Kannada News: ದೇಶದಲ್ಲಿ ಮತ್ತೊಂದು ಭರ್ಜರಿ ಡೀಲ್ ಮಾಡಿ ಬಿಟ್ಟ ಅಂಬಾನಿ: ಈ ಬಾರಿ ಮೆಟ್ರೋ ಅನ್ನು ಕೊಂಡದ್ದು ಎಷ್ಟು ಸಾವಿರ ಕೋಟಿಗೆ ಗೊತ್ತೇ??
Kannada News: ವಿವಿಧ ಕಂಪನಿಗಳ ಪ್ರಾಂಚಾಯಿಸಿಗಳು, ಅಂಗಡಿ, ಮಾಲ್ಗಳು, ಇತ್ಯಾದಿ ಸೇವಾ ಕ್ಷೇತ್ರಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಶೇರು ಮತ್ತು ಪಾರುಪಥ್ಯ ಹೊಂದಿರುವ ರಿಲಯನ್ಸ್ ಕಂಪನಿ ಇದೀಗ ತನ್ನ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಮೆಟ್ರೋ ಅನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ರಿಲಯನ್ಸ್ ತೆಗೆದುಕೊಂಡಿದೆ. ಶೇಕಡ 100ರಷ್ಟು ಶೇರನ್ನು ರಿಲಯನ್ಸ್ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಗೆ ಹಾಕಿದ್ದು ಇದೀಗ ಅದರ ಸಂಪೂರ್ಣ ಅಧಿಪತ್ಯವನ್ನು ಸ್ಥಾಪಿಸಿಕೊಂಡಿದೆ. ಇಷ್ಟಕ್ಕೂ ಮೆಟ್ರೋ ಅನ್ನು ಅಂಬಾನಿ ಎಷ್ಟು ಕೋಟಿ ಕೊಟ್ಟು ಕೊಂಡುಕೊಂಡಿದ್ದಾರೆ ಎಂದರೆ ನಿಜಕ್ಕೂ ಶಾಕ್ ಆಗುತ್ತದೆ. ಅಷ್ಟೊಂದು ದುಬಾರಿ ಮೊತ್ತದ ಬಹು ಕೋಟಿ ವೆಚ್ಚವನ್ನು ಸುರಿಸಿ ಇದೀಗ ಅಂಬಾನಿ ಮೆಟ್ರೋ ಕೊಂಡುಕೊಂಡಿದ್ದಾರೆ. ಮೆಟ್ರೋ ಕ್ಯಾಶ್ & ಕ್ಯಾರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪೂರ್ತಿ ಶೇಕಡ 100ರಷ್ಟು ಶೇರನ್ನು ಅವರು ಕೊಂಡುಕೊಂಡಿದ್ದಾರೆ.
ಹೌದು, ಬೇರೆ ಯಾರಿಗೂ ಕೂಡ ಇದರ ಪಾಲು ನೀಡದೆ ಪೂರ್ತಿ ಶೇರನ್ನು ಅವರು ತಮ್ಮದಾಗಿ ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಮೆಟ್ರೋ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ. ನೆನ್ನೆ ನಡೆದ ಸಭೆಯಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಮೆಟ್ರೋ ಇಂಡಿಯಾವನ್ನು ಕೊಂಡುಕೊಳ್ಳುವ ಮೂಲಕ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಿ ಮೆಟ್ರೋ ಮೇಲೆ ತನ್ನ ಅಧಿಪತ್ಯ ಸ್ಥಾಪಿಸಿದೆ. ನೆನ್ನೆ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಅನುಮೋದನೆ ನೀಡಿ ಶೇಕಡ ನೂರರಷ್ಟು ಪಾಲು ಪಡೆದುಕೊಂಡಿದೆ. ಇನ್ನು ಮುಂದೆ ಪ್ರಮುಖ ನಗರಗಳಲ್ಲಿರುವ ಎಲ್ಲಾ ಮೆಟ್ರೋ ಸ್ಟೋರ್ ಗಳು ರಿಲಿಯನ್ಸ್ ರಿಟೇಲ್ ಸ್ಟೋರ್ ಗಳ ಸುಪರ್ದಿಗೆ ಬರಲಿವೆ. ಮೆಟ್ರೋ ಇಂಡಿಯಾ (Metro India) ತನ್ನದೇ ಆದ ರಿಟೇಲ್ ಶಾಪ್ ಮತ್ತು ಕಿರಾಣಿ ಹಾಗೂ ರೆಸ್ಟೋರೆಂಟ್ ಗಳನ್ನು ಹೊಂದಿದ್ದು ಅಗಾಧ ಗ್ರಾಹಕರನ್ನು ಒಳಗೊಂಡಿದೆ. ಇದೀಗ ಈ ಎಲ್ಲಾ ಇಡೀ ವ್ಯವಸ್ಥೆಯು ರಿಲಯನ್ಸ್ ಅಡಿಯಲ್ಲಿ ಬರಲಿದೆ. ಇದನ್ನು ಓದಿ..Technology: ಬಂದೆ ಬಿಡ್ತು, ಬಹು ನಿರೀಕ್ಷಿತ ಬಣ್ಣವನ್ನೇ ಬದಲಾಯಿಸುವ ವಿವೊ ದ ಸ್ಮಾರ್ಟ್ ಫೋನ್: ಬೆಲೆ ಕೇಳಿದರೆ ಇಂದೇ ಕೊಳ್ಳಲು ನಿರ್ಧಾರ ಮಾಡ್ತೀರಾ.

ಮುಕೇಶ್ ಅಂಬಾನಿ (Mukesh Ambani) ಮುಖಂಡತ್ವದ ರಿಲಯನ್ಸ್ ಇದೀಗ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ (Metro Cash and Carry) ಸಂಸ್ಥೆಯ ಶೇಕಡ 100 ಪಾಲು ಪಡೆಯುವ ಮೂಲಕ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ರಾಜ್ಯದ ಪ್ರಮುಖ ನಗರಗಳಲ್ಲಿ ಹಾಗೂ ದೇಶದ ವಿವಿಧ ನಗರಗಳಲ್ಲಿ ತನ್ನ ಅಂಗ ಸಂಸ್ಥೆಗಳನ್ನು ಹೊಂದಿದೆ. ಇದಲ್ಲದೆ ಮೆಟ್ರೋ ಅಡಿಯಲ್ಲಿ ಸಾವಿರಾರು ಜನರು ಉದ್ಯೋಗಿಗಳಿದ್ದಾರೆ. ಇವರೆಲ್ಲರೂ ಇನ್ನು ಮುಂದೆ ರಿಲಯನ್ಸ್ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಂದಹಾಗೆ ಮುಕೇಶ್ ಅಂಬಾನಿ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಯನ್ನು ಬರೋಬ್ಬರಿ 2,850 ಕೋಟಿ ರೂ. ಮೌಲ್ಯಕ್ಕೆ ಕೊಂಡಿದ್ದಾರೆ. ಹೌದು, ಇಷ್ಟು ದೊಡ್ಡ ಮೊತ್ತದ ಒಪ್ಪಂದಕ್ಕೆ ಅವರು ಸಹಿ ಮಾಡುವ ಮೂಲಕ ಸಂಪೂರ್ಣ ಶೇಕಡಾ 100ರಷ್ಟು ಶೇರನ್ನು ಪಡೆದುಕೊಂಡಿದ್ದಾರೆ. ಇದನ್ನು ಓದಿ.. WhatsApp: ಮೊಬೈಲ್ ನಲ್ಲಿ ವಾಟ್ಸಪ್ಪ್ ಮೆಸೇಜ್ ಓದುತ್ತಾರೆ ಎಂಬ ಭಯವೇ?? ಸುಲಭವಾಗಿ ಲಾಕ್ ಮಾಡುವುದು ಹೇಗೆ ಗೊತ್ತೇ??