Kannada News: ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಕಾರಣ ಯಾರು ಅಂತೇ ಗೊತ್ತೇ?? ಅಹೋರಾತ್ರ ರವರು ಹೇಳಿದ್ದೇನು ಗೊತ್ತೇ??

58

Kannada News: ನಟ ದರ್ಶನ್ ಅವರ ವಿರುದ್ಧ ಅಹೋರಾತ್ರ ಅವರು ಸುಮಾರು ಒಂದು ವಾರದಿಂದ ಕೆಂಡ ಕಾರುತ್ತಿದ್ದಾರೆ. ಡಿಬಾಸ್ ದರ್ಶನ್ ಅವರು ಅದೃಷ್ಟ ದೇವತೆ ಬಗ್ಗೆ ಒಂದು ಹೇಳಿಕೆ ನೀಡಿದ ನಂತರ, ಅವರನ್ನು ತರಾಟೆಗೆ ತೆಗೆದುಕೊಂಡು ವಿಡಿಯೋ ಮಾಡಿದ್ದರು ಅಹೋರಾತ್ರ. ಆಗ ದರ್ಶನ್ ಅವರ ಅಭಿಮಾನಿಗಳು ಇವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪದೇ ಪದೇ ಡಿಬಾಸ್ ಬಗ್ಗೆ ಮಾತನಾಡುತ್ತಾ ವಿಡಿಯೋಗಳನ್ನು ಮಾಡುತ್ತಿದ್ದರು ಅಹೋರಾತ್ರ. ಇದೀಗ ಹೊಸಪೇಟೆಯಲ್ಲಿ ನಡೆದಿರುವ ಘಟನೆ ಬಗ್ಗೆ ಕೂಡ ಅಹೋರಾತ್ರ ವಿಡಿಯೋದಲ್ಲೂ ಮಾತನಾಡಿದ್ದು, ದರ್ಶನ್ ಅವರಿಗೆ ಆ ರೀತಿ ಆಗಲು ಅಭಿಮಾನಿಗಳೇ ಕಾರಣ ಎಂದು ಹೇಳಿದ್ದಾರೆ.

“ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ ಆ ರೀತಿ ನಡೆದಿದ್ದಕ್ಕೆ ಕಾರಣ ಅವರ ಅಭಿಮಾನಿಗಳೇ, ಅದಕ್ಕೆ ದಾಖಲೆ ನನ್ನ ಹತ್ತಿರ ಇದೆ. ಅವರು ಹೇಗೆ ಹೆಣ್ಣಿನ ನಿಂದನೆ ಮಾಡುತ್ತಿದ್ದಾರೆ ಅಂದ್ರೆ, ಅದು ವಿಕೃತ. ಒಂದು ಹೆಣ್ಣು ಭದ್ರವಾಗಿ ಸಿಕ್ಕರೆ, ಅತ್ಯಾಚಾರ ಮಾಡುತ್ತಾರೆ. ಮನೆಯ ಹೆಣ್ಣುಮಕ್ಕಳಿಗೆ ಕಾಲ್ ಮಾಡಿ ಬಯ್ಯುತ್ತಾರೆ. ನನಗೂ ಫೋನ್ ಮಾಡಿ, ಚಪ್ಪಲಿಯಲ್ಲಿ ಹೊಡೀತಿನಿ ಅಂದ್ರು. ಅವರ ಅಟ್ಟಹಾಸ ಹೇಗಿದೆ ಅಂದ್ರೇ, ಕೊನೆಗೆ ಅವರು ಮೆಚ್ಚಿಕೊಂಡಿರುವ ನಟನಿಗೆ ಈ ರೀತಿ ಅಗೋವರೆಗೂ ಅದು ಬಂದು ನಿಂತಿದೆ. ಮಾತು ಶುರು ಮಾಡಿದ್ರೆ ಸಾಕು, ಧೈರ್ಯ ಇದ್ರೆ ಬಾ, ಬೆಂಗಳೂರಿಗೆ ಬಂದು ನಿಂತ್ಕೋ, ಮಂಡ್ಯ ಗೆ ಬಂದು ನಿಂತ್ಕೋ, ಹಾಸನಕ್ಕೆ ಬಾ ಅಂತ ಕರೀತಾರೆ. ಈಗ ಅವರು ಆರಾಧನೆ ಮಾಡುವ ವ್ಯಕ್ತಿ ತಲೆ ಎತ್ತಿ ಓಡಾಡಲು ಆಗದ ಹಾಗೆ ಆಡಿದ್ದಾರೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಅಪ್ಪು ಅಭಿಮಾನಿಗಳು ಕೆರಳಲು ಕಾರಣವೇನು ಗೊತ್ತೇ? ಚಪ್ಪಲಿ ಎಸೆಯುವಷ್ಟು ಮಟ್ಟಕ್ಕೆ ಹೋಗಲು ಇರುವ ಕಾರಣವೇನು ಗೊತ್ತೇ?

“ಅವರು ಪ್ರತಿಯೊಬ್ಬ ಅಭಿಮಾನಿಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದಾರೆ. ಇದು ನಿಜ, ಅವರ ವಾಟ್ಸಾಪ್ ಸರ್ಕಲ್ ನಲ್ಲಿ ಎಲ್ಲಾ ಅಭಿಮಾನಿಗಳು ಇದ್ದಾರೆ. ಇವನು ಆರ್ಡರ್ ಕೊಟ್ರೆ ಸಾಕು, ಅದನ್ನೆಲ್ಲ ಬಿಟ್ಟು ಅಹೋರಾತ್ರನ್ನ ಬೈಯ್ಯೋಣ, ಅದೇನಾಗುತ್ತೆ ಆಗ್ಲಿ ಅಂತ ಮಾಡಿ, ಕೊನೆಗೆ ಈಗ ಏನಾಯ್ತು, ನಮ್ಮನ್ನೆಲ್ಲ ಮೀರಿದ ಶಕ್ತಿ ಇದೆ ಅನ್ನೋದನ್ನ ತಿಳಿದುಕೊಳ್ಳಬೇಕು. ಚಾಮುಂಡಿ ಬೆಟ್ಟಕ್ಕೆ ಅಷ್ಟೊಂದು ಸಲ ಹೋಗೋನು, ದೇವಿಯ ಮೇಲೆ ಭಕ್ತಿ ಇದ್ದರೆ, ಅದೃಷ್ಟ ದೇವತೆ ಬಗ್ಗೆ ಮಾತಾಡ್ತಿಯ, ಅದು ಅಜ್ಞಾನ ಇರಬಹುದು. ಅಜ್ಞಾನದಿಂದ ಏನೋ ಹೇಳಿದೆ ಬಿಟ್ಬಿಡಿ ಅಂತ ಹೇಳೋದು ಬಿಟ್ಟು, ಅದನ್ನ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲಾ ಯಾಕೆ ಬೇಕಿತ್ತು, ಹೊಸಪೇಟೆಗೆ ಬಂದು ಆಡಿಯೋ ಲಾಂಚ್ ಮಾಡ್ತೀವಿ, ಧೈರ್ಯ ಇದ್ರೆ ಏನ್ ಮಾಡ್ತಿರೋ ಮಾಡಿ ಅಂತ ಹೇಳಿ, ಕೊನೆಗೆ ಏನಾಯಿತು. ದುರಂಕಾರದ ಮಾತುಗಳು ಎಲ್ಲಿಂದ ಎಲ್ಲಿವರೆಗೆ ಹೋಯಿತು. ಇದನ್ನೆಲ್ಲ ದಯವಿಟ್ಟು ನಿಲ್ಲಿಸಿ..” ಎಂದು ವಿಡಿಯೋದಲ್ಲಿ ಹೇಳಿದ್ದಾರೆ ಅಹೋರಾತ್ರ. ಇದನ್ನು ಓದಿ.. Kannada news: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದ ದರ್ಶನ್ ನಟಿ ವಿಜಯಲಕ್ಷ್ಮಿ: ಚಪ್ಪಲಿ ಎಸೆತದ ಘಟನೆ ಕುರಿತು ಹೇಳಿದ್ದೇನು ಗೊತ್ತೇ??