Kannada News: ದರ್ಶನ್ ಅಭಿಮಾನಿಗಳಿಗೆ ಸರಿಯಾಗಿಯೇ ಉತ್ತರ ಕೊಟ್ಟ ಡಾಲಿ ಧನಂಜಯ್: ಇವೆಲ್ಲ ಬೇಕಿತ್ತೆ ಡಿ ಬಾಸ್ ಫ್ಯಾನ್ಸ್ ಗೆ??
ನೆನ್ನೆಯಷ್ಟೇ ನಟ ಡಾಲಿ ಧನಂಜಯ್ ಅಭಿನಯದ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಧ್ಯಮದವರು, ಇಡೀ ಚಿತ್ರತಂಡ ಹಾಗೂ ಸಾಕಷ್ಟು ಜನ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿತ್ರದ ಬಗ್ಗೆ ಚಿತ್ರತಂಡದವರು ಮಾತನಾಡುತ್ತಿದ್ದರು, ಇದೇ ವೇಳೆ ಅಲ್ಲಿದ್ದ ದರ್ಶನ್ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಜೋರಾಗಿ ಕೂಗಿದ್ದಾರೆ. ಸಾಮಾನ್ಯವಾಗಿ ದರ್ಶನ್ ಅಭಿಮಾನಿಗಳು ಬೇರೆ ನಟರ ಕಾರ್ಯಕ್ರಮದಲ್ಲಿ ಕೂಡ ಡಿ ಬಾಸ್ ಡಿ ಬಾಸ್ ಎಂದು ಕರೆದಿರುವ ಹಲವಾರು ಘಟನೆಗಳು ನಡೆದಿದೆ. ಸುದೀಪ್, ಪುನೀತ್ ಸೇರಿದಂತೆ ಸಾಕಷ್ಟು ನಟರ ಕಾರ್ಯಕ್ರಮಗಳಲ್ಲಿಯೂ ಕೂಡ ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಈ ಹಿಂದೆ ಹಲವಾರು ಬಾರಿ ಕರೆದಿದ್ದರು. ಇದೀಗ ನಟ ಧನಂಜಯ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿಯೂ ಕೂಡ ಡಿ ಬಾಸ್ ಡಿ ಬಾಸ್ ಎಂದು ಅಭಿಮಾನಿಗಳು ಕರೆದಿರುವ ಘಟನೆ ನಡೆದಿದೆ. ಆದರೆ ಇದಕ್ಕೆ ನಟ ಡಾಲಿ ಧನಂಜಯ್ ಶಾಕಿಂಗ್ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಾರ್ಯಕ್ರಮದ ವೇಳೆ ಡಿ ಬಾಸ್ ಡಿ ಬಾಸ್ ಎಂದು ದರ್ಶನ್ ಅಭಿಮಾನಿಗಳು ಜೋರಾಗಿ ಕೂಗಿದ್ದಾರೆ. ಆಗಿನ್ನು ನಟ ಡಾಲಿ ಧನಂಜಯ್ ವೇದಿಕೆ ಮೇಲೆ ಮಾತನಾಡಲು ಬಂದಿರಲಿಲ್ಲ. ವೇದಿಕೆ ಮುಂಭಾಗದಲ್ಲಿ ಕುಳಿತುಕೊಂಡಿದ್ದರು, ಆಗ ಅಭಿಮಾನಿಗಳು ಡಿ ಬಾಸ್ ಎಂದು ಕೂಗಿದ್ದಾರೆ. ನಂತರ ಕೆಲವು ಸಮಯದ ನಂತರ ಅವರು ವೇದಿಕೆ ಮೇಲೆ ಬರುವಾಗಲೂ ಸಹ ಡಿ ಬಾಸ್ ಡಿ ಬಾಸ್ ಎಂದು ಅಭಿಮಾನಿಗಳು ಜೋರಾಗಿ ಕೂಗಿದ್ದಾರೆ. ಇದಕ್ಕೆ ಮುಗುಳುನಗೆ ಮೂಲಕ ಪ್ರತಿಕ್ರಿಯಿಸಿರುವ ಡಾಲಿ ಧನಂಜಯ್ ಮೈಕ್ ತೆಗೆದುಕೊಂಡು ಮಾತು ಶುರು ಮಾಡಿದ್ದಾರೆ. ಆಗ ಧನಂಜಯ್ ಆಡಿದ ಮಾತುಗಳು ಅಚ್ಚರಿ ಉಂಟುಮಾಡಿದೆ. ವೇದಿಕೆ ಮೇಲೆ ಬಂದ ನಂತರ ನಟ ಡಾಲಿ ಧನಂಜಯ್ ಡಿ ಬಾಸ್ ಡಿ ಬಾಸ್ ಎಂದು ಕರೆಯುತ್ತಿದ್ದ ಅಭಿಮಾನಿಗಳಿಗೆ ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಧನಂಜಯ್ ಅವರ ಪ್ರತಿಕ್ರಿಯೆಗೆ ಅಭಿಮಾನಿಗಳು ತೆಪ್ಪಗಾಗಿದ್ದಾರೆ. ಇದನ್ನು ಓದಿ..Kannada News: ನಾನು ಅದೇ ದಿನ ಸಾಯ್ತೆನೆ ಅಂತ ವಿಷ್ಣು ಸರ್ ಗೆ ಗೊತ್ತಿತ್ತೇ?? ಆ ದಿನವನ್ನು ನೆನೆದು ತಾರಾ ಅಮ್ಮ ಹೇಳಿದ್ದೇನು ಗೊತ್ತೇ??

ಮೈಕ್ ಪಡೆದ ನಟ ಧನಂಜಯ್ ಡಿ ಬಾಸ್ ಎಂದು ಕರೆಯುತ್ತಿದ್ದ ಅಭಿಮಾನಿಗಳಿಗೆ “ಇನ್ನು ಜೋರಾಗಿ ಕೂಗಿ, ಇನ್ನೂ ಸಹ ಜೋರಾಗಿ ಎಲ್ಲಾ ಕಡೆಗೂ ಕೇಳಿಸಬೇಕು. ನಾವು ಯಾವೆಲ್ಲ ನಟರನ್ನು ನೋಡಿಕೊಂಡು ಬೆಳೆದು ಬಂದಿದ್ದೇವೋ ಆ ಎಲ್ಲ ನಟರ ಹೆಸರು ಕೇಳಿ ಬರಲಿ. ಇನ್ನೂ ಜೋರಾಗಿ ಕೂಗಿ, ನಾವು ಅವರನ್ನು ನೋಡಿ ಸಾಕಷ್ಟು ಕಲಿತಿದ್ದೇವೆ. ಅವರನ್ನು ನೋಡಿಕೊಂಡೇ ಬೆಳೆದು ಬಂದಿದ್ದೇವೆ. ಅಂತವರೆಲ್ಲರನ್ನು ನಾವು ನೆನೆಯಲೇಬೇಕು. ಎಲ್ಲ ನಟರ ಹೆಸರುಗಳನ್ನು ಜೋರಾಗಿ ಕೂಗಿ. ಕನ್ನಡ ಚಿತ್ರರಂಗ ಯಾವತ್ತೂ ಒಗ್ಗಟ್ಟಿನಿಂದರಬೇಕು” ಎಂಬ ಅರ್ಥದ ಮಾತುಗಳನ್ನು ಹೇಳುವ ಮೂಲಕ ಡಿ ಬಾಸ್ ಎಂದು ಅನಗತ್ಯವಾಗಿ ಕೂಗುವ ಮೂಲಕ ಅಧಿಕಪ್ರಸಂಗತನ ತೋರಿದ ಅಭಿಮಾನಿಗಳಿಗೆ ತಕ್ಕ ಉತ್ತರ ಕೊಡುವ ಮೂಲಕ ಡಾಲಿ ಧನಂಜಯ್ ದೊಡ್ಡತನ ಮೆರೆದಿದ್ದಾರೆ. ಇದನ್ನು ಓದಿ.. Kannada News: ತಾಯಿಯಾದ ಖುಷಿಯಲ್ಲಿರುವ ರಾಮ್ ಚರಣ್ ಪತ್ನಿ, ಒಂದು ಚಪ್ಪಲಿಗೆ ಖರ್ಚು ಮಾಡಿದ್ದು ಅದೆಷ್ಟು ಗೊತ್ತೇ? ಇದರ ಬೆಲೆ ಕೇಳಿದರೆ, ಕೈಯೆತ್ತಿ ಮುಗಿತಿರ.