IPL 2023: ಕೋಟಿ ಕೋಟಿ ಖರ್ಚು ಮಾಡಿ ಆರ್ಸಿಬಿ ತಂಡಕ್ಕೆ ದಾಂಡಿಗನನ್ನು ಸೇರಿಸಿಕೊಂಡದ್ದು ಯಾಕೆ ಗೊತ್ತೇ?? ಈತ ನಿಜಕ್ಕೂ ಯಾರು ಗೊತ್ತೇ??

29

IPL 2023: ಕೊಚ್ಚಿನ್ (Cochin) ನಲ್ಲಿ ನೆನ್ನೆ ಶುರುವಾಗಿರುವ ಐಪಿಎಲ್ ಮಿನಿ ಹರಾಜು (IPL Auction) ಸಾಕಷ್ಟು ಕುತೂಹಲಗಳನ್ನು ಉಂಟುಮಾಡುತ್ತಿದೆ. ನೆನ್ನೆ ಶುರುವಾಗಿರುವ ಈ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಎಲ್ಲ ತಂಡಗಳು ಉತ್ತಮ ಆಟಗಾರರನ್ನು ತಮ್ಮ ತಂಡಕ್ಕೆ ಕೊಂಡುಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಮುಂದಿನ ಐಪಿಎಲ್ ಆವೃತ್ತಿಗಾಗಿ ಆಟಗಾರರ ಭರ್ಜರಿ ಬೇಟೆ ಶುರುವಾಗಿದೆ. ಮಿನಿ ಹರಾಜಿನಲ್ಲಿ ಆರ್ಸಿಬಿ ಸಹ ತನ್ನ ತಂಡಕ್ಕೆ ಅತ್ಯುತ್ತಮ ಆಟಗಾರರನ್ನು ಕೊಂಡುಕೊಳ್ಳುವುದರಲ್ಲಿ ಸಾಕಷ್ಟು ಉತ್ಸುಕತೆಯನ್ನು ತೋರುತ್ತಿದೆ. ಈಗಾಗಲೇ ತಂಡವು ಐವರು ಆಟಗಾರರನ್ನು ಕೊಂಡುಕೊಂಡಿದೆ. ಇದರಲ್ಲಿ ಇಬ್ಬರು ವಿದೇಶಿ ಆಟಗಾರರಿದ್ದು ಅವರಲ್ಲಿ ಒಬ್ಬ ವಿಲ್ ಜಾಕ್ಸ್ (Will Jacks) ಅವರನ್ನು ಆರ್ಸಿಬಿ 3.20 ಕೋಟಿ ರೂ ಕೊಟ್ಟು ಕೊಂಡುಕೊಂಡಿದೆ. ಇಷ್ಟಕ್ಕೂ ಈ ಆಟಗಾರ ಯಾರು ಗೊತ್ತಾ? ಈತನ ಹಿನ್ನೆಲೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತದೆ.

ನೆನ್ನೆ ಶುರುವಾಗಿರುವ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆರ್ಸಿಬಿ ತನ್ನ ತಂಡಕ್ಕೆ ಈಗ ಹೊಸ ಐವರು ಆಟಗಾರರನ್ನು ಸೇರಿಸಿಕೊಂಡಿದೆ. ಇದರಲ್ಲಿ ಮೂವರು ಭಾರತೀಯ ಆಟಗಾರರಿದ್ದು ಇಬ್ಬರು ವಿದೇಶಿ ಪ್ಲೇಯರ್ ಇದ್ದಾರೆ. ಈ ಐವರು ಆಟಗಾರರ ಪೈಕಿ ಅತಿ ಹೆಚ್ಚು ಮೊತ್ತವನ್ನು ಪಡೆದು ಆರ್ಸಿಬಿ ತಂಡಕ್ಕೆ ಸೇರಿರುವುದು ಇಂಗ್ಲೆಂಡ್ ನ ಯುವ ಆಟಗಾರ ಹಾಗೆಯೇ ಆಲ್ ರೌಂಡರ್ ಎಂದೆ ಹೆಸರು ಮಾಡಿರುವ ವಿಲ್ ಜಾಕ್ಸ್. ಹೌದು, 25 ವರ್ಷದ ಯುವ ಆಟಗಾರ ವಿಲ್ ಜಾಕ್ ಅವರನ್ನು ತಂಡವು 3.20 ಕೋಟಿ ರೂ ಕೊಟ್ಟು ಖರೀದಿ ಮಾಡಿದೆ. ಅವರನ್ನು ಕೊಂಡುಕೊಳ್ಳಲು ಎಲ್ಲಾ ತಂಡಗಳು ಸಾಕಷ್ಟು ಉತ್ಸುಕತೆ ಹೊಂದಿದ್ದವು. 1.50 ಕೋಟಿ ಕೋಟಿ ರೂ ಮೂಲ ಬೆಲೆ ಹೊಂದಿದ್ದ ವಿಲ್ ಚಾಕ್ಸ್ ಅವರನ್ನು ಕೊಂಡುಕೊಳ್ಳಲು ಎಲ್ಲಾ ಪ್ರಾಂಚೈಸಿಗಳು ಆಸಕ್ತಿಯನ್ನು ತೋರಿಸಿದವು. ಆದರೆ ಅಂತಿಮವಾಗಿ 3.20 ಕೋಟಿ ರೂ ಬೆಲೆಗೆ ವಿಲ್ ಜಾಕ್ಸ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆರ್ಸಿಬಿ ಯಶಸ್ವಿಯಾಯಿತು. ಇದನ್ನು ಓದಿ..Cricket News: ಪಂದ್ಯ ಗೆಲ್ಲಿಸಿಕೊಡುತ್ತಿದ್ದ ಕಿಲಾಡಿಗೆ ಮತ್ತೆ ಭಾರತ ತಂಡಕ್ಕೆ ಎಂಟ್ರಿ: ಬೆಂಕಿ ಬಿರುಗಾಳಿ ಸೃಷ್ಟಿಸುವ ಆಟಗಾರ ಯಾರು ಗೊತ್ತೇ?

ಇಂಗ್ಲೆಂಡ್ ಪರ ಎರಡು ಟಿ ಟ್ವೆಂಟಿ ಪಂದ್ಯಗಳನ್ನು ಆಡಿರುವ ವಿಲ್ ಜಾಕ್ಸ್ 40 ರನ್ ಗಳನ್ನು ಕಲೆ ಹಾಕಿದ್ದಾರೆ. ಆದರೆ ಸಾಕಷ್ಟು ಟಿ 20 ಲೀಗ್ಗಳನ್ನು ಆಡಿರುವ ಅವರು 95 ಇನ್ನಿಂಗ್ಸ್ ಗಳಲ್ಲಿ 20 ಅರ್ಧ ಶತಕ ಒಂದು ಸೆಂಚುರಿ ಸೇರಿದಂತೆ, ಭರ್ಜರಿ 2532 ರನ್ ಸಿಡಿಸಿದ್ದಾರೆ. ಅಲ್ಲದೆ ಬ್ಯಾಟಿಂಗ್ ಮಾತ್ರವಲ್ಲದೆ 23 ವಿಕೆಟ್ ಕಬಳಿಸಿ ಉತ್ತಮ ಬೋಲರ್ ಎಂದು ಸಹ ಕರೆಸಿಕೊಂಡಿದ್ದಾರೆ. ಈ ಮೂಲಕ ಬೌಲಿಂಗ್ನಲ್ಲೂ ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ಅವರು ಸಾಬೀತು ಮಾಡಿದ್ದಾರೆ. ಇಂಗ್ಲೆಂಡ್ನಲ್ಲಿ ಅವರು ಆಡಿರುವ ಎಲ್ಲ ಪಂದ್ಯಗಳಲ್ಲೂ ಅತ್ಯುತ್ತಮವಾದ ಪ್ರದರ್ಶನ ತೋರಿದ್ದಾರೆ. ಈ ರೀತಿಯ ಅದ್ಭುತ ಹಿನ್ನೆಲೆ ಹೊಂದಿರುವ ಕಾರಣಕ್ಕಾಗಿ ಅವರನ್ನು ಆರ್ಸಿಬಿ ತನ್ನ ಪ್ರಾಂಚೈಸಿಗೆ ಸೇರಿಸಿಕೊಂಡಿದೆ. ಈ ಮೂಲಕ 18 ಆಟಗಾರರಿದ್ದ ತಂಡ 23 ಆಟಗಾರರಿಗೆ ಏರಿಕೆ ಕಂಡಿದೆ. ಈ ಹೊಸ ಆಟಗಾರರ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪಟ್ಟಾಗಿದೆ. ಇದನ್ನು ಓದಿ.. WhatsApp: ಮೊಬೈಲ್ ನಲ್ಲಿ ವಾಟ್ಸಪ್ಪ್ ಮೆಸೇಜ್ ಓದುತ್ತಾರೆ ಎಂಬ ಭಯವೇ?? ಸುಲಭವಾಗಿ ಲಾಕ್ ಮಾಡುವುದು ಹೇಗೆ ಗೊತ್ತೇ??