Kannada News: ಬಿಗ್ ನ್ಯೂಸ್: ಸಿರಿ ಅಪ್ಪನಿಗೆ ಇರುವ ಕಾಯಿಲೆ ಗೊತ್ತಾಗಿ ಹೋಯ್ತಾ?? ಮುಂದೇನು ಆಗಲಿದೆ ಗೊತ್ತೇ??

21

Kannada News: ಇತ್ತೀಚಿಗೆ ಜೀ ಕನ್ನಡದಲ್ಲಿ ಶ್ರೀರಸ್ತು ಶುಭಮಸ್ತು ಧಾರವಾಹಿ ಶುರುವಾಗಿದೆ. ಇದರಲ್ಲಿ ಮುಖ್ಯ ಪಾತ್ರದಲ್ಲಿ ನಟಿ ಸುಧಾರಾಣಿ (Sudharani) ಅಭಿನಯಿಸುತ್ತಿದ್ದಾರೆ. ವಾರದಿಂದ ವಾರಕ್ಕೆ ಈ ಧಾರಾವಾಹಿಯ ಜನಪ್ರಿಯತೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಅಮ್ಮ ಮಗ, ಅತ್ತೆ ಸೊಸೆಯ ನಡುವಿನ ಅವಿನಾಭಾವ ಸಂಬಂಧವನ್ನು ಈ ಧಾರಾವಾಹಿ ಅದ್ಭುತವಾಗಿ ತೋರಿಸುತ್ತಿದೆ. ವಿಭಿನ್ನ ಕಥೆ, ಹಿನ್ನೆಲೆ, ಪಾತ್ರಧಾರಿಗಳ ಕಾರಣದಿಂದ ಈ ಧಾರಾವಾಹಿ ಇನ್ನಷ್ಟು ಹೆಚ್ಚು ಪ್ರಸಿದ್ಧಿ ಆಗುತ್ತಿದೆ ಎಂದು ಹೇಳಬಹುದು. ಇನ್ನು ಸಿರಿಯ ತಂದೆಗೆ ಮರೆವಿನ ಕಾಯಿಲೆ ಇದೆ. ಈ ರೀತಿಯಾಗಿ ಮರೆವಿನ ಕಾಯಿಲೆ ತನಗೆ ಇರುವುದಾಗಿ ಸಿರಿಯ ತಂದೆ ತುಳಸಿಗೆ ತಿಳಿಸಿದ್ದಾರೆ. ಆದರೆ ಈ ಸತ್ಯ ಸಿರಿಗೇ ಇನ್ನೂ ಗೊತ್ತಾಗಿಲ್ಲ. ಇದೀಗ ತನ್ನ ತಂದೆಯ ಮನೆಗೆ ಬಂದಿರುವ ಸಿರಿಗೆ ಈ ಸತ್ಯ ಗೊತ್ತಾಗುವ ಸಾಧ್ಯತೆ ಹೆಚ್ಚಾಗಿದೆ.

ಇತ್ತೀಚಿಗೆ ಸಿರಿ ಸಮರ್ಥ ಮದುವೆಯಾಗಿದ್ದಾರೆ. ತನ್ನ ತಂದೆಯನ್ನು ಒಬ್ಬರೇ ಬಿಟ್ಟು ಸಿರಿ ತನ್ನ ಗಂಡನ ಮನೆಯಲ್ಲಿ ಇದ್ದಾಳೆ. ಸಿರಿ ತಂದೆಗೆ ವಯಸ್ಸಾಗಿದ್ದು ಕಾಯಿಲೆಗಳು ಕೂಡ ಇವೆ. ಅದರಲ್ಲೂ ಅವರಿಗೆ ಮರಿವಿನ ಕಾಯಿಲೆ ಇದೆ. ಆದರೆ ಇದುವರೆಗೂ ಕೂಡ ಸಿರಿಗೆ ಗೊತ್ತಾಗಿಲ್ಲ. ಈ ಸತ್ಯವನ್ನು ತುಳಸಿಗೆ ಸಿರಿಯ ತಂದೆ ಹೇಳಿಕೊಂಡಿದ್ದಾರೆ, ಅವರು ಸತ್ಯ ಹೇಳಿದ್ದಾರೆ. ಆದರೆ ಇದು ಸಿರಿಗೆ ಗೊತ್ತಿಲ್ಲ ಮತ್ತು ಅದನ್ನು ಅವಳಿಗೆ ಯಾವುದೇ ಕಾರಣಕ್ಕೂ ದಯಮಾಡಿ ಹೇಳಬೇಡಿ ಎಂದು ಅವರು ವಿನಂತಿಸಿಕೊಳ್ಳುತ್ತಾರೆ. ಇದರಂತೆ ತುಳಸಿ ಸಿರಿಗೆ ಇರುವ ಸತ್ಯವನ್ನು ಹೇಳಲಾಗದೆ ಇರಬೇಕಾಗಿದೆ. ಅಲ್ಲದೆ ತುಳಸಿ ಸ್ವತಃ ಸಿರಿಯ ತಂದೆಯನ್ನು ತಾನೇ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದಳು. ಇದನ್ನು ಓದಿ..Kannada News: ಧಾರವಾಹಿ ಯಶಸ್ಸು ಗೊಂಡರು ಬೇಜಾರು ಮಾಡಿಕೊಳ್ಳುತ್ತೇನೆ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ಕಿರಣ್ ರಾಜ್. ಹೇಳಿದ್ದೇನು ಗೊತ್ತೇ??

ಯಾವ ವಿಷಯವೂ ಕೂಡ ಸಿರಿಗೆ ತಿಳಿದಿಲ್ಲ. ಇದೀಗ ಸಿರಿ ತನ್ನ ತಂದೆಯ ಮನೆಗೆ ಬಂದಿದ್ದಾಳೆ. ಅಲ್ಲಿ ಸಿರಿಯ ತಂದೆ ವಾಷಿಂಗ್ ಮಷೀನ್ ಬಿಟ್ಟು ಸ್ವತಹ ತಾವೇ ಕೈಯಲ್ಲಿ ಬಟ್ಟೆ ಒಗೆಯುತ್ತಿರುತ್ತಾರೆ. ಇದನ್ನು ನೋಡಿ ಅವಳಿಗೆ ಬಹಳ ನೋವಾಗುತ್ತದೆ, ಅಲ್ಲದೆ ಅಡುಗೆ ಮನೆಗೆ ಹೋದರೆ ಇಡೀ ಮನೆ ಪೂರ್ತಿ ಎಲ್ಲವೂ ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಜೊತೆಗೆ ಕಾಫಿ ಮಾಡಲು ಹೋದರೆ ಅಲ್ಲಿ ಉಪ್ಪು ಸಕ್ಕರೆ ಎಲ್ಲಾ ಬೆರೆಸಲಾಗಿರುತ್ತದೆ. ಇದೆಲ್ಲವನ್ನು ನೋಡಿ ಸಿರಿಗೆ ಅನುಮಾನ ಮೂಡಿದೆ. ತನ್ನ ತಂದೆಗೆ ಏನಾಗಿದೆ ಎಂದು ಚಿಂತೆ ಶುರುವಾಗಿದೆ. ಅಲ್ಲದೆ ತಂದೆಗೆ ಇರುವ ಮರೆವಿನ ಕಾಯಿಲೆ ಗೊತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಸಿರಿ ತನ್ನ ತಂದೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಕೇಳುತ್ತಾಳೆ. ಆದರೆ ಇದಕ್ಕೆ ಅವರು ಒಪ್ಪುವುದಿಲ್ಲ. ಇದನ್ನು ಓದಿ.. Biggboss Kannada: ನಿಜವಾಗಲೂ ಬಿಗ್ ಬಾಸ್ ಮನೆಯಿಂದ ಅನುಪಮಾ ರವರು ಹೊರಬರಲು ಕಾರಣ ಏನು ಗೊತ್ತೇ?? ಹಿಂದಿರುವ ಕಾರಣ ಏನು ಗೊತ್ತೇ?