Kannada News: ಬಿಗ್ ನ್ಯೂಸ್: ಅಪ್ಪು ಅಭಿಮಾನಿಗಳು ಕೆರಳಲು ಕಾರಣವೇನು ಗೊತ್ತೇ? ಚಪ್ಪಲಿ ಎಸೆಯುವಷ್ಟು ಮಟ್ಟಕ್ಕೆ ಹೋಗಲು ಇರುವ ಕಾರಣವೇನು ಗೊತ್ತೇ?

69

Kannada News: ಮೊನ್ನೆ ಹೊಸಪೇಟೆಯಲ್ಲಿ (Hospet) ನಡೆದ ಕ್ರಾಂತಿ (Kranthi) ಚಿತ್ರದ ಪ್ರಚಾರದ ವೇಳೆ ನಟ ದರ್ಶನ್ (Darshan) ಅವರಿಗೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದಿರುವ ಘಟನೆ ನಡೆದಿತ್ತು. ಈ ಘಟನೆಯ ಕುರಿತಾದ ಚರ್ಚೆ ಹಾಗೂ ಪರವಿರೋಧಗಳು ಇಂದಿಗೂ ಚರ್ಚೆಗಳು ನಡೆಯುತ್ತಲೇ ಇವೆ. ಅಂದಹಾಗೆ ದರ್ಶನ್ ಅವರ ಬಹು ನಿರೀಕ್ಷಿತ ಕ್ರಾಂತಿ ಚಿತ್ರವು ಇದೇ ಜನವರಿ 26ರಂದು ತೆರೆ ಕಾಣುತ್ತಿದೆ. ಹೀಗಾಗಿಯೇ ಚಿತ್ರತಂಡ ಕೊನೆಯ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ರಚಾರದ ಭಾಗವಾಗಿ ಚಿತ್ರತಂಡವು ಹೊಸಪೇಟೆಗೆ ಆಗಮಿಸಿತ್ತು. ಈ ವೇಳೆ ಇಂತಹ ಒಂದು ಘಟನೆ ನಡೆದಿದೆ. ಆದರೆ ಈ ರೀತಿಯ ದುಷ್ಕೃತ್ಯ ನಡೆಯಲು ಹಳೆಯ ಸೇಡುಗಳೇ ಕಾರಣವೆಂದು ಹೇಳಲಾಗುತ್ತಿದೆ. ಈ ಹಿಂದೆ ನಡೆದ ಹಲವಾರು ಘಟನೆಗಳಿಂದ ಪ್ರೇರಿತರಾಗಿಯೇ ದರ್ಶನ್ ಅವರ ಮೇಲೆ ಹೀಗೆ ಚಪ್ಪಲಿ ಎಸೆಯಲಾಗಿದೆ ಎಂದು ತಿಳಿದು ಬಂದಿದೆ. ಅಂದಹಾಗೆ ಆ ಹಳೆಯ ಸೇಡುಗಳು ಏನು ಎನ್ನುವುದನ್ನು ಇಲ್ಲಿ ಹೇಳಲಾಗಿದೆ. ನಟ ದರ್ಶನ್ ಹೇಳಿದ್ದ ಅದೊಂದು ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಅಭಿಮಾನಿಗಳನ್ನು ಹೊಗಳುವ ಬರದಲ್ಲಿ ಅವರು ಪುನೀತ್ (Puneeth Rajkumar) ಅವರ ಬಗ್ಗೆ ಆಡಿದ್ದ ಅದೊಂದು ಮಾತು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಯೌಟ್ಯೂಬ್ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪುನೀತ್ ಸತ್ತ ಮೇಲೆ ಅವರ ಅಭಿಮಾನಿಗಳು ಅವರನ್ನು ಮೆರೆಸುತ್ತಿದ್ದಾರೆ. ಆದರೆ ನಾನು ಬದುಕಿದ್ದಾಗಲೇ ನನ್ನ ಅಭಿಮಾನಿಗಳು ನನಗೆ ಎಲ್ಲವನ್ನು ಕೊಟ್ಟುಬಿಟ್ಟಿದ್ದಾರೆ ಎಂದು ಹೇಳಿದ್ದರು. ತಮ್ಮ ಅಭಿಮಾನಿಗಳನ್ನು ಹೊಗಳುವ ಬರದಲ್ಲಿ ಪುನೀತ್ ಸಾವನ್ನು ಈ ರೀತಿಯಾಗಿ ಹೋಲಿಸಬಾರದಿತ್ತು ಎಂದು ಜನ ಟೀಕಿಸಿದರು. ಈ ಟೀಕೆ ದೊಡ್ಡ ಗಲಭೆಗೂ ಕಾರಣವಾಯಿತು. ಪುನೀತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಇಷ್ಟು ಸಾಲದು ಎಂಬಂತೆ ದರ್ಶನ್ ಅವರ ಅಭಿಮಾನಿಗಳ ಫ್ಯಾನ್ಸ್ ಪೇಜ್ ಒಂದರಲ್ಲಿ ಪುನೀತ್ ಅವರ ಕುರಿತಾಗಿ ಕೀಳು ಮಟ್ಟದಲ್ಲಿ ಟ್ರೋಲ್ ಮಾಡಲಾಗಿತ್ತು. ಅವರ ಸಾವನ್ನು ಸಂಭ್ರಮಿಸುವ ರೀತಿಯಲ್ಲಿ ಪೋಸ್ಟ್ ಹರಿ ಬಿಡಲಾಗಿತ್ತು. ಈ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಅಂದ ಹಾಗೆ ಹೊಸಪೇಟೆಯಲ್ಲಿ ಪುನೀತ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆ ಭಾಗದಲ್ಲಿ ಪುನೀತ್ ಗಿಂತ ಹೆಚ್ಚಿನ ಅಭಿಮಾನಿಗಳನ್ನು ಯಾವ ನಟರು ಹೊಂದಿಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಪುನೀತ್ ಎಂದರೆ ಅಲ್ಲಿನ ಜನರಿಗೆ ಪ್ರಾಣ ಎನ್ನಬಹುದು. ಪುನೀತ್ ಚಿತ್ರ ಬಂದರೆ ಅಲ್ಲಿನ ಜನ ಮದ್ಯ ರಾತ್ರಿಯಲ್ಲಿ ಚಿತ್ರ ನೋಡುತ್ತಾರೆ. ಚಿತ್ರಮಂದಿರಗಳು ತುಂಬಿ ತುಳುಕುತ್ತವೆ. ಈ ವಿಷಯಕ್ಕೆ ಹೊಸಪೇಟೆಯ ಪುನೀತ್ ಅಭಿಮಾನಿಗಳು ಕೂಡ ರೊಚ್ಚಿಗೆದ್ದಿದ್ದರೂ.

ಆದರೆ ತಪ್ಪನ್ನು ಒಪ್ಪಿಕೊಂಡು ಸುಮ್ಮನೆ ಕ್ಷಮೆ ಕೇಳುವುದನ್ನು ಬಿಟ್ಟು ದರ್ಶನ್ ಅಭಿಮಾನಿಗಳು ಈ ವಿಷಯವನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋದರು. ನೀವು ಏನು ಮಾಡೋದಿಕ್ಕೆ ಆಗೋಲ್ಲ, ಏನು ಕಿತ್ತುಕೊಳ್ಳೋಕೆ ಆಗಲ್ಲ ಎಂದೆಲ್ಲ ಬಾಯಿ ಬಡಿದುಕೊಂಡರು. ನಂತರ ಪುನೀತ್ ಅಭಿಮಾನಿಗಳು ಹಾಗಿದ್ದರೆ ಕ್ರಾಂತಿ ಚಿತ್ರವನ್ನು ಹೊಸಪೇಟೆಯಲ್ಲಿ ಹೇಗೆ ಬಿಡುಗಡೆ ಮಾಡುತ್ತೀರಿ ನಾವು ನೋಡುತ್ತೇವೆ ಎಂದರು. ಇದೇ ವಿಷಯವಾಗಿ ಸಾಕಷ್ಟು ವಾದ ವಿವಾದ ನಡೆಯಿತು. ಇನ್ನು ಮೊನ್ನೆ ನಡೆದ ಪ್ರಚಾರ ಕಾರ್ಯಕ್ರಮಕ್ಕೂ ಮೊದಲು ದರ್ಶನ ಅವರ ಬ್ಯಾನರ್ ಗಳನ್ನು ಕೆಲವರು ಕಿತ್ತು ಹಾಕಿದ್ದರು. ನಂತರ ಪುನೀತ್ ಅವರ ಬ್ಯಾನರ್ ಹಾಕಿ ಮೆರವಣಿಗೆಯನ್ನು ಮಾಡಲಾಗಿತ್ತು. ಈ ರೀತಿ ಸಾಕಷ್ಟು ಅಹಿತಕರ ಬೆಳವಣಿಗೆಗಳು ನಡೆದಿತ್ತು. ಆನಂತರ ನೋಡಿ ನಾವು ಇವತ್ತು ಹೊಸಪೇಟೆಯಲ್ಲಿಯೇ ಕಾರ್ಯಕ್ರಮ ಮಾಡುತ್ತಿದ್ದೇವೆ, ನಿಮ್ಮ ಕೈಲಿ ಏನು ಮಾಡುವುದಕ್ಕೆ ಆಗಲಿಲ್ಲ ಎಂದು ಸಹ ದರ್ಶನ್ ಅಭಿಮಾನಿಗಳು ಅಟ್ಟಹಾಸ ಮೆರೆದಿದ್ದರು.

ಆನಂತರ ಪುನೀತ್ ಅಭಿಮಾನಿಗಳು ಇನ್ನಷ್ಟು ರೊಚ್ಚಿಗೆದ್ದರು. ಆದರೆ ದರ್ಶನವರು ಪುನೀತ್ ಪುತ್ತಳಿಗೆ ನಮನ ಸಲ್ಲಿಸಿ ಕಾರ್ಯಕ್ರಮ ಶುರು ಮಾಡಿದಾಗ ಎಲ್ಲವು ಸರಿಹೋಯಿತು ಎಂದೆ ಅಂದುಕೊಂಡಿದ್ದರು. ಕಿಡಿಗೇಡಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಈ ದುಷ್ಕೃತ್ಯ ನಡೆಸಿದ್ದ. ವಾದ ಪ್ರತಿವಾದ ಏನೇ ಇರಲಿ, ಆದರೆ ಕಲಾವಿದನಿಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ. ಅಲ್ಲದೆ ಯಾರದ್ದೋ ಅಭಿಮಾನಿ ಎಂದು ಹೆಸರು ಹೇಳಿಕೊಂಡು ಹೀಗೆ ಮಾಡುವುದು ಆ ನಟನಿಗೂ ಕೂಡ ಮುಜುಗರದ ಸಂಗತಿ. ಯಾರೂ ಕೂಡ ಮತ್ತೊಬ್ಬ ನಟನ ಜೊತೆಗೆ ಹೀಗೆ ನಡೆದುಕೊಳ್ಳಿ ಎಂದು ಹೇಳುವುದಿಲ್ಲ. ಇನ್ನು ಮುಂದೆಯಾದರೂ ನಮ್ಮ ಕನ್ನಡ ಚಿತ್ರರಂಗ ಅಭಿಮಾನಿಗಳ ಗುದ್ದಾಟದಿಂದ ಮುಕ್ತವಾಗಿ ಸ್ಟಾರ್-ವಾರು ಯಾಕೆ? ನಾವು ಒಂದೇ ಇಲ್ಲಿ ಎಂಬ ಪುನೀತ್ ಅವರ ಮಂತ್ರವನ್ನು ಪಾಲಿಸಬೇಕಿದೆ.