Kannada Astrology: ಮುಂದಿನ 2023 ರ ವರ್ಷ ತುಲಾರಾಶಿಯವರಿಗೆ ಹೇಗಿರಲಿದೆ ಗೊತ್ತೇ?? ಆದಾಯ ಹೇಗಿರಲಿದೆ ಗೊತ್ತೇ?? ನೀವೇನು ಮಾಡಬೇಕು ಗೊತ್ತೇ??
Kannada Astrology: ಇನ್ನು ಕೇವಲ ಮೂರೇ ಮೂರು ದಿನಗಳು ಕಳೆದರೆ ಈ ವರ್ಷ ಅಂದರೆ 2022 ಮುಗಿದು 2023 ಶುರುವಾಗಲಿದೆ. ಸಾಮಾನ್ಯವಾಗಿ ಹೊಸ ವರ್ಷ ಬಂತೆಂದರೆ ಎಲ್ಲರೂ ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಾರೆ. ಹೊಸ ಕೆಲಸಗಳಿಗೆ ಕೈ ಹಾಕುತ್ತಾರೆ, ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಕಳೆದ ವರ್ಷ ಮಾಡಲು ಸಾಧ್ಯವಾಗದೆ ಇದ್ದ ಕೆಲಸಗಳನ್ನು ಈ ವರ್ಷವಾದರೂ ಮಾಡುವ ಸಂಕಲ್ಪ ಮಾಡುತ್ತಾರೆ. ಅಲ್ಲದೆ ಈ ಹಿಂದೆ ಮಾಡಿದ ತಪ್ಪುಗಳನ್ನು ಮುಂದೆ ಮಾಡದ ಹಾಗೆ ಎಚ್ಚರ ವಹಿಸುತ್ತಾರೆ. ಹೊಸ ವರ್ಷ ಸಾಮಾನ್ಯವಾಗಿ ಎಲ್ಲರಿಗೂ ಹೊಸ ಹೊಸ ಆಲೋಚನೆಗಳನ್ನು ತರುತ್ತದೆ. ಇದರ ಜೊತೆಗೆ ಹೊಸ ವರ್ಷದಿಂದ ಎಲ್ಲರಿಗೂ ತಮ್ಮ ಜೀವನದ ಭವಿಷ್ಯ ಹಾಗೂ ರಾಶಿ ಭವಿಷ್ಯ ಹೇಗಿರುತ್ತದೆ ಎನ್ನುವುದರ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಈ 2023 ತಮಗೆ ಶುಭವನ್ನು ತರುತ್ತದೆಯೋ, ಭವಿಷ್ಯ ಹೇಗಿರಲಿದೆ ಎನ್ನುವ ಆತಂಕಗಳು ಎಲ್ಲರಿಗೂ ಇರುತ್ತದೆ. ಅಂದ ಹಾಗೆ ಮುಂದಿನ ಹೊಸ ವರ್ಷ 2023 ತುಲಾ ರಾಶಿಯವರಿಗೆ ಹೇಗಿರಲಿದೆ ಎನ್ನುವ ರಾಶಿ ಭವಿಷ್ಯವನ್ನು ಇಲ್ಲಿ ವಿವರಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಹೊಸ ವರ್ಷ ತುಲಾ ರಾಶಿಯವರಿಗೆ ಮಿಶ್ರ ಫಲಗಳನ್ನು ನೀಡುತ್ತದೆ. ಜೀವನವೆಂದರೆ ಸೋಲು ಗೆಲುವು, ಏಳು-ಬೀಳು ಸಾಮಾನ್ಯ. ಎಲ್ಲವನ್ನು ಎದುರಿಸಬೇಕಾಗುತ್ತದೆ. ಎಂಥದೆ ಪರಿಸ್ಥಿತಿ ಎದುರಾದರೂ ಅದನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು. ಲಾಭ ನಷ್ಟ, ಸುಖ ದುಃಖ ಹೀಗೆ ಎಲ್ಲ ವಿಷಯಗಳಲ್ಲಿಯೂ ಕೂಡ ತುಲಾ ರಾಶಿಯವರಿಗೆ ಮಿಶ್ರ ಫಲ ಎದುರಾಗಲಿದೆ. ಸಮಸ್ಯೆ ಬಂದಾಗ ಕುಗ್ಗದೆ ಅದನ್ನು ಎದುರಿಸಿ ಮುನ್ನುಗ್ಗಬೇಕು. ಸಣ್ಣಪುಟ್ಟ ಸಮಸ್ಯೆಗಳು ಎದುರಾದರೂ ಸಹ ಅದನ್ನು ನೀವು ಸಮರ್ಥವಾಗಿ ಎದುರಿಸಲಿದ್ದೀರಿ. ತುಲಾ ರಾಶಿಯವರಿಗೆ ಪಂಚಮದಲ್ಲಿ ಶನಿ ಇರಲಿದ್ದು ಕೆಲವು ಸಮಸ್ಯೆಗಳು ತಲೆದೋರುತ್ತವೆ. ಶನಿಯ ಪ್ರಭಾವದಿಂದಾಗಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಓದಿ..Kannada News: ವಿಲ್ಲನ್ ಆಗಿ ಕಾಣಿಸಿಕೊಂಡು ಕೊನೆಯಲ್ಲಿ ಹೀರೋ ಆದ, ಕಿಶೋರ್ ಗೆ ಕಾಂತಾರ ಕೊನೆಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತೆ?

ಆದರೆ ದೈವವಶಾತ್ ಸಪ್ತಮದಲ್ಲಿ ಗುರು ಇರುವುದರಿಂದಾಗಿ ಈ ಸಮಸ್ಯೆಗಳೆಲ್ಲ ಬಗೆಹರಿದು ನಿಮ್ಮ ಕಷ್ಟಗಳು ನಿವಾರಣೆಯಾಗಲು ಗುರು ನಿಮಗೆ ಸಹಕರಿಸುತ್ತಾನೆ. ಇನ್ನು ಕುಟುಂಬದ ವಿಷಯದಲ್ಲಿ ಮಕ್ಕಳಿಂದ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಮಕ್ಕಳಿಂದ ಕಿರಿಕಿರಿ ಉಂಟಾಗಬಹುದು. ಮಕ್ಕಳಲ್ಲಿ ಯಾವುದೇ ಬೇಡದ ಬದಲಾವಣೆಗಳು ಕಂಡುಬಂದರೆ ಅದನ್ನು ಸರಿಯಾಗಿ ಗಮನಿಸಿ, ಕುಳಿತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ. ಸಮಾಧಾನದಿಂದ ಎಲ್ಲದಕ್ಕೂ ಉತ್ತರ ಹುಡುಕಿ. ಉತ್ತಮ ಆದಾಯ ಇದ್ದರೂ ಸಹ ಹಣ ಸಾಕಾಗುತ್ತಿಲ್ಲ ಎನ್ನುವ ಪರಿಸ್ಥಿತಿ ಎದುರಾಗಲಿದೆ. ಎಷ್ಟೇ ದುಡ್ಡು ಬಂದರೂ ಎಲ್ಲವನ್ನೂ ಅನಗತ್ಯವಾಗಿ ಖರ್ಚು ಮಾಡುವ ಪ್ರವೃತ್ತಿಯಿಂದ ಈ ಸಮಸ್ಯೆ ಉಂಟಾಗಬಹುದು. ಹೀಗಾಗಿ ಈ ವರ್ಷ ಹಣಕಾಸನ್ನು ವಿವೇಚನೆಯಿಂದ ಬಳಸಿ. ಎಷ್ಟು ಅಗತ್ಯವಿದೆಯೋ ಅಷ್ಟು ಮಾತ್ರ ಖರ್ಚು ಮಾಡಿ. ಉಳಿತಾಯದ ಕಡೆಗೆ ಗಮನ ನೀಡಿ.
ಮನಸ್ಸಿನಲ್ಲಿ ಅನಗತ್ಯವಾಗಿ ಕೆಟ್ಟ ಕೆಟ್ಟ ಯೋಚನೆಗಳು ಬರಬಹುದಾದ ಸಾಧ್ಯತೆ ಹೆಚ್ಚಾಗಿದೆ. ಆದರೆ ಮನಸ್ಸನ್ನು ದುರ್ಬಲಗೊಳಿಸಿಕೊಳ್ಳಬೇಡಿ. ದೇವರ ಆರಾಧನೆ ಮಾಡಿ, ದೇವರಲ್ಲಿ ವಿಶ್ವಾಸವಿರಿಸಿ. ನಿಮ್ಮ ಕೆಲಸದ ಮೇಲೆ ನಿಮಗೆ ಶ್ರದ್ಧೆ ಇರಲಿ. ಎಲ್ಲವೂ ಒಳ್ಳೆಯದೇ ಆಗಲಿದೆ. ಬೇರೆಯವರಿಗೆ ಸಹಾಯ ಮಾಡುವುದು, ದಾನ ಮಾಡುವುದು ಉತ್ತಮ. ಸೋಮಾರಿತನವನ್ನು ಬಿಡಲೇಬೇಕು, ಜೊತೆಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ. ಜ್ಞಾನಾರ್ಜನೆಗೆ ಇದು ಉತ್ತಮ ಸಮಯವಾಗಿದೆ. ಹಾಗೆ ನಿಮಗೆ ಜ್ಞಾನಾರ್ಜನೆಯ ಕಾರಣದಿಂದ ಉತ್ತಮ ಹಣಕಾಸಿನ ನೆರವು, ಲಾಭ ಆಗಲಿದೆ. ಕುಟುಂಬದವರು ನಿಮ್ಮ ಜೊತೆಗೆ ಸದಾ ಇರಲಿದ್ದು ಗುರು ಹಿರಿಯರ ಬೆಂಬಲ ದೊರೆಯಲಿದೆ. ಮಹಾದೇವ ಶಿವನನ್ನು ಆರಾಧಿಸುವುದರಿಂದಾಗಿ ಬಂದ ಸಮಸ್ಯೆಗಳು ಕ್ಷಣಾರ್ಧದಲ್ಲಿ ಮಾಯವಾಗುತ್ತವೆ. ಇದನ್ನು ಓದಿ.. Health Tips: ಸಾವಿರಾರು ರೂಪಾಯಿ ಖರ್ಚು ಮಾಡುವ ಮೊದಲು, 7 ದಿನಗಳಲ್ಲಿ ಈ ಎಲೆಗಳ ಮೂಲಕ ಡಯಾಬಿಟಿಸ್ ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ?