Kannada News: ಎರಡು ದಿನಗಳು ಆದಮೇಲೆ ಮೊದಲ ಬಾರಿಗೆ ಹೊಸಪೇಟೆ ವಿಡಿಯೋ ಶೇರ್ ಮಾಡಿದ ದಾಸ ಹೇಳಿದ್ದೇನು ಗೊತ್ತೆ?

15

Kannada News: ಮೊನ್ನೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರಿಗೆ ಕಾರ್ಯಕ್ರಮ ಒಂದರಲ್ಲಿ ಚಪ್ಪಲಿ ಎಸೆದ ಘಟನೆ ನಡೆದಿತ್ತು. ಈ ಪ್ರಕರಣದ ಕುರಿತಾಗಿ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಆದರೆ ನಟ ದರ್ಶನ್ ಈ ವಿಷಯವಾಗಿ ಬಹಿರಂಗವಾಗಿ ಏನನ್ನು ಹೇಳಿಕೊಂಡಿರಲಿಲ್ಲ. ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಈ ಪ್ರಕರಣದ ಕುರಿತಾಗಿ ಒಂದು ಮಾತು ಆಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಮೊನ್ನೆ ನಡೆದ ಹೊಸಕೋಟೆ ಕಾರ್ಯಕ್ರಮದ ಕುರಿತಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕೆಲವು ಮಾತುಗಳನಾಡಿದ್ದಾರೆ. ಮೊದಲ ಬಾರಿಗೆ ಇಷ್ಟು ದಿನಗಳ ನಂತರ ಈ ವಿಷಯದ ಕುರಿತಾಗಿ ನಟ ದರ್ಶನ್ ಮಾತನಾಡಿದ್ದಾರೆ.

ಮೊನ್ನೆಯಷ್ಟೇ ನಟ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ಕ್ರಾಂತಿಯ ಎರಡನೇ ಹಾಡನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹೊಸಪೇಟೆ (Hospet) ತಾಲೂಕಿನಲ್ಲಿ ಈ ಒಂದು ಕಾರ್ಯಕ್ರಮವನ್ನು ನಡೆಸಲಾಗಿತ್ತು. ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಮೊದಲಿಗೆ ನಟ ದರ್ಶನ್ ರವರು ಪುನೀತ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ ನಂತರ ಮಾತನಾಡಿದರು. ಹಾಗೆಯೇ ಇಡೀ ಚಿತ್ರತಂಡವು ಕೂಡ ಚಿತ್ರದ ಬಗ್ಗೆ ಮಾತನಾಡಿದ್ದು, ಇದೇ ವೇಳೆ ವೇದಿಕೆ ಮೇಲೆ ಎಲ್ಲ ಗಣ್ಯರು ನಿಂತಿದ್ದಾಗ ರಚಿತಾರಾಮ್ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಅವರ ಪಕ್ಕದಲ್ಲಿ ನಿಂತಿದ್ದ ದರ್ಶನ್ ಅವರ ಮೇಲೆ ಜನರು ನಿಂತಿದ್ದ ಕಡೆಯಿಂದ ಚಪ್ಪಲಿಯೊಂದು ತೂರಿ ಬಂದಿತ್ತು. ಜನರ ಮಧ್ಯೆ ಇಂದ ಬಂದಿದ್ದ ಚಪ್ಪಲಿ ನೇರವಾಗಿ ದರ್ಶನ್ ಅವರ ಮುಖ ಮತ್ತು ಕೆನ್ನೆಗೆ ತಾಕಿ ಕೆಳಗೆ ಬಿದ್ದಿತ್ತು. ಇದೊಂದು ಪ್ರಕರಣ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಕಲಾವಿದರ ಜೊತೆಗೆ ಹೀಗೆ ನಡೆದುಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಓದಿ..WhatsApp: ಮೊಬೈಲ್ ನಲ್ಲಿ ವಾಟ್ಸಪ್ಪ್ ಮೆಸೇಜ್ ಓದುತ್ತಾರೆ ಎಂಬ ಭಯವೇ?? ಸುಲಭವಾಗಿ ಲಾಕ್ ಮಾಡುವುದು ಹೇಗೆ ಗೊತ್ತೇ??

ಆದರೆ ಇದುವರೆಗೂ ಕೂಡ ಆ ವ್ಯಕ್ತಿ ಯಾರು ಎನ್ನುವ ಸುಳಿವು ಸಿಕ್ಕಿಲ್ಲ. ಈ ರೀತಿ ಚಪ್ಪಲಿ ಎಸೆದ ತಕ್ಷಣವೇ ನಟ ದರ್ಶನ್ ಇರಲಿ, ಇರಲಿ ಚಿನ್ನ ಪರ್ವಾಗಿಲ್ಲ. ಇಂಥದ್ದನ್ನು ನಾನು ಸಾಕಷ್ಟು ನೋಡಿದ್ದೇನೆ ಎಂದು ಸೌಮ್ಯವಾಗಿ ನಟ ದರ್ಶನ್ ಉತ್ತರಿಸಿದ್ದರು. ಆದರೆ ಇದೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಅಭಿಮಾನಿಗಳು ಕೆಂಡಮಂಡಲರಾಗಿದ್ದರು. ಇಷ್ಟು ದಿನಗಳ ಕಾಲ ಮೌನವಹಿಸಿದ ನಟ ದರ್ಶನ್ ಇದೀಗ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಈ ಕುರಿತಾಗಿ ಮಾತನಾಡಿದ್ದಾರೆ. ಮೊನ್ನೆ ನಡೆದ ಹೊಸಪೇಟೆ ಕಾರ್ಯಕ್ರಮದ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಹೊಸಪೇಟೆ ಜನತೆಗೆ ಅವರು ಧನ್ಯವಾದ ತಿಳಿಸಿದ್ದಾರೆ. ವಿಡಿಯೋದಲ್ಲಿ ಅಭಿಮಾನಿಗಳ ಕೂಗು, ಅವರ ಸಹಕಾರ, ಕಾರ್ಯಕ್ರಮ, ಹೊಸಪೇಟೆಯ ಜನತೆ ಎಲ್ಲವನ್ನು ಕಾಣಬಹುದಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಧನ್ಯವಾದಗಳು ಎಂದು ನಟ ದರ್ಶನ್ ಬರೆದುಕೊಂಡಿದ್ದಾರೆ. ಇದನ್ನು ಓದಿ.. Kannada News: ಇಡೀ ದೇಶವನ್ನೇ ಶೇಕ್ ಮಾಡಿ ಬಿಕಿನಿ ಧರಿಸಿದ್ದ ದೀಪಿಕಾ ಪಡುಕೋಣೆ, ಆ ಬಿಕಿನಿ ಬೆಲೆ ಎಷ್ಟು ಗೊತ್ತೇ? ಯಪ್ಪಾ ತಿಳಿದರೆ ತಲೆ ತಿರುಗುತ್ತದೆ.