Biggboss Kannada: ನಿಜವಾಗಲೂ ಬಿಗ್ ಬಾಸ್ ಮನೆಯಿಂದ ಅನುಪಮಾ ರವರು ಹೊರಬರಲು ಕಾರಣ ಏನು ಗೊತ್ತೇ?? ಹಿಂದಿರುವ ಕಾರಣ ಏನು ಗೊತ್ತೇ?
Biggboss Kannada: ನಟಿ ಅನುಪಮಾ ಗೌಡ (Anupama Gowda) ಕಳೆದ ವಾರವಷ್ಟೇ ಬಿಗ್ ಬಾಸ್ (Bigg Boss) ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದರು. ಟಫ್ ಕಂಟೆಸ್ಟೆಂಟ್ ಎಂದು ಕರೆಸಿಕೊಳ್ಳುತ್ತಿದ್ದ ಅನುಪಮಾ ಗೌಡ ಇಷ್ಟು ಬೇಗ ಮನೆಯಿಂದ ಆಚೆ ಬಂದದ್ದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತ್ತು. ಅಲ್ಲದೆ ಅನುಪಮಾ ಅವರನ್ನು ಫಿನಾಲೆ ಸ್ಪರ್ಧಿ ಎಂದೇ ಬಿಂಬಿಸಲಾಗುತ್ತಿತ್ತು. ಆದರೆ ಫಿನಾಲೆಗೂ ಮೊದಲೇ ಅವರು ಮನೆಯಿಂದ ಹೊರ ನಡೆದಿದ್ದಾರೆ. ಇದು ವೀಕ್ಷಕರಿಗೆ ದೊಡ್ಡ ಮಟ್ಟದ ಪ್ರಶ್ನೆಯಾಗಿಯೇ ಎದುರಾಗಿತ್ತು. ಇದೀಗ ಅನುಪಮಾ ಗೌಡ ಅವರು ಎಲಿಮಿನೇಟ್ ಆಗಲು ಪ್ರಮುಖ ಕಾರಣಗಳು ಏನೇನು ಎನ್ನುವುದರ ಕುರಿತಾಗಿ ಚರ್ಚೆಯಾಗುತ್ತಿದೆ. ಇಷ್ಟಕ್ಕೂ ಅನುಪಮಾ ಇಷ್ಟು ಬೇಗ ಮನೆಯಿಂದ ಹೊರಬರಲು ಅವುಗಳೆ ಕಾರಣವಾಗಿವೆ ಎಂದು ಹೇಳಲಾಗುತ್ತಿದೆ.
ನಟಿ ಅನುಪಮಾ ಗೌಡ ಅವರನ್ನು ಫಿನಾಲೆ ಸ್ಪರ್ಧಿ ಎಂದೇ ಭಾವಿಸಲಾಗಿತ್ತು. ಆಟದಲ್ಲಿ, ಮನೆಯವರೊಂದಿಗೆ ಬೆರೆಯುವುದಿರಲಿ, ಟಾಸ್ಕ್, ಮಾತು ಎಲ್ಲದರಲ್ಲಿಯೂ ಕೂಡ ಅನುಪಮಾ ಅತ್ಯುತ್ತಮವಾಗಿದ್ದರು ಎಂದು ಹೇಳಬಹುದು. ಎಲ್ಲವನ್ನು ಸರಿದೂಗಿಸಿಕೊಂಡು, ಎಲ್ಲವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮನೆಯಲ್ಲಿ ಉತ್ತಮ ಆಟಗಾರ್ತಿ ಮತ್ತು ಸ್ಪರ್ಧಿಯಾಗಿ ಅನುಪಮಾ ಗೌಡ ಇದ್ದರು. ಆದರೆ ಆಶ್ಚರ್ಯ ಎಂಬಂತೆ ಕಳೆದ ವಾರದ ಎಲಿಮಿನೇಷನ್ ವೇಳೆ ಅತಿ ಕಡಿಮೆ ವೋಟ್ ಪಡೆದ ಅನುಪಮಾ ಮನೆಯಿಂದ ಹೊರ ನಡೆದಿದ್ದರು. ಇದು ಅವರ ಅಭಿಮಾನಿಗಳಿಗೆ ಶಾಕ್ ನೀಡಿತು. ಅಂದ ಹಾಗೆ ಇದೀಗ ನಟಿ ಅನುಪಮಾ ಗೌಡ ಮನೆಯಿಂದ ಹೊರ ನಡೆಯಲು ಇದ್ದ ಪ್ರಮುಖ ಕಾರಣಗಳು ಏನಾಗಿರಬಹುದು ಎನ್ನುವುದರ ಚರ್ಚೆಯಾಗುತ್ತಿದೆ. ಪ್ರವೀಣರ ವಿಭಾಗದಲ್ಲಿ ಎಂಟ್ರಿ ಕೊಟ್ಟಿದ್ದ ಅವರಿಗೆ ತಮ್ಮ ಅನುಭವವೇ ಮುಳುವಾಯಿತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಕನ್ನಡತಿಯರ ಹವಾ ಕೇವಲ ಕನ್ನಡದಲ್ಲಿ ಮಾತ್ರ ಇಲ್ಲ, ಕಾಶ್ಮೀರ ದಿಂದ ಕನ್ಯಾ ಕುಮಾರಿವರೆಗೂ ಮಿಂಚುತ್ತಿರುವ ಕನ್ನಡತಿಯರು ಯಾರ್ಯಾರು ಗೊತ್ತೆ?

ಎಲ್ಲರನ್ನೂ ಸಮಾನವಾಗಿ ನೋಡಬೇಕು ಎನ್ನುವ ದೃಷ್ಟಿ ಹೊಂದಿದ್ದ ಅನುಪಮಾ ಏನನ್ನು ಹೇಳಬೇಕು ಆ ಮಾತುಗಳನ್ನು ಹೇಳದೆ ಸುಮ್ಮನಾಗಿ ಬಿಡುತ್ತಿದ್ದರು, ಇದು ಕೂಡ ಒಂದು ಕಾರಣವಾಗಿದೆ. ಒಂದು ಗುಂಪಿಗೆ ಮಾತ್ರ ಸೀಮಿತರಾಗಿದ್ದ ಅನುಪಮಾ ಮನೆಯ ಎಲ್ಲ ಸದಸ್ಯರೊಂದಿಗೆ ಅಷ್ಟಾಗಿ ಬೆರೆಯಲಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಹಿಂದಿನ ಸೀಸನ್ ನಲ್ಲಿ ಮಾಡಿದ್ದ ಎಡವಟ್ಟುಗಳು ಈಗಲೂ ಕೂಡ ಮುಳುವಾಯಿತು. ಪ್ರತಿ ಕ್ಷಣವನ್ನು ಕೂಡ ಎಂಜಾಯ್ ಮಾಡಬೇಕು ಎಂದು ಹೇಳುತ್ತಿದ್ದ ಅನುಪಮಾ ಗೌಡ ಎಂಜಾಯ್ ಹೆಸರಿನಲ್ಲಿ ಮೈ ಮರೆತುಬಿಟ್ಟರಾ ಎಂದು ಪ್ರಶ್ನಿಸಲಾಗುತ್ತಿದೆ. ಅಲ್ಲದೆ ಆಗಾಗ ಅನುಪಮಾ ಗೌಡ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದರು. ಟಾಸ್ಕ್ ವಿಷಯ ಬಂದಾಗ ಅವರು ಇನ್ನಷ್ಟು ಪರಿಶ್ರಮ ಹಾಕಬೇಕಿತ್ತು. ಮನರಂಜನೆ ವಿಷಯದಲ್ಲಿಯೂ ಕೂಡ ಅವರು ಇನ್ನಷ್ಟು ಆಕ್ಟಿವ್ ಆಗಿ ಇರಬೇಕಿತ್ತು. ಹೀಗೆ ಸಾಕಷ್ಟು ಸಲಹೆಗಳು ಕೇಳಿ ಬರುತ್ತಿವೆ. ಹೀಗಾಗಿ ಇದೇ ಕಾರಣಗಳಿಂದಾಗಿ ಅನುಪಮಾ ನಿರೀಕ್ಷೆಗೂ ಮೊದಲೇ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಅಭಿಪ್ರಾಯ ಪಡಲಾಗುತ್ತಿದೆ. ಇದನ್ನು ಓದಿ.. Kannada News: ಕನ್ನಡಿಗರಿಗೆ ಬಕೆಟ್ ಇಡಿಯಲು ಮುಂದಾದ ಶಾರುಖ್ ಖಾನ್: ಯಶ್ ಕುರಿತು ಹೇಳಿದ್ದೇನು ಗೊತ್ತೇ? ಈ ಸಮಯದಲ್ಲಿ ಇವೆಲ್ಲ ಬೇಕಿತ್ತಾ??