Kannada News: ಧಾರವಾಹಿ ಯಶಸ್ಸು ಗೊಂಡರು ಬೇಜಾರು ಮಾಡಿಕೊಳ್ಳುತ್ತೇನೆ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ಕಿರಣ್ ರಾಜ್. ಹೇಳಿದ್ದೇನು ಗೊತ್ತೇ??

43

Kannada News: ಕನ್ನಡತಿ (Kannadathi) ಧಾರವಾಹಿಯಲ್ಲಿ ನಾಯಕನ ಪಾತ್ರ ಮಾಡುತ್ತಿರುವ ಕಿರಣ್ ರಾಜ್ (Kiran Raj) ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಧಾರವಾಹಿ ಯಶಸ್ಸುಗೊಂಡರೆ ಬೇಜಾರಾಗುತ್ತದೆ ಎನ್ನುವ ಆಶ್ಚರ್ಯ ಹೇಳಿಕೆಯನ್ನು ನೀಡಿದ್ದಾರೆ. ನಟ ಕಿರಣ್ ರಾಜ್ ಇದೀಗ ಕಿರುತೆರೆಯ ನಂಬರ್ ಒನ್ ಕಲಾವಿದ ಎಂದು ಹೇಳಲಾಗುತ್ತದೆ. ಅಷ್ಟರಮಟ್ಟಿಗೆ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅಲ್ಲದೆ ಕಿರುತೆರೆ ಕಲಾವಿದರ ಪೈಕಿ ಇನ್ಸ್ಟಾಗ್ರಾಮ್ ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ನಟನೆಂದರೆ ಅದು ಕಿರಣ್ ರಾಜ್ ಒಬ್ಬರೇ ಎಂದು ಹೇಳಬಹುದು. ಅಲ್ಲದೆ ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿಯಲ್ಲಿ ಹರ್ಷ ಪಾತ್ರ ಮಾಡುತ್ತಿರುವ ಅವರಿಗೆ ರಾಜ್ಯಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರು ಇತ್ತೀಚಿಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಧಾರವಾಹಿ ಹೆಚ್ಚು ಯಶಸ್ವಿ ಆದರೆ ನನಗೆ ಬೇಜಾರಾಗುತ್ತದೆ ಎನ್ನುವ ಅರ್ಥದ ಹೇಳಿಕೆ ಒಂದನ್ನು ನೀಡಿ ಅಚ್ಚರಿ ಉಂಟು ಮಾಡಿದ್ದಾರೆ.

ನಟ ಕಿರಣ್ ರಾಜ್ ಕೇವಲ ಧಾರವಾಹಿಯ ನಟನೆ ಮಾತ್ರವಲ್ಲದೆ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಅವರು ಈಗಾಗಲೇ ನಟಿಸಿದ್ದು ಇನ್ನೂ ಸಹ ಹಲವಾರು ಚಿತ್ರಗಳಲ್ಲಿ ಅವರು ನಾಯಕನಾಗಿ ನಟಿಸಲು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಅಂದ ಹಾಗೆ ಕಿರಣ್ ರಾಜ್ ಈ ಮೊದಲು ಕೂಡ ಸಾಕಷ್ಟು ರಿಯಾಲಿಟಿ ಶೋ ಮತ್ತು ಧಾರವಾಹಿಗಳಲ್ಲಿ ಭಾಗವಹಿಸಿದ್ದಾರೆ. ಕಿನ್ನರಿ, ದೇವತೆ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ಅವರು ನಾಯಕನಾಗಿ ಬಣ್ಣ ಹಚ್ಚಿದ್ದರು. ಆದರೆ ಅವರಿಗೆ ಕನ್ನಡತಿ ಹರ್ಷನ ಪಾತ್ರ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು ಎನ್ನಬಹುದು. ಅಲ್ಲದೆ ಅವರು ಸತತವಾಗಿ ಕಲರ್ಸ್ ಕನ್ನಡ ನಡೆಸುವ ಅನುಬಂಧ ಪ್ರಶಸ್ತಿಗಳ ಕಾರ್ಯಕ್ರಮದಲ್ಲಿ ಮೂರು ಬಾರಿ ಮೂರು ವರ್ಷವೂ ಜನ ಮೆಚ್ಚಿದ ನಾಯಕನ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದನ್ನು ಓದಿ..Biggboss Kannada: ನಿಜವಾಗಲೂ ಬಿಗ್ ಬಾಸ್ ಮನೆಯಿಂದ ಅನುಪಮಾ ರವರು ಹೊರಬರಲು ಕಾರಣ ಏನು ಗೊತ್ತೇ?? ಹಿಂದಿರುವ ಕಾರಣ ಏನು ಗೊತ್ತೇ?

ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಅವರು ಕನ್ನಡತಿ ಧಾರವಾಹಿಯ ಹರ್ಷನ ಪಾತ್ರ ಎಷ್ಟು ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡಿದೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಈ ಕುರಿತಾಗಿ ಹೇಳುತ್ತಾ ಹರ್ಷನ ಪಾತ್ರಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ, ಅಲ್ಲದೆ ಜನ ನನ್ನನ್ನು ಬಹಳವಾಗಿ ಪ್ರೀತಿಸುತ್ತಾರೆ. ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಆದರೆ ಸಮಸ್ಯೆ ಏನೆಂದರೆ ಬಹುತೇಕ ಜನರು ನಮ್ಮನ್ನು ನಮ್ಮ ಪಾತ್ರವನ್ನು ಬೇರೆ ಬೇರೆಯಾಗಿ ನೋಡುವುದಿಲ್ಲ. ಬದಲಾಗಿ ನನ್ನನ್ನೇ ಹರ್ಷನಾಗಿ ನೋಡುತ್ತಾರೆ. ನಾನು ಹರ್ಷನಲ್ಲ, ನಾನು ಕಿರಣ್ ರಾಜ್. ಆದ್ರೆ ಎಲ್ಲ ಸಮಯದಲ್ಲೂ ಹರ್ಷ ಹೇಗಿದ್ದಾನೋ ಅದರ ಮೇಲೆಯೇ ನನ್ನ ಜೊತೆಗೆ ಪ್ರತಿಕ್ರಿಸುತ್ತಾರೆ. ಇದೊಂದು ನನಗೆ, ಸಮಸ್ಯೆ ಅನಿಸುತ್ತದೆ. ಹೀಗಾಗಿಯೇ ಧಾರವಾಹಿ ಯಶಸ್ಸು ಕಂಡರೆ ನನಗೆ ಇದೊಂದು ಕಾರಣಕ್ಕೆ ಬೇಸರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನು ಓದಿ..Kannada News: ರಶ್ಮಿಕಾ ಕನ್ನಡಕ್ಕೆ ಬರಲ್ಲ ಎಂದು ಕಣ್ಣೀರು ಹಾಕುತ್ತಿದ್ದ ಕನ್ನಡಿಗರಿಗೆ ಸಿಕ್ತು ಸಿಹಿ ಸುದ್ದಿ. ರಶ್ಮಿಕಾ ಸ್ಥಾನವನ್ನು ತುಂಬುವ ನಟಿ ಬಂದಾಯ್ತು. ಯಾರು ಗೊತ್ತೇ?