Kannada News: ತಾಯಿಯಾದ ಖುಷಿಯಲ್ಲಿರುವ ರಾಮ್ ಚರಣ್ ಪತ್ನಿ, ಒಂದು ಚಪ್ಪಲಿಗೆ ಖರ್ಚು ಮಾಡಿದ್ದು ಅದೆಷ್ಟು ಗೊತ್ತೇ? ಇದರ ಬೆಲೆ ಕೇಳಿದರೆ, ಕೈಯೆತ್ತಿ ಮುಗಿತಿರ.
Kannada News: ನಟ ರಾಮಚರಣ್ (Ramcharan) ತೆಲುಗುನ ಪ್ರಖ್ಯಾತ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇದಲ್ಲದೆ ಅವರು ಹಲವಾರು ಉದ್ಯಮಗಳಲ್ಲಿಯೂ ಕೂಡ ಪಾರುಪತ್ಯ ಹೊಂದಿದ್ದು, ನಟನೆ ಮತ್ತು ಉದ್ಯಮ ಎರಡರಲ್ಲಿಯೂ ಕೂಡ ದೊಡ್ಡ ಮಟ್ಟದ ಗಳಿಗೆ ಕಾಣುತ್ತಿದ್ದಾರೆ. ಇನ್ನು ಅವರ ಪತ್ನಿ ಉಪಾಸನ (Upasana) ಅವರು ಸಹ ಜನಪ್ರಿಯ ಉದ್ಯಮದಾರರಾಗಿದ್ದು ವ್ಯವಹಾರದಲ್ಲಿ ಕೋಟ್ಯಾನುಕೋಟಿ ಗಳಿಸುವ ಜನಪ್ರಿಯ ಬುಸಿನೆಸ್ ವಿಮೆನ್ ಆಗಿದ್ದಾರೆ. ಇನ್ನೂ ಈ ಜೋಡಿ ಮದುವೆಯಾಗಿ 10 ವರ್ಷಗಳು ಕಳೆದಿದ್ದವು. ಇದೀಗ ಮೊದಲ ಬಾರಿಗೆ ಈ ಜೋಡಿ ಪೋಷಕರಾಗುತ್ತಿದ್ದಾರೆ. ಈ ಜೋಡಿ ಫೋಟೋಶೂಟ್ ಒಂದನ್ನು ನಡೆಸಿದ್ದು, ಈ ಫೋಟೋಶೂಟ್ ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಇದಕ್ಕಾಗಿ ಉಪಾಸನ ಹಾಕಿಕೊಂಡಿರುವ ಚಪ್ಪಲಿಯ ಬೆಲೆ ಕೇಳಿದರೆ ದಂಗಾಗಿ ಹೋಗ್ತೀರಾ. ಎರಡು ತಿಂಗಳ ಸಂಬಳ ಸೇರಿಸಿದರು ಇದೊಂದು ಜೊತೆ ಚಪ್ಪಲಿ ತೆಗೆದುಕೊಳ್ಳಲು ಆಗುವುದಿಲ್ಲ.
ರಾಮ್ ಚರಣ್ ಪತ್ನಿ ಉಪಾಸನ ಅವರು ಜನಪ್ರಿಯ ಉದ್ಯಮಿದಾರರಾಗಿದ್ದಾರೆ. ಭಾರತೀಯ ಹಾಸ್ಪಿಟಲ್ ಚೈನ್ ಜನಪ್ರಿಯ ಆಸ್ಪತ್ರೆಯಾದ ಅಪೋಲೋ ಹಾಸ್ಪಿಟಲ್ ನ ಚೇರ್ಮೆನ್ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಉಪಾಸನಾ ಅವರ ತಾತ ಶುರು ಮಾಡಿದ ಅಪಲೋ ಸಂಸ್ಥೆಯನ್ನು ಇದೀಗ ಮೊಮ್ಮಗಳು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅತಿ ದೊಡ್ಡ ಅಪೊಲೊ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಅವರು ಕೋಟ್ಯಾನು ಕೋಟಿ ಸಂಪಾದನೆ ಮಾಡುತ್ತಾರೆ. ಇಷ್ಟೇ ಅಲ್ಲದೆ ಅವರ ಖರ್ಚು ಸಹ ಅದೇ ರೀತಿ ಇದೆ. ಅವರು ದುಡಿಯುವ ತಕ್ಕಂತೆ ಅವರ ಜೀವನ ಶೈಲಿ ರೂಪಿಸಿಕೊಂಡಿದ್ದು ದುಬಾರಿ ಮನೆ, ಒಡವೆ, ಕಾರು, ಐಷಾರಾಮಿ ಜೀವನವನ್ನು ಸಾಗಿಸುತ್ತಿದ್ದಾರೆ. ಬರಿ ಇಷ್ಟು ಮಾತ್ರವಲ್ಲದೆ ಅವರು ಹಾಕಿಕೊಳ್ಳುವ ಚಪ್ಪಲಿ ಸಹ ದುಬಾರಿಯೇ. ದುಬಾರಿ ಎಂದರೆ ಅಷ್ಟಿಷ್ಟಲ್ಲ, ಸಾಮಾನ್ಯ ಜನರು ಅವರ ಎರಡು ಮೂರು ತಿಂಗಳ ಸಂಬಳವೆಲ್ಲವನ್ನು ಸೇರಿಸಿದರು ಕೂಡ ಅವರು ಧರಿಸುವ ಒಂದು ಜೊತೆ ಚಪ್ಪಲಿಯನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದರೆ ಅಚ್ಚರಿಯಾಗುತ್ತದೆ. ಇದನ್ನು ಓದಿ..Kannada News: ದರ್ಶನ್ ಸುದೀಪ್ ಒಂದಾಗಿದಕ್ಕೆ ದುನಿಯಾ ವಿಜಯ್ ಕೊಟ್ರು ಶಾಕಿಂಗ್ ಹೇಳಿಕೆ ವಿಜಯ್ ಮಾತು ಕೇಳಿ ದರ್ಶನ್ ಹೇಳಿದ್ದೇನು ಗೊತ್ತೇ??

ಕೆಲವು ದಿನಗಳ ಹಿಂದೆ ಉಪಾಸನ ಅವರು ತಾವು ತಾಯಿಯಾಗುತ್ತಿರುವ ಕುರಿತಾಗಿ ಪೋಸ್ಟ್ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ಇದೀಗ ತಮ್ಮ ಪತಿ ರಾಮ್ ಚರಣ್ ಜೊತೆ ಉಪಾಸನಾ ಅದ್ದೂರಿಯಾಗಿ ಫೋಟೋಶೂಟ್ ಒಂದನ್ನು ಮಾಡಿಸಿಕೊಂಡಿದ್ದಾರೆ. ಈ ಫೋಟೋಶೂಟ್ ಚಿತ್ರಗಳನ್ನು ಇದೀಗ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟ್ ಗಾಗಿ ಉಪಾಸನಾ ಬಣ್ಣದ ಉಡುಗೆ ತೊಟ್ಟಿದ್ದಾರೆ. ಅಲ್ಲದೆ ಅವರ ಬಟ್ಟೆಗೆ ಹೋಲುವಂತಹ ಚಪ್ಪಲಿಯನ್ನು ಹಾಕಿಕೊಂಡಿದ್ದಾರೆ. ಇದೀಗ ಅವರ ಚಪ್ಪಲಿಯ ಬೆಲೆಯ ಕಡೆಗೆ ನೆಟ್ಟಿಗರ ಗಮನ ಹೋಗಿದೆ. ಈ ಜೋಡಿಯ ಫೋಟೋಶೂಟ್ ವೈರಲ್ ಆಗಿರುವುದರ ಜೊತೆಗೆ ಉಪಾಸನಾ ಹಾಕಿರುವ ಚಪ್ಪಲಿಗೆ ಬೆಲೆಯ ಬಗ್ಗೆ ಕೂಡ ದೊಡ್ಡ ಮಟ್ಟದ ಸುದ್ದಿ ಆಗುತ್ತಿದೆ. ಏಕೆಂದರೆ ಅವರು ದುಬಾರಿ ಬೆಲೆಯ ಚಪ್ಪಲಿ ಧರಿಸಿದ್ದಾರೆ. ಈ ಚಪ್ಪಲಿಯ ಬೆಲೆ ಅಷ್ಟಿಷ್ಟಲ್ಲ, ಬರೋಬ್ಬರಿ 60,000 ರೂಪಾಯಿ ಬೆಲೆ ಬಾಳುವ ಚಪ್ಪಲಿಯನ್ನು ಧರಿಸಿ ಉಪಾಸನಾ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ಓದಿ.. Kannada News: ನಾನು ಅದೇ ದಿನ ಸಾಯ್ತೆನೆ ಅಂತ ವಿಷ್ಣು ಸರ್ ಗೆ ಗೊತ್ತಿತ್ತೇ?? ಆ ದಿನವನ್ನು ನೆನೆದು ತಾರಾ ಅಮ್ಮ ಹೇಳಿದ್ದೇನು ಗೊತ್ತೇ??