತ್ರವು ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಯಿತು. ಇದೀಗ ಅವರ ಎರಡನೇ ಚಿತ್ರ ಮಿಷನ್ ಮಜ್ನು ಬಗ್ಗೆ ಇದೇ ನಿರೀಕ್ಷೆ ಇದೆ. ಈ ಚಿತ್ರ ಖಂಡಿತವಾಗಿಯೂ ಜನರಿಗೆ ಇಷ್ಟವಾಗುತ್ತದೆ ಎಂದು ರಶ್ಮಿಕ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಇನ್ನು ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇದೆ ವೇಳೆ ಮಾಧ್ಯಮದವರು ಸೌತ್ ಸಿನಿಮಾ ಹಾಗೂ ಬಾಲಿವುಡ್ ಗು ಇರುವ ವ್ಯತ್ಯಾಸವೇನು ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ರಶ್ಮಿಕ ನೀಡಿರುವ ಉತ್ತರ ನೆಟ್ಟಿಗರ ಕೋಪಕ್ಕೆ ಗುರಿಯಾಗಿದೆ. ಇದನ್ನು ಓದಿ..Kannada News: ದರ್ಶನ್ ಅಭಿಮಾನಿಗಳಿಗೆ ಸರಿಯಾಗಿಯೇ ಉತ್ತರ ಕೊಟ್ಟ ಡಾಲಿ ಧನಂಜಯ್: ಇವೆಲ್ಲ ಬೇಕಿತ್ತೆ ಡಿ ಬಾಸ್ ಫ್ಯಾನ್ಸ್ ಗೆ??

ನಟಿ ರಶ್ಮಿಕಾ ಸಾಕಷ್ಟು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ, ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ. ಯಾರ ಬಗ್ಗೆ ಮಾತನಾಡಲು ಹೋಗಿ ಇನ್ಯಾರ ಬಗ್ಗೆ ಕೆಟ್ಟದಾಗಿ ಹೇಳಿದ್ದಾರೆ. ಯಾರೋ ಒಬ್ಬರನ್ನು ಹೊಗಳಲು ಹೋಗಿ ಮತ್ತೊಬ್ಬರನ್ನು ತಮಗೆ ಅರಿವಿಲ್ಲದಂತೆ ಕೇವಲವಾಗಿ ಮಾತನಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗಲೂ ಕೂಡ ಅಂತದೇ ಒಂದು ಘಟನೆ ಜರುಗಿದೆ. ನಟಿ ರಶ್ಮಿಕಾ ಮಂದಣ್ಣ ಅವರಿಗೆ ಮಾಧ್ಯಮದವರು ಬಾಲಿವುಡ್ ಗು ಸೌತ್ ಚಿತ್ರರಂಗಕ್ಕೂ ಇರುವ ವ್ಯತ್ಯಾಸವೇನು ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ರಶ್ಮಿಕ ನೀಡಿರುವ ಉತ್ತರ ಇದೀಗ ಎಲ್ಲರ ಕೋಪಕ್ಕೆ ಕಾರಣವಾಗಿದೆ. “ಬಾಲಿವುಡ್ ನಲ್ಲಿ ಸಿನಿಮಾ ಮತ್ತು ಅದರ ಹಾಡುಗಳು ತುಂಬಾ ಚೆನ್ನಾಗಿರುತ್ತದೆ. ಹಾಗಾಗಿ ಬಾಲಿವುಡ್ ನನಗೆ ಇಷ್ಟವಾಗುತ್ತದೆ. ಆದರೆ ಸೌತ್ ಸಿನಿಮಾ ಹಾಡುಗಳು ರೋಮ್ಯಾಂಟಿಕ್ ಆಗಿರುವುದಿಲ್ಲ. ಅಲ್ಲಿ ಹೆಚ್ಚಾಗಿ ಮಸಾಲೆ, ಮಾಸ್ ಮತ್ತು ಐಟಂ ಸಾಂಗ್ ಗಳೇ ಹೆಚ್ಚಾಗಿರುತ್ತವೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತಾಗಿ ಎಲ್ಲೆಡೆ ರಶ್ಮಿಕಾ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಇದನ್ನು ಓದಿ.. Kannada News: ತೆಲುಗಿನ ಚಿತ್ರದ ಪ್ರಚಾರದಲ್ಲಿ ಕಾಂತಾರ ಕುರಿತು ಮಾತನಾಡಿದ ಶ್ರೀ ಲೀಲಾ ಹೇಳಿದ್ದೇನು ಗೊತ್ತೇ??