WhatsApp: ಮೊಬೈಲ್ ನಲ್ಲಿ ವಾಟ್ಸಪ್ಪ್ ಮೆಸೇಜ್ ಓದುತ್ತಾರೆ ಎಂಬ ಭಯವೇ?? ಸುಲಭವಾಗಿ ಲಾಕ್ ಮಾಡುವುದು ಹೇಗೆ ಗೊತ್ತೇ??

14

WhatsApp: ಸಾಮಾನ್ಯವಾಗಿ ಈಗ ಆಂಡ್ರಾಯ್ಡ್ ಮೊಬೈಲ್ (Android Mobile) ಬಳಸುವ ಎಲ್ಲರೂ ವಾಟ್ಸಾಪ್ ಹೊಂದಿರುತ್ತಾರೆ. ಎಲ್ಲ ಬಳಕೆದಾರರು ವಾಟ್ಸಾಪ್ ಚಾಟ್ ಮಾಡುತ್ತಾರೆ. ನಿತ್ಯ ಜನರು ವಾಟ್ಸಾಪ್ ಮೊರೆ ಹೋಗುತ್ತಾರೆ. ತಮ್ಮ ಸ್ನೇಹಿತರು, ಬಂಧು ಬಳಗದವರ ಜೊತೆ ಗಂಟೆಗಟ್ಟಲೆ ಚಾಟ್ ಮಾಡುತ್ತಾರೆ. ಅಷ್ಟರಮಟ್ಟಿಗೆ ವಾಟ್ಸಪ್ ಜನರನ್ನು ಆಕರ್ಷಿಸಲು ಯಶಸ್ವಿಯಾಗಿದೆ ಎಂದೇ ಹೇಳಬಹುದು. ವಾಟ್ಸಪ್ ಮೂಲಕ ಧ್ವನಿ ಸಂದೇಶ, ವಿಡಿಯೋ ಸಂದೇಶ, ಟೆಕ್ಸ್ಟ್ ಮೆಸೇಜ್ ಗಳನ್ನು ಮಾಡಬಹುದು. ವಿಡಿಯೋ ಕಾಲ್, ಮಾಹಿತಿ ಹಂಚಿಕೆ, ಲೊಕೇಶನ್, ಫೋಟೋ ಇತ್ಯಾದಿಗಳನ್ನು ಹಂಚಿಕೊಳ್ಳಬಹುದು. ಹೀಗೆ ವಾಟ್ಸಪ್ ನಲ್ಲಿ ಹಲವಾರು ಅನುಕೂಲಗಳಿವೆ. ಅಂದ ಹಾಗೆ ವಾಟ್ಸಪ್ ಬಳಕೆದಾರರಿಗೆ ಅನೇಕ ಫೀಚರ್ಸ್ ನೀಡಿದೆ. ತನ್ನ ಬಳಕೆದಾರರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಅನೇಕ ಅನುಕೂಲಗಳನ್ನು ಮಾಡಿಕೊಟ್ಟಿದೆ ಎಂದು ಹೇಳಬಹುದು. ಇದೀಗ ವಾಟ್ಸಪ್ ನಲ್ಲಿ ತಮ್ಮ ಸಂದೇಶಗಳು ಬೇರೆಯವರಿಗೆ ಲೀಕ್ ಆಗದ ಹಾಗೆ ಸಂರಕ್ಷಿಸಿಕೊಳ್ಳುವ ಪ್ರೈವಸಿ ವಿಧಾನವನ್ನು ಪರಿಚಯಿಸಲಾಗಿದೆ.

ವಾಟ್ಸಾಪ್ ಸಂಸ್ಥೆಯು ತನ್ನ ಬಳಕೆದಾರರ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ಹರಿಸುತ್ತದೆ. ಹೀಗಾಗಿಯೇ ಆಗಾಗ ವಾಟ್ಸಪ್ ಅಪ್ಡೇಟ್ ಮಾಡುತ್ತಾ ಸುರಕ್ಷತೆಯನ್ನು ಇನ್ನಷ್ಟು ಭದ್ರಪಡಿಸುತ್ತದೆ. ಇದೀಗ ವಾಟ್ಸಪ್ ಮತ್ತೆ ಅಪ್ಡೇಟ್ ಆಗಿದ್ದು ಇದರಲ್ಲಿ ತಮ್ಮ ವಾಟ್ಸಪ್ ಖಾತೆಯನ್ನು ಪ್ರೈವೇಸಿ ಲಾಕ್ ಮಾಡಿಕೊಂಡು ಮೂರನೇ ವ್ಯಕ್ತಿ ನಮ್ಮ ಸಂದೇಶಗಳನ್ನು ಕದಿಯದ ಹಾಗೆ ಅಥವಾ ನೋಡದ ಹಾಗೆ ರಕ್ಷಿಸಿಕೊಳ್ಳಬಹುದಾಗಿದೆ. ಈ ವಿಶೇಷ ಫೀಚರ್ ಇತ್ತೀಚಿಗೆ ಅಷ್ಟೇ ಪರಿಚಯಗೊಂಡಿದೆ. ಮೊದಲಿಗೆ ತಾವು ಬಳಸುತ್ತಿರುವ ವಾಟ್ಸಪ್ ಅಪ್ಡೇಟ್ ಆಗಿದೆಯಾ ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅಪ್ಡೇಟ್ ಆಗಿಲ್ಲದಿದ್ದರೆ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ವಾಟ್ಸಾಪ್ ಅಪ್ಡೇಟ್ ವರ್ಷನ್ ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ವಾಟ್ಸಪ್ ತೆಗೆದು ಅದರ ಬಲ ತುದಿಯಲ್ಲಿ ಕಾಣುವ ಮೂರು ಡಾಟ್ಗಳ ಚಿಹ್ನೆ ಒತ್ತಬೇಕು. ಅಲ್ಲಿ ನಮಗೆ ಸೆಟ್ಟಿಂಗ್ಸ್ನ ಹಲವಾರು ಆಪ್ಷನ್ಗಳು ತೆರೆದುಕೊಳ್ಳುತ್ತವೆ. ಅದರಲ್ಲಿ ಪ್ರೈವಸಿ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಇಲ್ಲಿ ನಮಗೆ ಹಲವಾರು ಪ್ರಯೋಜನಗಳನ್ನು ಮಾಡಿಕೊಡಲಾಗಿದೆ. ಇದನ್ನು ಓದಿ..Kannada News: ಇಡೀ ದೇಶವನ್ನೇ ಶೇಕ್ ಮಾಡಿ ಬಿಕಿನಿ ಧರಿಸಿದ್ದ ದೀಪಿಕಾ ಪಡುಕೋಣೆ, ಆ ಬಿಕಿನಿ ಬೆಲೆ ಎಷ್ಟು ಗೊತ್ತೇ? ಯಪ್ಪಾ ತಿಳಿದರೆ ತಲೆ ತಿರುಗುತ್ತದೆ.

ಬಳಕೆದಾರನು ತನ್ನ ವಾಟ್ಸಪ್ ಖಾತೆಗೆ ಲಾಕ್ ಇರಿಸುವ ಸೌಲಭ್ಯವನ್ನು ಈ ಪ್ರೈವೇಸಿ ಆಯ್ಕೆ ನೀಡುತ್ತದೆ. ಇದರಂತೆ ಫಿಂಗರ್ ಪ್ರಿಂಟ್, ನಂಬರ್ ಲಾಕ್, ಪ್ಯಾಟರನ್ ಲಾಕ್ ಹೀಗೆ ಮೂರು ಬೇರೆ ಬೇರೆ ಬಗ್ಗೆಯಲ್ಲಿ ಇಟ್ಟುಕೊಳ್ಳುವ ಸೌಲಭ್ಯ ಒದಗಿಸಲಾಗಿದೆ. ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಅವುಗಳಲ್ಲಿ ಒಂದನ್ನು ಆಯ್ದುಕೊಳ್ಳಬಹುದು. ಫಿಂಗರ್ ಪ್ರಿಂಟ್ ಎಂದರೆ ನಮ್ಮ ಬೆರಳ ಗುರುತಿನ ಅನುಸಾರ ನಾವು ವಾಟ್ಸಪ್ ಗೆ ಲಾಕ್ ಹಾಕಿರಿಸಬಹುದು. ಇನ್ನು ನಂಬರ್ ಲಾಕ್ ನಲ್ಲಿ ಯಾರು ಕೂಡ ಸುಲಭವಾಗಿ ಗುರುತಿಸಲಾಗದ ನಂಬರ್ ಅನ್ನು ಲಾಕ್ ಆಗಿ ಇಟ್ಟುಕೊಳ್ಳಬಹುದು ಅಥವಾ ನಮಗೆ ಮಾತ್ರ ಗೊತ್ತಿರುವಂತೆ ಇರಿಸಿಕೊಳ್ಳಬಹುದು. ಪ್ಯಾಟರ್ ನ ಲಾಕ್ ಇರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದಾಗಿ ನಮ್ಮ ವಾಟ್ಸಪ್ ಯಾವುದೇ ಕಾರಣಕ್ಕೂ ಹ್ಯಾಕ್ ಆಗುವುದಿಲ್ಲ. ನಮ್ಮ ಮಾಹಿತಿಯನ್ನು ಮೂರನೆಯವರು ಕದಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಾಟ್ಸಪ್ ಇಂದ ಇಂತಹ ಫೀಚರ್ ಪರಿಚಯಿಸಿದೆ. ಇದನ್ನು ಓದಿ.. Kannada News: ದಿಡೀರ್ ಎಂದು ಅಭಿಷೇಕ್ ಹಾಗೂ ಅವೀವಾ ರವರನ್ನು ಭೇಟಿ ಆದ ಡಿ ಬಾಸ್ ವಿಜಯಲಕ್ಷ್ಮಿ. ಕೊಟ್ಟ ಉಡುಗೊರೆ ನೋಡಿ ಶಾಕ್.