Kannada News: ನಾನು ಅದೇ ದಿನ ಸಾಯ್ತೆನೆ ಅಂತ ವಿಷ್ಣು ಸರ್ ಗೆ ಗೊತ್ತಿತ್ತೇ?? ಆ ದಿನವನ್ನು ನೆನೆದು ತಾರಾ ಅಮ್ಮ ಹೇಳಿದ್ದೇನು ಗೊತ್ತೇ??

22

Kannada News: ನಟ ವಿಷ್ಣುವರ್ಧನ್ (Vishnuvardhan) ಅವರು ಸ್ಯಾಂಡಲ್ ವುಡ್ ನಲ್ಲಿ ಸಾಹಸ ಸಿಂಹ ಎಂದೇ ಹೆಸರಾದವರು. ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ ಪ್ರಸಿದ್ಧ ನಟರಾಗಿದ್ದ ವಿಷ್ಣುವರ್ಧನ್ ಅವರು ಸಾಕಷ್ಟು ಸೂಪರ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಕನ್ನಡ ಸಿನಿಮಾ ಇತಿಹಾಸವನ್ನು ನೋಡುವಾಗ ವಿಷ್ಣುವರ್ಧನ್ ಅವರ ಕುರಿತಾಗಿ ಮಾತನಾಡದೆ ಮುಂದೆ ಹೋಗುವಂತಿಲ್ಲ. ಅಷ್ಟರಮಟ್ಟಿಗೆ ಚಿತ್ರರಂಗದಲ್ಲಿ ಅವರು ದೊಡ್ಡ ಮಟ್ಟದ ಗುರುತು ಉಳಿಸಿ ಹೋಗಿದ್ದಾರೆ. ಆದರೂ ಅವರು ನಮ್ಮನ್ನೆಲ್ಲ ಅಗಲಿದಾಗ ಅಷ್ಟೇನೂ ವಯಸ್ಸಾಗಿರಲಿಲ್ಲ. ಇನ್ನೂ ಸಹ ಚಿತ್ರರಂಗದಲ್ಲಿ ಅವರು ಇನ್ನಷ್ಟು ಹೆಸರು ಮಾಡಬೇಕಿತ್ತು. ಆದರೆ ಏಕಾಏಕಿ ಅವರು ಸಾವನ್ನಪ್ಪಿದ್ದರು. ಆದರೆ ಅವರಿಗೆ ತಾವು ಯಾವಾಗ ಸಾಯುತ್ತೇನೆ ಎನ್ನುವ ಸತ್ಯ ಮೊದಲೇ ಗೊತ್ತಾಗಿತ್ತಂತೆ. ಈ ಕುರಿತು ಕೆಲವರೊಂದಿಗೆ ಸಹ ಹೇಳಿಕೊಂಡಿದ್ದರಂತೆ. ಈ ವಿಷಯದ ಕುರಿತಾಗಿ ಇದೀಗ ನಟಿ ತಾರ ರಿಯಾಲಿಟಿ ಶೋ ಒಂದರಲ್ಲಿ ಹೇಳಿದ್ದಾರೆ.

ನಟಿ ತಾರಾ ಅನುರಾಧ (Thara Anuradha) ಸಿನಿಮಾ ನಟನೆ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ಕೆಲವು ವರ್ಷಗಳಿಂದ ಅವರು ಕಿರುತೆರೆಯಲ್ಲಿಯೂ ಕೂಡ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮದ ವೇಳೆ ಅವರು ವಿಷ್ಣುವರ್ಧನ್ ಅವರ ಕುರಿತಾಗಿ ಬಹಳ ಅಭಿಮಾನದಿಂದ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಅವರು ವಿಷ್ಣುವರ್ಧನ್ ಅವರ ಸಾವಿನ ಸತ್ಯದ ಕುರಿತಾಗಿ ಮಾತನಾಡಿದ್ದಾರೆ. ವಿಷ್ಣುವರ್ಧನ್ ಅವರಿಗೆ ತಾವು ಯಾವಾಗ ಸಾಯುತ್ತೇನೆ ಎನ್ನುವುದು ಮೊದಲೇ ಗೊತ್ತಿತ್ತಂತೆ, ವಿಷ್ಣುವರ್ಧನ್ ಅವರು ಸಾಯುವ ಕೊನೆಯ ದಿನಗಳಲ್ಲಿ ಹೆಚ್ಚು ಆಧ್ಯಾತ್ಮದ ಕಡೆಗೆ ವಾಲಿದರು. ಮುಕ್ತಿ, ಮೋಕ್ಷ, ದೇವರು ಹೀಗೆ ಸಾಕಷ್ಟು ವಿಷಯಗಳ ಕಡೆಗೆ ಅವರ ಆಸಕ್ತಿ ವಾಲಿತು. ಸದಾ ಆಧ್ಯಾತ್ಮದ ಬಗ್ಗೆ ಯೋಚಿಸುತ್ತಿದ್ದರು. ಅವರಿಗೆ ತಾನು ಯಾವಾಗ ಸಾಯುತ್ತೇನೆ ಎನ್ನುವ ಸತ್ಯ ಆಧ್ಯಾತ್ಮದಿಂದ ತಿಳಿದಿತ್ತು. ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳಿಯಲು ಬಯಸಿದ್ದರಂತೆ. ಹೀಗಾಗಿಯೇ ಕುಟುಂಬದವರಿಗೆ ತಿಳಿಸಿ ಅವರು ಮೈಸೂರಿಗೆ ತೆರಳಿದ್ದರಂತೆ. ಇದನ್ನು ಓದಿ..Kannada News: ಮಕ್ಕಳ ಜೊತೆ ಕ್ರಿಸ್ಮಸ್ ಆಚರಿಸಿದ ರಾಧಿಕಾ ಪಂಡಿತ್. ಫೋಟೋ ನೋಡಿದ ಪ್ರತಿಯೊಬ್ಬರ ಕೇಳಿದ ಪ್ರಶ್ನೆ ಏನು ಗೊತ್ತೇ??

ಮೈಸೂರಿಗೆ ಹೋಗುವ ಮೊದಲು ಕೋಡಿ ಮಠದ ಶ್ರೀಗಳಿಗೆ ಈ ವಿಷಯವನ್ನು ತಿಳಿಸಿದರಂತೆ. ಅದಕ್ಕೆ ಒಪ್ಪಿಗೆ ಸೂಚಿಸಿದ್ದ ಶ್ರೀಗಳು ಹೋಗು ಎಂದು ಮಾತ್ರ ಹೇಳಿದರಂತೆ. ಇದರ ಮರ್ಮವನ್ನು ಅರ್ಥ ಮಾಡಿಕೊಂಡು ವಿಷ್ಣುವರ್ಧನ್ ನೀವು ಕೇವಲ ಹೋಗು ಎನ್ನುತ್ತಿದ್ದೀರಿ, ಹೋಗಿ ಬಾ ಎಂದು ಹೇಳುತ್ತಿಲ್ಲ. ಇದು ನನಗೆ ಅರ್ಥವಾಗುತ್ತದೆ ಎಂದು ಹೇಳಿದರಂತೆ. ಅವರಿಗೆ ಆಗಲೇ ತಮ್ಮ ಸಾವಿನ ದಿನ ಹತ್ತಿರ ಬಂದಿದೆ ಎಂದು ಅರ್ಥವಾಯಿತು. ಅಲ್ಲದೆ ಆ ಸಮಯದಲ್ಲಿ ಚಿತ್ರೀಕರಣ ಆಗುತ್ತಿದ್ದ ಆಪ್ತರಕ್ಷಕ ಚಿತ್ರವನ್ನು ಬೇಗ ಬೇಗ ಮುಗಿಸಲು ತಂಡಕ್ಕೆ ಹೇಳುತ್ತಿದ್ದರಂತೆ. ಈ ಚಿತ್ರ ಅರ್ಧಕ್ಕೆ ನಿಲ್ಲಬಾರದು ಎನ್ನುವ ಕಾರಣದಿಂದ ವಿಷ್ಣುವರ್ಧನ್ ಹಾಗೆ ಹೇಳುತ್ತಿದ್ದರು ಎನ್ನುವುದು ಚಿತ್ರತಂಡಕ್ಕೆ ಅವರ ಸಾವಿನ ಬಳಿಕವೇ ಅರ್ಥವಾಯಿತಂತೆ. ಸಾಕಷ್ಟು ಸಲ ತಮ್ಮ ಆಪ್ತರಿಗೆ ವಿಷ್ಣುವರ್ಧನ್ ರವರು ತಮ್ಮ ಕೊನೆಯ ದಿನಗಳ ಕುರಿತಾಗಿ ಸೂಚನೆ ನೀಡಿದ್ದರಂತೆ. ಆದರೂ ಕೂಡ ಅದನ್ನು ಅದನ್ನು ಬೇರೆಯವರು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಈ ವಿಷಯದ ಕುರಿತಾಗಿ ಇದೀಗ ತಾರಾ ಅವರು ರಿಯಾಲಿಟಿ ಶೋನಲ್ಲಿ ಹಂಚಿಕೊಂಡಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ರವರು ಕೊನೆಯ ದಿನಗಳಲ್ಲಿ ಆಧ್ಯಾತ್ಮದ ಕಡೆಗೆ ಆಸಕ್ತಿ ತೋರಿದಲ್ಲದೆ ತಮ್ಮ ಸಾವು ಯಾವಾಗ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದರು. ಇದನ್ನು ಓದಿ.. Kannada News: ದರ್ಶನ್ ಸುದೀಪ್ ಒಂದಾಗಿದಕ್ಕೆ ದುನಿಯಾ ವಿಜಯ್ ಕೊಟ್ರು ಶಾಕಿಂಗ್ ಹೇಳಿಕೆ ವಿಜಯ್ ಮಾತು ಕೇಳಿ ದರ್ಶನ್ ಹೇಳಿದ್ದೇನು ಗೊತ್ತೇ??