Cricket News: 31 ಒಂದು ವರ್ಷಕ್ಕೆ ಅಂತ್ಯವಾಗುತ್ತ ರಾಹುಲ್ ರವರ ಕ್ರಿಕೆಟ್ ಭವಿಷ್ಯ: ಒಮ್ಮೆ ಹೊರಹೋದರೆ ಬರುವುದು ಕಷ್ಟವಾಗಿರುವಾಗ ಜಾಫರ್ ಹೇಳಿದ್ದೇನು ಗೊತ್ತೇ??
Cricket News: ಟೀಮ್ ಇಂಡಿಯಾ (Team India) ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ (India vs Bangladesh) 2-9 ಅಂತರದಲ್ಲಿ ಗೆದ್ದಿದೆ. ಈ ಪಂದ್ಯಕ್ಕೆ ರೋಹಿತ್ ಶರ್ಮ (Rohit Sharma) ಅವರು ಅಲಭ್ಯವಾಗಿದ್ದ ಕಾರಣ ಕೆ.ಎಲ್.ರಾಹುಲ್ (K L Rahul) ಅವರು ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದರು. ಕ್ಯಾಪ್ಟನ್ ಆಗಿ ಕೆ.ಎಲ್.ರಾಹುಲ್ ಅವರು ಗೆದ್ದಿದ್ದಾರೆ, ಆದರೆ ಬ್ಯಾಟ್ಸ್ಮನ್ ಆಗಿ ರಾಹುಲ್ ಅವರು ಕಳಪೆ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ರಾಹುಲ್ ಅವರು ಟೆಸ್ಟ್ ಪಂದ್ಯಗಳಲ್ಲಿ ಉತ್ತಮವಾದ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ.
ರನ್ಸ್ ಗಳಿಸಲು ಬಹಳ ಕಷ್ಟಪಡುತ್ತಿದ್ದರು. 2 ಟೆಸ್ಟ್ ಪಂದ್ಯಗಳ 4 ಇನ್ನಿಂಗ್ಸ್ ಗಳಲ್ಲಿ ಒಂದರಲ್ಲಿ ಕೂಡ ರಾಹುಲ್ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ. ಇವರು ಗಳಿಸಿದ್ದು, ಕೇವಲ 22, 23, 10 ಮತ್ತು 3 ರನ್ ಗಳು. ಈ ಇಡೀ ವರ್ಷದಲ್ಲಿ ಕೆ.ಎಲ್.ರಾಹುಲ್ ಅವರು ಆಡಿರುವ 4 ಟೆಸ್ಟ್ ಪಂದ್ಯಗಳಲ್ಲಿ 17.13 ಆವರೇಜ್ ನಲ್ಲಿ ಕೇವಲ 137 ರನ್ಸ್ ಗಳಿಸಿದ್ದಾರೆ. ಈ ರೀತಿ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ರಾಹುಲ್ ಅವರನ್ನು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗೆ ಇಡುವುದು ಒಳ್ಳೆಯದು ಎನ್ನುವ ಅಭಿಪ್ರಾಯ ಎಲ್ಲರಲ್ಲೂ ವ್ಯಕ್ತವಾಗಿದೆ. ಇದನ್ನು ಓದಿ.. Jio Recharge Plans: ಇಂಟರ್ನೆಟ್ ಡೇಟಾ ಕಾಲಿ ಆಗುತ್ತದೆ ಎನ್ನುವ ಟೆನ್ಶನ್ ಬೇಡ, ಒಮ್ಮೆ ರಿಚಾರ್ಜ್ ಮಾಡಿ ವರ್ಷ ಪೂರ್ತಿ ಬಳಸಿ. ಯಾವ ಪ್ಲಾನ್ ಗೊತ್ತೇ??

ಇದರ ಬಗ್ಗೆ ಹಿರಿಯ ಆಟಗಾರ ವಾಸಿಂ ಜಾಫರ್ (Wasim Jaffer) ಅವರು ಕೂಡ ಮಾತನಾಡಿ, ರಾಹುಲ್ ಅವರು ಬಹಳ ಸುಲಭವಾಗಿ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈಗ ಅವರು ಉತ್ತಮ ಪ್ರದರ್ಶನ ನೀಡಲೇಬೇಕಿದೆ. ರೋಹಿತ್ ಶರ್ಮ ಅವರು ತಂಡಕ್ಕೆ ಬಂದರೆ, ಕೆ.ಎಲ್.ರಾಹುಲ್ ಅವರು ಹೊರಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ ವಾಸಿಂ ಜಾಫರ್. ಈ ಮೂಲಕ ರಾಹುಲ್ ಅವರು ಉತ್ತಮ ಪ್ರದರ್ಶನ ನೀಡದ ಹೊರತು ತಂಡದಲ್ಲಿ ಇರಲು ಅರ್ಹವಿಲ್ಲ ಎಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮುಂಬರುವ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನ ಭಾಗವಾಗಿದ್ದು, ಬಹಳ ಮುಖ್ಯವಾದ ಟೂರ್ನಿ ಇದಾಗಿದೆ, ಹಾಗಾಗಿ ರಾಹುಲ್ ಅವರು ಯಾವ ರೀತಿ ಆಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Health Tips: ಹತ್ತು ದಿನ ಬ್ರಷ್ ಮಾಡದೆ ಇದ್ದರೂ ದುರ್ವಾಸನೆ ಬರಬಾರದು ಅಂದ್ರೆ ಏನು ಮಾಡಬೇಕು ಗೊತ್ತೇ??