Kannada News: ಶುರುವಾಯಿತು ಅಸಲಿ ವಾರ್: ರಮ್ಯಾ ಹಾಗೂ ರಶ್ಮಿಕಾ ರವರಲ್ಲಿ ಅಸಲಿ ರಾಣಿ ಯಾರು? ಯಾರು ನಂಬರ್ 1 ??

30

Kannada News: ಇತ್ತೀಚಿಗೆ ನಡೆಸಿದ ಪ್ರತಿಷ್ಠಿತ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ ಕನ್ನಡದ ಟಾಪ್ ನಟಿ ಯಾರು ಎನ್ನುವುದು ತಿಳಿದುಬಂದಿದೆ. ಈ ಸಮೀಕ್ಷೆಯಲ್ಲಿ ಕನ್ನಡದ ಎಲ್ಲಾ ನಟಿಯರನ್ನು ಒಳಗೊಂಡಂತೆ ಬೃಹತ್ ಸಮೀಕ್ಷೆ ನಡೆಸಲಾಗಿತ್ತು. ಎಲ್ಲ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಅಂತಿಮವಾಗಿ ಕನ್ನಡದ ಟಾಪ್ ನಟಿಯರನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿ ನಿಜಕ್ಕೂ ಆಶ್ಚರ್ಯ ತರಿಸುತ್ತದೆ. ಬೇರೆ ಬೇರೆ ಅಂಶಗಳು, ವಿಷಯಗಳನ್ನು ಆಧಾರದಲ್ಲಿ ಇರಿಸಿಕೊಂಡು ಈ ಒಂದು ಅಂತಿಮ ಪಟ್ಟಿ ಇದೀಗ ಬಿಡುಗಡೆಗೊಂಡಿದೆ. ಅಂದ ಹಾಗೆ ಕನ್ನಡದ ನಟಿಯರಲ್ಲಿ ಟಾಪ್ ಒನ್ ಸ್ಥಾನ ಪಡೆದಿರುವ ನಟಿ ಯಾರು ಗೊತ್ತ? ಇದು ಮಾತ್ರವಲ್ಲದೆ ಈ ಸಮೀಕ್ಷೆಯಲ್ಲಿ ಸ್ಯಾಂಡಲ್ವುಡ್ ಕ್ವೀನ್ ಮೋಹಕ ತಾರೆ ರಮ್ಯಾ (Ramya) ಹಾಗೂ ಕರ್ನಾಟಕದ ಕ್ರಶ್ ಎಂದೇ ಕರೆಸಿಕೊಳ್ಳುತ್ತಿದ್ದ ನಟಿ ರಶ್ಮಿಕ ಮಂದಣ್ಣ (Rashmika Mandanna) ನಡುವೆ ಬಾರಿ ಪೈಪೋಟಿ ಏರ್ಪಟ್ಟಿದೆ. ಇಬ್ಬರು ನಟಿಯರ ನಡುವೆ ಮೊದಲ ಸ್ಥಾನಕ್ಕಾಗಿ ವಾರ್ ನಡೆದಿದೆ ಎಂದೇ ಹೇಳಬಹುದು.

Ormax ನಡೆಸಿದ ಸಮೀಕ್ಷೆಯಲ್ಲಿ ಇಂತಹ ವರದಿಯೊಂದು ಹೊರ ಬಿದ್ದಿದೆ. ಈ ವರ್ಷ ಅಂದರೆ 2022ರ ಟಾಪ್ ಫೈವ್ ನಟಿಯರು ಯಾರು ಎನ್ನುವುದರ ಕುರಿತು ಸಮೀಕ್ಷೆ ನಡೆಸಲಾಗಿತ್ತು. ಇದೀಗ ಇದರಲ್ಲಿ ಯಾರ್ಯಾರು ಸ್ಥಾನ ಪಡೆದಿದ್ದಾರೆ ಗೊತ್ತಾ, ಈ ಸಮೀಕ್ಷೆಯಲ್ಲಿ ಮೊದಲ ಸ್ಥಾನವನ್ನು ಪಡೆಯುವ ಮೂಲಕ ರಶ್ಮಿಕ ಮಂದಣ್ಣ (Rashmika Mandanna) ಟಾಪ್ ಒನ್ ನಟಿಯಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಅವರು ಕರ್ನಾಟಕದ ನಂಬರ್ ಒನ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅವರು ಕಿರಿಕ್ ಪಾರ್ಟಿಯ ಮೂಲಕ ಮೊದಲ ಸಿನಿಮಾದಲ್ಲಿ ದೊಡ್ಡ ಸಕ್ಸಸ್ ಕಂಡರು. ಆನಂತರ ಅವರು ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದಲ್ಲದೆ ಸದ್ಯ ರಶ್ಮಿಕ ಮಂದಣ್ಣ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಈ ಮೂಲಕ ಅವರು ಕರ್ನಾಟಕದ ನಂಬರ್ ಒನ್ ನಟಿ ಎಂಬ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನು ಓದಿ..Kannada News: ಈಗಲೂ ಮದುವೆಯಾಗದೆ ಉಳಿದಿರುವ ರವಿಮಾಮನ ಚೆಲುವೆ ನಗ್ಮಾ ರವರ ವಯಸ್ಸು ಎಷ್ಟು ಗೊತ್ತೇ? ಶಾಲಾ ಹುಡುಗಿಯಂತೆ ಕಂಡರೂ ವಯಸ್ಸು ಜಾಸ್ತಿನೇ ಆಯಿತು.

ಇನ್ನೂ ರಶ್ಮಿಕಾ ಮಂದಣ್ಣ ನಂತರ ಮೋಹಕ ತಾರೆ, ಸ್ಯಾಂಡಲ್ವುಡ್ ಕ್ವೀನ್ ಎಂದು ಕರೆಸಿಕೊಳ್ಳುವ ರಮ್ಯಾ ಅವರಿಗೆ ಎರಡನೇ ಸ್ಥಾನ ದೊರೆತಿದೆ. ರಮ್ಯಾ ಸಿನಿಮಾಗಳಲ್ಲಿ ನಟಿಸಿ ಕೆಲವು ವರ್ಷಗಳೇ ಆಗಿವೆ. ಇತ್ತೀಚಿನ ಕೆಲವು ವರ್ಷಗಳಿಂದ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಹೀಗೆದ್ದರೂ ಕೂಡ ರಮ್ಯಾ ಅವರ ಮೇಲೆ ಅಭಿಮಾನಿಗಳಿಗಿರುವ ಪ್ರೀತಿ ಅಭಿಮಾನ ಕಡಿಮೆ ಅಂತೂ ಆಗಿಲ್ಲ. ಅಲ್ಲದೆ ಇತ್ತೀಚಿಗೆ ಮತ್ತೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ ಆಗಿರುವುದರ ಜೊತೆಗೆ ಚಿತ್ರರಂಗದ ಎಲ್ಲಾ ಬೆಳವಣಿಗೆಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಮತ್ತೆ ಅವರು ರಮ್ಯಾ ಸೆಕೆಂಡ್ ಇನ್ನಿಂಗ್ ಶುರು ಮಾಡಲಿದ್ದು ಡಾಲಿ ಧನಂಜಯ್ (Daali Dhananjay) ಅವರ ಜೊತೆಗೆ ಮುಂದಿನ ಚಿತ್ರ ಒಂದರಲ್ಲಿ ನಟಿಸಲಿದ್ದಾರೆ. ಈ ಮೂಲಕ ನಟಿ ರಮ್ಯಾ ಕರ್ನಾಟಕದ ಟಾಪ್ ಟು ನಾಯಕಿಯಾಗಿ ಈ ಸಮೀಕ್ಷೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಮೂರನೇ ಸ್ಥಾನವನ್ನು ನಟಿ ರಚಿತಾ ರಾಮ್ (Rachita Ram) ಪಡೆದುಕೊಂಡಿದ್ದು, ನಾಲ್ಕನೇ ಸ್ಥಾನದಲ್ಲಿ ರಾಧಿಕಾ ಪಂಡಿತ್ (Radhika Pandit) ಇದ್ದಾರೆ. ಇನ್ನು ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ (Srinidhi Shetty) ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನು ಓದಿ.. Kannada News: ಕಷ್ಟ ಪಟ್ಟು ಬೆವರು ಸುರಿಸಿ ತಮನ್ನಾ ರವರು ಸಂಪಾದನೆ ಮಾಡಿರುವ ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ, ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.