Kannada News: ಕನ್ನಡತಿಯರ ಹವಾ ಕೇವಲ ಕನ್ನಡದಲ್ಲಿ ಮಾತ್ರ ಇಲ್ಲ, ಕಾಶ್ಮೀರ ದಿಂದ ಕನ್ಯಾ ಕುಮಾರಿವರೆಗೂ ಮಿಂಚುತ್ತಿರುವ ಕನ್ನಡತಿಯರು ಯಾರ್ಯಾರು ಗೊತ್ತೆ?
Kannada News: ನಮ್ಮ ಕರ್ನಾಟಕದ ನಟಿಯರು ಈಗ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಬಾಲಿವುಡ್ ಹೀಗೆ, ಎಲ್ಲಾ ಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಕನ್ನಡತಿಯರು ಭಾಷೆಯ ಬೇಧವಿಲ್ಲದೆ ಎಲ್ಲಾ ಕಡೆ ಮಿಂಚುತ್ತಿರುವುದು ಸಂತೋಷದ ವಿಷಯ. ರಶ್ಮಿಕಾ ಅವರಿಂದ ಶ್ರೀಲೀಲಾವರೆಗು ಬೇರೆ ಭಾಷೆಯಲ್ಲಿ ಮಿಂಚುತ್ತಿರುವ ನಟಿಯರು ಯಾರ್ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ..
ಪೂಜಾ ಹೆಗ್ಡೆ :- ಇವರು ಅಪ್ಪಟ ಮಂಗಳೂರಿನ ಹುಡುಗಿ, ಪೂಜಾ ಹೆಗ್ಡೆ ಅವರು ಮೊದಲಿಗೆ ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಅವರ ಮೊಹೆಂಜೋದಾರೋ ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಇಂದು ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ.
ರಶ್ಮಿಕಾ ಮಂದಣ್ಣ :- ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಶುರುವಾದ ಈ ಜರ್ನಿ ಇಂದು, ನ್ಯಾಷನಲ್ ಕ್ರಶ್ ಆಗಿ, ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ನಟಿ ರಶ್ಮಿಕಾ.
ಕೃತಿ ಶೆಟ್ಟಿ :- ಇವರು ಕೂಡ ಮಂಗಳೂರಿನ ಬೆಡಗಿ, ಉಪ್ಪೇನ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೃತಿ ಶೆಟ್ಟಿ ಅವರು, ಒಂದರ ನಂತರ ಒಂದು ಹಿಟ್ ಸಿನಿಮಾಗಳನ್ನು ನೀಡುತ್ತಾ, ಸ್ಟಾರ್ ನಟಿಯಾಗಿದ್ದಾರೆ.
ನೇಹಾ ಶೆಟ್ಟಿ :- ಮುಂಗಾರು ಮಳೆ2 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ನೇಹಾ ಶೆಟ್ಟಿ ಅವರು, ಮೆಹಬೂಬ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟರು, ಇಂದು ತೆಲುಗಿನಲ್ಲಿ ಸ್ಟಾರ್ ಆಗಿದ್ದಸರೆ.. ಇದನ್ನು ಓದಿ..Kannada News: ಕನ್ನಡ ಚಿತ್ರರಂಗದಲ್ಲಿ ಕಾಲಿಯಾಗಿರುವ ಅಪ್ಪುವಿನ ಸ್ಥಾನವನ್ನು ತುಂಬುವ ನಟ ಯಾರು ಎಂದಿದ್ದಕ್ಕೆ ಶಿವಣ್ಣ ಕೊಟ್ಟ ಉತ್ತರ ಏನು ಗೊತ್ತೇ?

ನಭ ನಟೇಶ್ :- ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅವರ ವಜ್ರಕಾಯ ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟ ನಭಾ ನಟೇಶ್ ಅವರು, ಇಸ್ಮಾರ್ಟ್ ಶಂಕರ್ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟು ಸ್ಟಾರ್ ಆಗಿದ್ದಾರೆ.
ಶ್ರೀಲೀಲಾ :- ಕನ್ನಡದಲ್ಲಿ ಕಿಸ್ ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಅವರು, ತೆಲುಗಿನಲ್ಲಿ ಇದುವರೆಗೂ ನಟಿಸಿರುವುದು ಒಂದು ಸಿನಿಮಾ ಮಾತ್ರ, ಆ ಸಿನಿಮಾ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.
ಅನುಷ್ಕಾ ಶೆಟ್ಟಿ :- ಮಂಗಳೂರಿನ ಹುಡುಗಿ ಅನುಷ್ಕಾ ಶೆಟ್ಟಿ ಅವರು ತೆಲುಗಿನಲ್ಲಿ ಒಳ್ಳೆಯ ಕ್ರೇಜ್ ಹೊಂದಿರುವ ನಟಿ, ಬಾಹುಬಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಪ್ರಣೀತಾ ಸುಭಾಷ್ :- ಡಿಬಾಸ್ ದರ್ಶನ್ ಅವರ ಪೊರ್ಕಿ ಸಿನಿಮಾ ಮೂಲಕ ನಟನೆ ಶುರು ಮಾಡಿದ ಇವರು, ಇಂದು ತೆಲುಗು ತಮಿಳು ಮತ್ತು ಬಾಲಿವುಡ್ ನಲ್ಲೂ ಸ್ಟಾರ್ ಆಗಿದ್ದಾರೆ.
ಸಪ್ತಮಿ ಗೌಡ :- ಕಾಂತಾರ ಸಿನಿಮಾ ಸಪ್ತಮಿ ಗೌಡ ಅವರನ್ನು ಇಂದು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಾಡಿದೆ. ಸಪ್ತಮಿ ಗೌಡ ಅವರಿಗೆ ಈಗ ತಮಿಳು, ತೆಲುಗು ಚಿತ್ರರಂಗದಲ್ಲಿ ಕೂಡ ಭಾರಿ ಬೇಡಿಕೆ ಇದೆ.
ದೀಪಿಕಾ ಪಡುಕೋಣೆ :- ಅಪ್ಪಟ ಬೆಂಗಳೂರಿನ ಹುಡುಗಿ ದೀಪಿಕಾ ಪಡುಕೋಣೆ ಅವರು, ಇಂದು ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ..
ಐಶ್ವರ್ಯ ರೈ :- ಮಂಗಳೂರಿನ ಹುಡುಗಿ ಐಶ್ವರ್ಯ ರೈ ಅವರು ವಿಶ್ವಸುಂದರಿ ಪಟ್ಟ ಗೆದ್ದವರು, ಇಂದು ಬಾಲಿವುಡ್ ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇದನ್ನು ಓದಿ.. WhatsApp: ಮೊಬೈಲ್ ನಲ್ಲಿ ವಾಟ್ಸಪ್ಪ್ ಮೆಸೇಜ್ ಓದುತ್ತಾರೆ ಎಂಬ ಭಯವೇ?? ಸುಲಭವಾಗಿ ಲಾಕ್ ಮಾಡುವುದು ಹೇಗೆ ಗೊತ್ತೇ??