Kannada News: ಪದೇ ಪದೇ ಸೋಲುತ್ತಿರುವ ರವಿ ಚಂದ್ರನ್ ರವರ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಾರಾಯಣ್ ಹೇಳಿದ್ದೇನು ಗೊತ್ತೇ??

43

Kannada News: ನಟ ವಿ ರವಿಚಂದ್ರನ್ (V Ravichandran) ಸ್ಯಾಂಡಲ್ ವುಡ್ ನ ಕನಸುಗಾರ ಎಂದೇ ಖ್ಯಾತಿ ಪಡೆದಿದ್ದಾರೆ. ಅವರ ಚಿತ್ರಗಳಲ್ಲಿನ ಹಾಡುಗಳು ಇಂದಿಗೂ ಕೂಡ ಸದಾ ಅಚ್ಚ ಹಸಿರಾಗಿವೆ. ಇವತ್ತಿಗೂ ಕೂಡ ಅದೆಷ್ಟೋ ಯುವಕ ಯುವತಿಯರು ನಿತ್ಯವೂ ಗುನುಗುವ ಜನಪ್ರಿಯ ಗೀತೆಗಳು ಅವರ ಚಿತ್ರದ ಮೂಲಕ ನೀಡಿದ್ದಾರೆ. ಇದಲ್ಲದೆ ಆ ಕಾಲದಲ್ಲಿಯೇ ತಂತ್ರಜ್ಞಾನ, ವಿಭಿನ್ನ ಕಥಾಗಾರಿಕೆಯನ್ನು ತೆರೆ ಮೇಲೆ ತಂದವರಲ್ಲಿ ರವಿಚಂದ್ರನ್ ಮೊದಲಿಗರು. ಅವರ ಸಿನಿಮಾದಲ್ಲಿ ಶ್ರೀಮಂತಿಕೆ ಇರುತ್ತಿತ್ತು. ಸಿನಿಮಾ ನೋಡಲು ಬಂದ ಪ್ರತಿ ಪ್ರೇಕ್ಷಕನಿಗೂ ಒಂದೊಂದು ದೃಶ್ಯವೂ ಅದ್ಭುತ ಎನಿಸುವಷ್ಟರ ಮಟ್ಟಿಗೆ ಅವರು ಸಿನಿಮಾವನ್ನು ತೆರೆ ಮೇಲೆ ತರುತ್ತಿದ್ದರು. ಆ ಕಾಲದ ಅತ್ಯಂತ ಜನಪ್ರಿಯ ನಟ ಮತ್ತು ನಿರ್ದೇಶಕರಲ್ಲಿ ರವಿಚಂದ್ರನ್ ಮುಂಚೂಣಿಯಲ್ಲಿದ್ದರು. ಆದರೆ ಇತ್ತೀಚಿಗೆ ಅವರ ಚಿತ್ರಗಳು ಸೋಲು ಕಾಣುತ್ತಿದೆ, ಈ ಕುರಿತಾಗಿ ನಿರ್ದೇಶಕ ಎಸ್ ನಾರಾಯಣ್ (S Narayan) ಸಂದರ್ಶನ ಒಂದರಲ್ಲಿ ಮಾತನಾಡಿದ್ದು, ರವಿಚಂದ್ರನ್ ಸೋಲಿನ ಕುರಿತಾಗಿ ಮಾತನಾಡಿದ್ದಾರೆ.

ರವಿಚಂದ್ರನ್ ಮತ್ತು ಎಸ್ ನಾರಾಯಣ್ ಅವರು ಇಬ್ಬರೂ ಆತ್ಮೀಯ ಸ್ನೇಹಿತರು. ರವಿಚಂದ್ರನ್ ಅವರನ್ನು ನಾರಾಯಣ್ ಬಹಳ ಹತ್ತಿರದಿಂದ ನೋಡಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ರವಿಚಂದ್ರನ್ ಅವರ ಸಿನಿಮಾಗಳು ಸೋಲು ಕಾಣುತ್ತಿರುವ ಕುರಿತಾಗಿ ಅವರು ಮಾತನಾಡಿದ್ದಾರೆ. “ಆಗ ಶಾಂತಿ ಕ್ರಾಂತಿ (Shanthi Kranthi) ಸಿನಿಮಾ ಗೆಲ್ಲಬೇಕಿತ್ತು. ಅದೊಂದು ಸಿನಿಮಾ ಗೆದ್ದು ಬಿಟ್ಟಿದ್ದರೆ, ನಮ್ಮ ಕನ್ನಡ ಚಿತ್ರರಂಗ ಆಗಲೇ ಎಲ್ಲೋ ಹೋಗಿಬಿಡುತ್ತಿತ್ತು. ಅದು ರವಿಚಂದ್ರನ್ ಸೋಲು ಅಲ್ಲ ನಮ್ಮ ಉದ್ಯಮದ ಸೋಲು. ನಮ್ಮೆಲ್ಲರ ಸೋಲು. ನಾನು ಆ ಚಿತ್ರದ ನಿರ್ದೇಶಕ, ನಿರ್ಮಾಪಕ ಯಾರು ಅಲ್ಲ. ಆದರೂ ಕೂಡ ಸಿನಿಮಾದ ಸೋಲು ವೈಯಕ್ತಿಕವಾಗಿ ನನಗೆ ಬಹಳ ನೋವನ್ನುಂಟು ಮಾಡಿತ್ತು” ಎಂದು ಅವರು ಹೇಳಿದ್ದಾರೆ. ಜೊತೆಗೆ “ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ತಂದಿದ್ದೆ ರವಿಚಂದ್ರನ್ ಅವರು. ಆ ಕಾಲದಲ್ಲಿಯೇ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದಾರೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದನ್ನು ಓದಿ..Kannada News: ಶುರುವಾಯಿತು ಅಸಲಿ ವಾರ್: ರಮ್ಯಾ ಹಾಗೂ ರಶ್ಮಿಕಾ ರವರಲ್ಲಿ ಅಸಲಿ ರಾಣಿ ಯಾರು? ಯಾರು ನಂಬರ್ 1 ??

“ಅವರು ಸಿನಿಮಾದಲ್ಲಿ ಗೆದ್ದ ಅಷ್ಟು ಹಣವನ್ನು ಮತ್ತೆ ಸಿನಿಮಾಗೆ ಹಾಕುತ್ತಾರೆ. ಅವರು ಹಣ ಆಸ್ತಿ ಮಾಡುವುದರ ಬಗ್ಗೆ ಯೋಚಿಸುವುದಿಲ್ಲ. ಸೈಟ್ ಕೊಳ್ಳುವುದಿಲ್ಲ, ಬದಲಾಗಿ ಹತ್ತು ರೂ ಗೆದ್ದರೆ ಅಷ್ಟನ್ನು ಮತ್ತೆ ಸಿನಿಮಾಗೆ ಹಾಕುತ್ತಾರೆ. ಒಂದು ಕೋಟಿ ಗೆದ್ದರೆ ಮತ್ತೆ ಮುಂದಿನ ಸಿನಿಮಾಗೆ ಒಂದುವರೆ ಕೋಟಿ ವಿನಿಯೋಗಿಸುತ್ತಾರೆ. ಅವರು ಹಾಗೆಯೇ ಛಲವಾದಿ ಕನಸುಗಾರ. ಸದ್ಯ ರವಿಚಂದ್ರನ್ ಅವರಿಗೆ ಏನೇ ಹಿನ್ನಡೆ ಆಗಿರಬಹುದು. ಆದರೆ ಅದು ಅವರ ಹಿನ್ನಡೆಯಲ್ಲ, ಬದಲಿಗೆ ಚಿತ್ರೋದ್ಯಮದ ಹಿನ್ನೆಡೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ “ಕ್ರೇಜಿಸ್ಟಾರ್ ಅವರ ಸಿನಿಮಾಗಳು ಸೋಲುತ್ತಿರಬಹುದು, ಆದರೆ ಕ್ರೇಜಿಸ್ಟಾರ್ ಯಾವತ್ತಿಗೂ ಸೋಲುವುದಿಲ್ಲ. ರವಿಚಂದ್ರನ್ ಎಂದಿಗೂ ಸೋಲುವುದಿಲ್ಲ. ಅವರ ಬಳಿ ಸೋಲು ಎನ್ನುವುದು ಸುಳಿಯುವುದು ಇಲ್ಲ. ಇದೆಲ್ಲಾ ಕೇವಲ ತಾತ್ಕಾಲಿಕ ಅಷ್ಟೇ. ಸಿನಿಮಾದಲ್ಲಿ ಬರುವ ಇಂಟರ್ವಲ್ಲಿದ್ದಂತೆ. ರವಿಚಂದ್ರನ್ ಆದಷ್ಟು ಬೇಗ ಇದರಿಂದ ಹೊರಗೆ ಬರುತ್ತಾರೆ. ಇದೆಲ್ಲವೂ ತಾತ್ಕಾಲಿಕ ಅಷ್ಟೇ. ಅವರಿಗೆ ಆ ಶಕ್ತಿ ಇದೆ” ಎಂದು ಎಸ್ ನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಓದಿ.. Kannada News: ಈಗಲೂ ಮದುವೆಯಾಗದೆ ಉಳಿದಿರುವ ರವಿಮಾಮನ ಚೆಲುವೆ ನಗ್ಮಾ ರವರ ವಯಸ್ಸು ಎಷ್ಟು ಗೊತ್ತೇ? ಶಾಲಾ ಹುಡುಗಿಯಂತೆ ಕಂಡರೂ ವಯಸ್ಸು ಜಾಸ್ತಿನೇ ಆಯಿತು.