Kannada news: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದ ದರ್ಶನ್ ನಟಿ ವಿಜಯಲಕ್ಷ್ಮಿ: ಚಪ್ಪಲಿ ಎಸೆತದ ಘಟನೆ ಕುರಿತು ಹೇಳಿದ್ದೇನು ಗೊತ್ತೇ??
Kannada News: ನಟ ದರ್ಶನ್ (Darshan) ಅವರಿಗೆ ಹೊಸಪೇಟೆಯಲ್ಲಿ (Hospet) ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದ ಘಟನೆಯ ಬಗ್ಗೆ ಇದೀಗ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi), ಪ್ರತಿಕ್ರಿಯಿಸಿದ್ದಾರೆ. ಇದೊಂದು ಘಟನೆ ಇದೀಗ ರಾಜ್ಯಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದೆ ಎಂದು ಹೇಳಬಹುದು. ಏಕಾಏಕಿ ಕ್ರಾಂತಿ (Kranthi) ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಅವರಿಗೆ ವೇದಿಕೆಯ ಮೇಲೆ ನಿಂತಿದ್ದ ನಟ ದರ್ಶನ್ ಅವರ ಮುಖದ ಮೇಲೆ ಜನರ ಮಧ್ಯೆಯಿಂದ ಯಾರೋ ಚಪ್ಪಲಿ ಎಸೆದ ಘಟನೆ ನಡೆದಿತ್ತು. ಈ ಕುರಿತಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈ ಕುರಿತಾಗಿ ಪ್ರತಿಕ್ರಿಸಿದ್ದಾರೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ದರ್ಶನ್ ರವರ ಪರವಾಗಿ ಮಾತುಗಳನಾಡಿ ಅವರಿಗೆ ಇನ್ನಷ್ಟು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ಇದೀಗ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿಮಾನಿಗಳು ವಿಜಯಲಕ್ಷ್ಮಿ ಅವರ ಈ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಸುತ್ತಿದ್ದಾರೆ. ನಿಮ್ಮಂತಹ ಪತ್ನಿ ಅವರ ಜೊತೆಗೆ ಇರುವವರೆಗೂ ಅವರಿಗೆ ಏನು ಮಾಡಲಾಗುವುದಿಲ್ಲ. ನಮ್ಮ ವಿರೋಧಿಗಳು ಹಿಂದೆಯಿಂದ ಏನೇ ಮಾಡಿದರು ಕೂಡ ಮುಂದೆ ಇಂದ ಎದುರಿಸುವಂತಹ ಧೈರ್ಯ ಅವರಿಗೆ ಇಲ್ಲ. ಹೆಚ್ಚಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.ಇದನ್ನು ಓದಿ..Kannada News: ಬಿಗ್ ನ್ಯೂಸ್: ಅಪ್ಪು ಅಭಿಮಾನಿಗಳು ಕೆರಳಲು ಕಾರಣವೇನು ಗೊತ್ತೇ? ಚಪ್ಪಲಿ ಎಸೆಯುವಷ್ಟು ಮಟ್ಟಕ್ಕೆ ಹೋಗಲು ಇರುವ ಕಾರಣವೇನು ಗೊತ್ತೇ?

ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ವಿಜಯಲಕ್ಷ್ಮಿ ಅವರು “ನಿನ್ನನ್ನು ದ್ವೇಷಿಸುವವರು, ನಿನ್ನನ್ನು ದ್ವೇಷಿಸುವ ಮತ್ತೊಂದು ಗುಂಪಿನ ಜೊತೆಗೆ ಸೇರಿಕೊಂಡು ಬಿಡುತ್ತಾರೆ. ಆದರೆ ನಿನಗೆ ಇದು ಗೊತ್ತೇ ಆಗುವುದಿಲ್ಲ. ಹೇಳಬೇಕೆಂದರೆ ನಿನ್ನನ್ನು ದ್ವೇಷಿಸುವ ಒಂದು ಗುಂಪು, ನಿನ್ನನ್ನು ದ್ವೇಷಿಸುವ ಮತ್ತೊಂದು ಗುಂಪಿನ ಜೊತೆಗೆ ಸೇರಿಕೊಂಡಿರಬಹುದು. ಆದರೂ ಪರಸ್ಪರ ಅವರಿಗೂ ಕೂಡ ಆಗುತ್ತಿರುವುದಿಲ್ಲ. ಆದರೂ ನಿನ್ನ ಕಾರಣದಿಂದ ಅವರು ಒಟ್ಟಿಗೆ ಇರುತ್ತಾರೆ. ಅಂದಮೇಲೆ ನೀನು ಎಷ್ಟು ಶಕ್ತಿವಂತನಾಗಿರಬೇಡ ಯೋಚಿಸು” ಎಂದು ವಿಜಯಲಕ್ಷ್ಮಿ ಅವರು ಬರೆದುಕೊಂಡಿದ್ದಾರೆ. ಇದರ ಜೊತೆಗೆ ದರ್ಶನ್ ಜೊತೆಗೆ ಇರುವ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ದರ್ಶನ್ ಪರವಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇದನ್ನು ಓದಿ..Kannada News: ಕನ್ನಡಿಗರಿಗೆ ಬಕೆಟ್ ಇಡಿಯಲು ಮುಂದಾದ ಶಾರುಖ್ ಖಾನ್: ಯಶ್ ಕುರಿತು ಹೇಳಿದ್ದೇನು ಗೊತ್ತೇ? ಈ ಸಮಯದಲ್ಲಿ ಇವೆಲ್ಲ ಬೇಕಿತ್ತಾ??