Kannada News: ಮಕ್ಕಳ ಜೊತೆ ಕ್ರಿಸ್ಮಸ್ ಆಚರಿಸಿದ ರಾಧಿಕಾ ಪಂಡಿತ್. ಫೋಟೋ ನೋಡಿದ ಪ್ರತಿಯೊಬ್ಬರ ಕೇಳಿದ ಪ್ರಶ್ನೆ ಏನು ಗೊತ್ತೇ??

31

Kannada News: ನಟಿ ರಾಧಿಕಾ ಪಂಡಿತ್ (Radhika Pandit) ಅವರು ಇದೀಗ ತಮ್ಮ ಗಂಡ, ಪುಟಾಣಿ ಮಕ್ಕಳು ಎಂದು ಕುಟುಂಬದವರ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅವರು ಎಲ್ಲಾ ಹಬ್ಬಗಳನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಅಲ್ಲದೆ ಎಲ್ಲ ಶುಭ ಸಮಾರಂಭಗಳು, ಹಬ್ಬಗಳನ್ನು ಆಚರಿಸಿ ಅದರ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಮುಖಾಂತರ ಹಂಚಿಕೊಳ್ಳುತ್ತಿರುತ್ತಾರೆ. ಪ್ರತಿ ವಿಶೇಷ ಕಾರ್ಯಕ್ರಮಗಳ ಕುರಿತು ಅವರು ತಮ್ಮ ಅಭಿಮಾನಿಗಳ ಜೊತೆಗೆ ಅಪ್ಡೇಟ್ ಮಾಡುತ್ತಿರುತ್ತಾರೆ. ಇನ್ನು ನಟಿ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಕ್ರಿಸ್ಮಸ್ ಆಚರಿಸಲಾಗಿದೆ. ಬಹಳ ಅದ್ದೂರಿಯಾಗಿ ಕ್ರಿಸ್ಮಸ್ ಹಬ್ಬವನ್ನು ಮಾಡಲಾಗಿದ್ದು ನಟಿ ರಾಧಿಕಾ ಪಂಡಿತ್ ಇದೀಗ ಅದರ ಫೋಟೋಗಳನ್ನು ತಮ್ಮ instagram ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಕ್ರಿಸ್ಮಸ್ ಹಬ್ಬ ಬಹಳ ಅದ್ದೂರಿಯಾಗಿ ನಡೆದಿದೆ. ಕುಟುಂಬದವರೆಲ್ಲರೂ ಬಹಳ ಖುಷಿಯಿಂದ ಈ ಕ್ರಿಸ್ಮಸ್ ನಲ್ಲಿ ಪಾಲ್ಗೊಂಡಿದ್ದಾರೆ. ಬಹಳ ಸುಂದರವಾಗಿ ಕ್ರಿಸ್ಮಸ್ ಟ್ರೀ ಗೆ ಅಲಂಕಾರ ಮಾಡಲಾಗಿದೆ. ಅಲ್ಲದೆ ಐರ ಮತ್ತು ಯಥರ್ವ (Yatharv Yash) ಕ್ರಿಸ್ಮಸ್ ಸಾಂತಾ ಟೋಪಿ ಧರಿಸಿ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ. ಇದಲ್ಲದೆ ಗಿಫ್ಟ್ ಬಾಕ್ಸ್ ತೆರೆದು ಉಡುಗೊರೆಗಳನ್ನು ಪಡೆದು ಮಕ್ಕಳು ಖುಷಿಪಟ್ಟಿದ್ದಾರೆ. ಈ ಫೋಟೋಗಳನ್ನು ರಾಧಿಕಾ ತಮ್ಮ instagram ನಲ್ಲಿ ಹಂಚಿಕೊಂಡಿದ್ದು, ಕ್ರಿಸ್ಮಸ್ ಅನ್ನು ಎಷ್ಟು ಅದ್ದೂರಿಯಾಗಿ ಮಾಡಿದ್ದಾರೆ ಎನ್ನುವುದು ಫೋಟೋಗಳಲ್ಲಿ ಗೊತ್ತಾಗುತ್ತಿದೆ. ಈ ಪೋಸ್ಟ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಖುಷಿಯಿಂದ ಕಮೆಂಟ್ ಮಾಡಿದ್ದಾರೆ. ಇದನ್ನು ಓದಿ..Kannada News: ಪದೇ ಪದೇ ಸೋಲುತ್ತಿರುವ ರವಿ ಚಂದ್ರನ್ ರವರ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಾರಾಯಣ್ ಹೇಳಿದ್ದೇನು ಗೊತ್ತೇ??

ಇನ್ನು ರಾಧಿಕಾ ಪಂಡಿತ್ ಹಂಚಿಕೊಂಡಿರುವ ಫೋಟೋ ಜೊತೆಗೆ ಅವರು ಈ ರೀತಿಯಾಗಿ ಬರೆದುಕೊಂಡಿದ್ದಾರೆ, “ಹಬ್ಬಗಳು ಅಂದರೆ ಬರೀ ಒಳ್ಳೆಯ ಆಹಾರ, ಪಾರ್ಟಿ ಮತ್ತು ಉಡುಗೊರೆ ಅಷ್ಟೆ ಅಲ್ಲ. ಬಹಳ ಅದ್ಭುತವಾದ ಹಾಗೂ ಸಂತಸವನ್ನು ಹರಡುವ ಸಮಯ. ಎಲ್ಲರೂ ಬಹಳ ಚೆನ್ನಾಗಿ ಹಬ್ಬ ಆಚರಿಸಿದ್ದೀರಿ ಎಂದು ಆಶಿಸುತ್ತೇನೆ” ಎಂದು ಶುಭ ಹಾರೈಕೆಗಳನ್ನು ತಿಳಿಸುವ ಮೂಲಕ ಅವರು ಕ್ರಿಸ್ಮಸ್ ಆಚರಿಸಿದ್ದಾರೆ. ಅಂದ ಹಾಗೆ ಅವರು ಹಂಚಿಕೊಂಡಿರುವ ಫೋಟೋದಲ್ಲಿ ನಟ ಯಶ್ ಇಲ್ಲ. ಹೀಗಾಗಿ ಎಲ್ಲಾ ಅಭಿಮಾನಿಗಳು ಯಶ್ ಅವರು ಎಲ್ಲಿ ಎಂದು ಕೇಳುತ್ತಿದ್ದಾರೆ. ಅಲ್ಲದೆ ನಿಮ್ಮ ಸಾಂತಾ ಫೋಟೋದಲ್ಲಿ ಮಿಸ್ಸಾಗಿದ್ದಾರೆ ಅಲ್ಲವಾ ಎಂದು ರಾಧಿಕಾ ಅವರನ್ನು ಕಾಲೆಳೆಯುತ್ತಿದ್ದಾರೆ. ಒಟ್ಟಾರೆಯಾಗಿ ರಾಧಿಕಾ ಪಂಡಿತ್ ಮನೆಯಲ್ಲಿ ಕ್ರಿಸ್ಮಸ್ ಹಬ್ಬ ಅದ್ದೂರಿಯಾಗಿ ನಡೆದಿದ್ದು, ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಇದನ್ನು ಓದಿ.. Kannada News: ಬಿಗ್ ನ್ಯೂಸ್: ದರ್ಶನ್ ಮೇಲೆ ಚಪ್ಪಲಿ ಎಸೆದವನ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?? ಸಿಕ್ಕಿಬಿದ್ದ ಮೂವರು ಎಲ್ಲಿದ್ದಾರೆ ಗೊತ್ತೇ??