Jio Recharge Plans: ಇಂಟರ್ನೆಟ್ ಡೇಟಾ ಕಾಲಿ ಆಗುತ್ತದೆ ಎನ್ನುವ ಟೆನ್ಶನ್ ಬೇಡ, ಒಮ್ಮೆ ರಿಚಾರ್ಜ್ ಮಾಡಿ ವರ್ಷ ಪೂರ್ತಿ ಬಳಸಿ. ಯಾವ ಪ್ಲಾನ್ ಗೊತ್ತೇ??
Jio Recharge Plans: ಇದು ಇಂಟರ್ನೆಟ್ ಜಮಾನ. ಸ್ಮಾರ್ಟ್ಫೋನ್ ಜೊತೆಗೆ ನೆಟ್ ಇಲ್ಲ ಅಂದ್ರೆ ಏನು ಮಾಡೋಕೆ ಆಗಲ್ಲ ಅನ್ನುವಂತಹ ಕಾಲವಿದು. ಯಾವುದೇ ಸಾಮಾಜಿಕ ಜಾಲತಾಣ ಇತ್ಯಾದಿ ಮಾಧ್ಯಮಗಳನ್ನು ಬಳಸಲು ಇಂಟರ್ನೆಟ್ ಇರುವುದು ಅತ್ಯಗತ್ಯ. ಹೀಗಾಗಿ ಬಳಕೆದಾರರು ಡಾಟಾ ಪ್ಯಾಕ್ ಹಾಕಿಸುತ್ತಾರೆ. ಸಾಮಾನ್ಯವಾಗಿ ಡಾಟಾ ಪ್ಯಾಕ್ ಬೇಡ ಎನ್ನುವವರು ಯಾರು ಇಲ್ಲ. ತಿಂಗಳಿಗೆ, ಎರಡು ತಿಂಗಳು ಹೀಗೆ ಅವರವರ ಅನುಕೂಲಕ್ಕೆ ತಕ್ಕಂತೆ ಡೇಟಾ ಪ್ಯಾಕ್ ಹಾಕಿಸಿಕೊಳ್ಳುತ್ತಾರೆ. ಆದರೆ ಪ್ರತಿ ತಿಂಗಳು ಮುಗಿಯುತ್ತಾ ಬಂದಂತೆ ಅಯ್ಯೋ ಇಷ್ಟು ಬೇಗ ಡೇಟಾ ಪ್ಲಾನ್ ಮುಗಿದು ಹೋಯಿತಲ್ಲ, ಮತ್ತೆ ಹಾಕಿಸಿಕೊಳ್ಳಬೇಕು ಎನ್ನುವ ಟೆನ್ಶನ್ ಎಲ್ಲರಿಗೂ ಇದ್ದೇ ಇರುತ್ತದೆ. ಜಿಯೋ ಮೂಲಕ ಒಂದು ತಿಂಗಳಿನಿಂದ ಹಿಡಿದು ಒಂದು ವರ್ಷದವರೆಗಿನ ಡಾಟಾ ಪ್ಲಾನ್ ಗಳನ್ನು ಹಾಕಿಸಿಕೊಳ್ಳಬಹುದಾಗಿದೆ. ಆದರೆ ಇದೀಗ ಜಿಯೋ ವರ್ಷವಿಡಿ ಬಳಸಬಹುದಾದಂತಹ ಹೊಸ ಜಿಯೋ ಆಫರ್ ಪ್ಲಾನ್ ಪರಿಚಯಿಸಿದ್ದು ಬಳಕೆದಾರರು ಫುಲ್ ಖುಷ್ ಆಗಿದ್ದಾರೆ.
ಅಂದ ಹಾಗೆ ಇತ್ತೀಚಿಗೆ ಜಿಯೋ ತನ್ನ ಆಫರ್ಗಳಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿಕೊಂಡಿದೆ. ಇದರಲ್ಲಿ ವರ್ಷದ ಆಫರ್ ಒಂದರ ಮಾನ್ಯತೆಯನ್ನು ಇನ್ನಷ್ಟು ವಿಸ್ತರಿಸಿರುವುದು ಬಳಕೆದಾರರಿಗೆ ಪ್ರಯೋಜನವಾಗಲಿದೆ. ವರ್ಷದ ಡೇಟಾ ಪ್ಲಾನ್ ವ್ಯಾಲಿಡಿಟಿಯನ್ನು ಇನ್ನಷ್ಟು ಹೆಚ್ಚಿಸಲಾಗಿದ್ದು ಡಾಟಾ, ಅನಿಮಿತ ಕರೆ, ಎಸ್ಎಂಎಸ್ ಇತ್ಯಾದಿ ಸೇವೆಗಳು ಇನ್ನೂ ಹೆಚ್ಚಾಗಿ ಬಳಕೆದಾರರಿಗೆ ಸಿಗುತ್ತದೆ. ಈ ವರ್ಷದ ಆಫರ್ ನಿಜಕ್ಕೂ ಜಿಯೋ ಬಳಕೆದಾರರಿಗೆ ಭರ್ಜರಿ ಆಫರ್ ಎಂದು ಹೇಳಬಹುದು. ಜಿಯೋ 2099 ರುಗಳ ವರ್ಷದ ಆಫರ್ ಒಂದನ್ನು ಪರಿಚಯಿಸಿದೆ. ಇಷ್ಟು ಮೊತ್ತ ಹೆಚ್ಚಾಯಿತು ಎಂದು ಅನಿಸಬಹುದು ಆದರೆ ಈ ಮೊತ್ತದಲ್ಲಿ ಜಿಯೋ ನಮಗೆ ಸಾಕಷ್ಟು ಸೇವೆಗಳನ್ನು ಒದಗಿಸುವುದರಿಂದಾಗಿ ಇದು ದುಬಾರಿ ಎನಿಸುವುದಿಲ್ಲ. ಇದನ್ನು ಓದಿ.. Technology: ಬಂದೆ ಬಿಡ್ತು, ಬಹು ನಿರೀಕ್ಷಿತ ಬಣ್ಣವನ್ನೇ ಬದಲಾಯಿಸುವ ವಿವೊ ದ ಸ್ಮಾರ್ಟ್ ಫೋನ್: ಬೆಲೆ ಕೇಳಿದರೆ ಇಂದೇ ಕೊಳ್ಳಲು ನಿರ್ಧಾರ ಮಾಡ್ತೀರಾ.

ಮೊದಲು ಇದೇ ಮೊತ್ತದ ಆಫರ್ 365 ದಿನಗಳ ವ್ಯಾಲಿಡಿಟಿ ಹೊಂದಿತ್ತು. ಆದರೆ ಇದೀಗ ಜಿಯೋ ತನ್ನ ಬಳಕೆದಾರರ ಹಿತ ದೃಷ್ಟಿಯಿಂದಾಗಿ ಇದೇ ಮೊತ್ತದ ಆಫರ್ ಅನ್ನು 388 ದಿನಗಳಿಗೆ ವಿಸ್ತರಿಸಿದೆ. ಹೀಗಾಗಿ ಅದೇ ಮೊತ್ತದ ಆಫರ್ ಅನ್ನು 23 ದಿನಗಳ ಕಾಲ ಹೆಚ್ಚಿಗೆ ಬಳಕೆದಾರರು ಬಳಸಿಕೊಳ್ಳಬಹುದು. ಇದಲ್ಲದೆ ಈ ಪ್ಲಾನ್ ಮೂಲಕ ಪ್ರತಿ ದಿನ ವರ್ಷವಿಡೀ 2.5 GB ದೈನಂದಿನ ಡೇಟಾ ಬಳಸಿಕೊಳ್ಳಬಹುದಾಗಿದೆ. ಅಂದರೆ ಈ ಇಡೀ ಆಫರ್ ಮುಗಿಯುವುದರಲ್ಲಿ ನಮಗೆ 912.5gb ಡಾಟಾ ದೊರೆಯುತ್ತದೆ. ಇದಲ್ಲದೆ ಪ್ರತಿನಿತ್ಯವೂ ಅನಿಮಿತ ದೈನಂದಿನ ಕರೆ ಹಾಗೂ ದೈನಂದಿನ 100 ಎಸ್ಎಂಎಸ್ ಗಳ ಸೇವೆಯನ್ನು ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಈ ಆಫರ್ ಮೂಲಕ ಜಿಯೋ ಟಿವಿ ಮಾತ್ರವಲ್ಲದೆ ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ, ಜಿಯೋ ಕ್ಲವ್ಡ್ ಸೌಲಭ್ಯಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗಿದೆ. ಈ ಮೂಲಕ ಬಳಕೆದಾರರು ಯಾವುದೇ ಟೆನ್ಶನ್ ಇಲ್ಲದೆ ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲ ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ. ಇದನ್ನು ಓದಿ.. WhatsApp: ಮೊಬೈಲ್ ನಲ್ಲಿ ವಾಟ್ಸಪ್ಪ್ ಮೆಸೇಜ್ ಓದುತ್ತಾರೆ ಎಂಬ ಭಯವೇ?? ಸುಲಭವಾಗಿ ಲಾಕ್ ಮಾಡುವುದು ಹೇಗೆ ಗೊತ್ತೇ??